Site icon Kundapra.com ಕುಂದಾಪ್ರ ಡಾಟ್ ಕಾಂ

ಕೋಟತಟ್ಟು ಪಡುಕರೆ ಹಾಲು ಉತ್ಪಾದಕರ ಮಹಾಸಭೆ, ಕೆಎಂಎಫ್‌ ನಿರ್ದೇಶಕ ಶಿವಮೂರ್ತಿ ಕೆ. ಅಭಿನಂದನೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ಇಲ್ಲಿನ ಕೋಟತಟ್ಟು ಪಡುಕರೆ ಸಹಕಾರಿ ಹಾಲು ಉತ್ಪಾದಕರ ಸಂಘದ ಮಹಾಸಭೆ ಗುರುವಾರ ಪಡುಕರೆ ಸದ್ಯೋಜಾತ ಸಭಾಂಗಣದಲ್ಲಿ ಜರಗಿತು.

ಈ ಸಂದರ್ಭದಲ್ಲಿ ನೂತನವಾಗಿ ಕೆ.ಎಂ.ಎಫ್ ನಿರ್ದೇಶಕರಾಗಿ ಆಯ್ಕೆಗೊಂಡ ಕೆ. ಶಿವಮೂರ್ತಿ ಉಪಾಧ್ಯಾ ಅವರನ್ನು ಸಂಘದ ವತಿಯಿಂದ ವಿಶೇಷವಾಗಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಉಪಾಧ್ಯಕ್ಷ ಭಾಸ್ಕರ್ ಶೆಟ್ಟಿ ಈ ಭಾಗದ ಒರ್ವ ನೈಜ ಹೈನುಗಾರ ಹಾಗೂ ಸಂಘಟಕ ಶಕ್ತಿಯನ್ನು ಕೆ.ಎಂ ಎಫ್ ಗೆ ಆಯ್ಕೆಗೊಳಿಸಿ ಈ ಭಾಗದ ಧ್ವನಿಯಾಗಿ ಕಾರ್ಯನಿರ್ವಹಿಸಲು ಅನುಕೂಲಕರ ವಾತಾವರಣ ಕಲ್ಪಿಸಲಿದೆ ಎಂದರಲ್ಲದೆ ಹೈನುಗಾರಿಕೆಗೆ ಒಕ್ಕೂಟದಿಂದ  ಪ್ರೋತ್ಸಾಹಕ್ಕೆ ಬೇಕಾದ ಅಗತ್ಯ ಕ್ರಮ ಕೈಗೊಳ್ಳಲು ಸಲಹೆ ನೀಡಿದರು.

ಹೈನುಗಾರಿಕೆ ವೃತ್ತಿಯಿಂದ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂಬುವುದನ್ನು ಇತ್ತೀಚಿಗಿನ ಅಧ್ಯಯನದ ಮೂಲಕ ತಿಳಿದು ಬಂದಿದೆ. ಈ ದಿಸೆಯಲ್ಲಿ ಹೆಚ್ಚು ಹೆಚ್ಚು ಯುವ ಆಸಕ್ತರು ಹೈನುಗಾರಿಕೆಯಲ್ಲಿ ತೊಡಗಿಕೊಳ್ಳುವಂತೆ ಕರೆ ನೀಡಿದರು.

ಸಭೆಯ ಅಧ್ಯಕ್ಷತೆಯನ್ನು ಕೋಟತಟ್ಟು ಪಡುಕರೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಶಿವಮೂರ್ತಿ ಕೆ. ವಹಿಸಿ ಸಭೆಯನ್ನು ನಡೆಸಿಕೊಟ್ಟರು.

ಸಂಘಕ್ಕೆ ಅತಿ ಹೆಚ್ಚು ಹಾಲು ನೀಡಿದ ಮೂವರನ್ನು ಗುರುತಿಸಿ ಗೌರವಿಸಲಾಯಿತು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸಿ ನಿವೃತ್ತರಾದ ವೀಣಾ ಅವರನ್ನು ಸನ್ಮಾನಿಸಲಾಯಿತು.

ಸಭೆಯಲ್ಲಿ ಒಕ್ಕೂಟದ ವಿಸ್ತರ್ಣಾಧಿಕಾರಿ ಸರಸ್ವತಿ, ಒಕ್ಕೂಟದ ವೈದ್ಯಾಧಿಕಾರಿ ನಿಜಾಮ್ ಪಾಟೇಲ್ ಗಾಣಿಹಾರ್, ನಿರ್ದೇಶಕರಾದ ಜಯರಾಮ ಶೆಟ್ಟಿ, ಕೃಷ್ಣಯ್ಯ ಶೆಟ್ಟಿ, ಪಾರ್ವತಿ, ಸಣ್ಣಕ್ಕ, ದಿನೇಶ್ ಶೆಟ್ಟಿ, ಸುಜಾತ ಶೆಟ್ಟಿ, ಅಕ್ಕಮ್ಮ ಸಿ., ವಿಜಯ ಕುಂದರ್, ಶೈಲಜಾ ಆರ್ ಐತಾಳ್ ಉಪಸ್ಥಿತರಿದ್ದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಮಮತಾ ಕಾರ್ಯಕ್ರಮ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.

Exit mobile version