Site icon Kundapra.com ಕುಂದಾಪ್ರ ಡಾಟ್ ಕಾಂ

ಮಣೂರು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಗೋವುಗಳ ಸರಣಿ ಅಪಘಾತದಿಂದ ಸಾವು

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ಕಳೆದ ಹಲವು ವರ್ಷಗಳಿಂದ ಕೋಟ ಸೇರಿದಂತೆ ವಿವಿಧ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಿಡಾಡಿ ಗೋವುಗಳ ಅಪಘಾತ ಹೆಚ್ಚುತ್ತಿದ್ದು ಈ ಹಿನ್ನಲ್ಲೆಯಲ್ಲಿ ಮಂಗಳವಾರ ನಡುರಾತ್ರಿ ಬಾರಿ ಗಾತ್ರದ ಎನ್ನಲಾದ ವಾಹನವೊಂದು ಎರಡು ಬೀದಿಯಲ್ಲಿರುವ ಬೀಡಾಡಿ ಗೋವುಗಳಿಗೆ ಡಿಕ್ಕಿ ಸಂಭವಿಸಿದ್ದು ಎನ್ನಲಾಗಿದ್ದು ಎರಡು ಗೋವುಗಳ ದೇಹಗಳು ತುಂಡು ತುಂಡಾಗಿ ರಸ್ತೆಯ ಇಕ್ಕೆಲಗಳಲ್ಲಿ ಸೇರಿಕೊಂಡಿದೆ.

ಈ ಹಿನ್ನಲ್ಲೆಯಲ್ಲಿ ಸ್ಥಳೀಯರಿಗೆ ಈ ಮಾಹಿತಿ ತಿಳಿದ ಹಿನ್ನಲ್ಲೆ ಕೋಟದ ಕೀರ್ತೀಶ ಪೂಜಾರಿ ಮತ್ತು ತಂಡ ಅವುಗಳನ್ನು ಸ್ಥಳೀಯ ಸ್ಥಳವೊಂದರಲ್ಲಿ ಮಣ್ಣು ಮಾಡಿದೆ.

ರಾತ್ರಿ ಹೊತ್ತಿನಲ್ಲಿ ಜೆಸಿಬಿ ನೀಡಿದ ನವೀನ್ ಪೂಜಾರಿ ಬಣ್ಣದಬೈಲು ಹಾಗೂ ಸ್ಥಳೀಯ ಯುವಕರಾದ ಸುಮಂತ ದೇವಾಡಿಗ ಹರ್ತಟ್ಟು, ಮನು ಶೆಟ್ಟಿ ಮೊಗೆಬೆಟ್ಟು, ಸುಕಾಂತ ಹರ್ತಟ್ಟು, ನಾಗೇಶ್ ಕಾಂಚನ್ ಹರ್ತಟ್ಟು, ನಾಗೇಶ್ ಬತ್ತಡ ಗುಳ್ಳಾಡಿ ಮತ್ತಿತರರು ಸಹಕರಿಸಿದರು.

Exit mobile version