Site icon Kundapra.com ಕುಂದಾಪ್ರ ಡಾಟ್ ಕಾಂ

ಸಾಲಿಗ್ರಾಮ: ಕಾಂಗ್ರೆಸ್ ಕಣ್ಮಣಿಗಳು ಅಭಿಯಾನಕ್ಕೆ ಚಾಲನೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ಕೋಟ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಸಾಲಿಗ್ರಾಮ ಗ್ರಾಮೀಣ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ ಕಾಂಗ್ರೆಸ್ ಕಣ್ಮಣಿಗಳು ಸರಣಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಎ. ಕುಂದರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ 50 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯಕರ್ತರಾಗಿ ದುಡಿಯುತ್ತಿರುವವರನ್ನು ಗುರುತಿಸಿ ಗೌರವಿಸುವ ಸಲುವಾಗಿ ಕಾಂಗ್ರೆಸ್ ಕಣ್ಮಣಿಗಳು ಎನ್ನುವ ಸರಣಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಈ ಮೂಲಕ ಪಕ್ಷ ಬಲವರ್ಧನೆ ಜತೆಗೆ ಪಕ್ಷಕ್ಕಾಗಿ ದುಡಿದವರನ್ನು ಗುರುತಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ ಅಮೀನ್ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭ ಹಿರಿಯ ಕಾಂಗ್ರೆಸ್ ಕಾರ್ಯಕರ್ತರಾದ ಬಸವ ಪೂಜಾರಿ ಹಾಗೂ ಕುಸುಮ ಬಸವ ಪೂಜಾರಿ, ರಘು ಭಂಡಾರಿ ಕಾರ್ಕಡ, ಜಿ. ಮೊಹಮ್ಮದ್ ಖಾಶಿಮ್ ಇವರುಗಳನ್ನು ಕಾಂಗ್ರೆಸ್ ಮುಖಂಡ ದಿನೇಶ್ ಹೆಗ್ಡೆ ಮೊಳಹಳ್ಳಿ ಸಮ್ಮಾನಿಸಿದರು.

ಪಕ್ಷದ ಪ್ರಮುಖರಾದ ಅಚ್ಯುತ್ ಪೂಜಾರಿ ಕಾರ್ಕಡ,  ಅಮೃತೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಗಣೇಶ್ ಕೆ. ನೆಲ್ಲಿಬೆಟ್ಟು,  ಸಾಲಿಗ್ರಾಮ ಗ್ರಾಮೀಣ ಕಾಂಗ್ರೆಸ್ ಕಾರ್ಯದರ್ಶಿ ಶೇಖರ್ ಪಿ. ಮರಕಾಲ ಕಾರ್ಕಡ, ವಕೀಲರಾದ ಮೊಹಮ್ಮದ್ ಸುಹಾನ್ ಗುಂಡ್ಮಿ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಮಾಜಿ ಸದಸ್ಯರಾದ ಮಹಾಬಲ ಮಡಿವಾಳ, ರಮೇಶ್ ಮೆಂಡನ್,  ಗಣೇಶ್ ಮೆಂಡನ್ ಬೆಟ್ಲಕ್ಕಿ, ಮಂಜುನಾಥ್ ಪೂಜಾರಿ ಗುಂಡ್ಮಿ, ರಮೇಶ್ ಪೂಜಾರಿ ಮೂಡಹೋಳಿ,  ಶಶಿಧರ್ ಪೂಜಾರಿ ಮೂಡಹೋಳಿ, ರವೀಂದ್ರ ಕಾಮತ್ ಗುಂಡ್ಮಿ ಇದ್ದರು.

Exit mobile version