ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಸಹಕಾರಿ ಕ್ಷೇತ್ರದಲ್ಲಿ ರಾಮಾಂಜನೇಯ ಸೌಹಾರ್ದ ಸಹಕಾರಿ ಸಂಘ ಅಭಿವೃದ್ಧಿಗೆ ಮುನ್ನುಡಿ ಬರೆದು ಹೊಸ ಮೈಲುಗಲ್ಲು ಸ್ಥಾಪಿಸಲು ಅಣಿಯಾಗಿರುವುದು ಶ್ಲಾಘನೀಯ ಎಂದು ನಾಡೋಜ ಡಾ. ಜಿ. ಶಂಕರ್ ಅಭಿಪ್ರಾಯಪಟ್ಟರು.
ಅವರು ಬುಧವಾರ ರಾಮಾಂಜನೇಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಕೋಡಿ ಇದರ ಸಾಸ್ತಾನ ಶಾಖಾ ಕಛೇರಿ ಲೋಕಾರ್ಪಣೆಗೊಳಿಸಿ ಮಾತನಾಡಿ, ಒಂದು ಸಾಮಾನ್ಯವಾಗಿರುವ ಸಹಕಾರಿ ಸಂಘ ಈ ರೀತಿಯಲ್ಲಿ ಯಶಸ್ಸಿನ ಮೆಟ್ಟಿಲೇರಲು ಸಾಧ್ಯವಿದೆ ಎಂಬುವುದನ್ನು ರಾಮಾಂಜನೇಯ ತೊರಿಸಿಕೊಟ್ಟಿದೆ.ಇಂತಹ ಸಂಘಗಳು ಸಮಾಜದ ಒಳಿತಿಗೆ ಮುನ್ನುಡಿ ಬರೆಯಲಿ ಎಂದು ಶುಭಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಮಾಂಜನೇಯ ಸಂಘದ ಅಧ್ಯಕ್ಷ ಶಂಭು ಪೂಜಾರಿ ವಹಿಸಿದ್ದರು. ವಿದ್ವಾನ್ ಡಾ. ವಿಜಯ ಮಂಜರ್ ಶುಭಾಶಂಶನೆಗೈದರು.
ಭದ್ರತಾಕೋಶವನ್ನು ಉದ್ಯಮಿ ಲಕ್ಷ್ಮೀನಾರಾಯಣ , ಗಣಕೀಕೃತ ಬ್ಯಾಂಕಿಂಗ್ ಸೌಲಭ್ಯವನ್ನು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಬೆಂಗಳೂರು ಇದರ ನಿರ್ದೇಶಕ ಮಂಜುನಾಥ್ ಎಸ್. ಕೆ, ಠೇವಣಿ ಪತ್ರವನ್ನು ಗೋಳಿಗರಡಿ ದೈವಸ್ಥಾನದ ಮುಖ್ಯಸ್ಥ ಜಿ.ವಿಠ್ಠಲ್ ಪೂಜಾರಿ, ಆವರ್ತನ ಠೇವಣಿಯನ್ನು ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಡಾ.ಕೃಷ್ಣ ಕಾಂಚನ್, ನಿರಖು ಠೇವಣಿಪತ್ರವನ್ನು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ.ಕೊರಗ ಪೂಜಾರಿ ಚಾಲನೆ ನೀಡಿದರು.
ಮುಖ್ಯ ಅಭ್ಯಾಗತರಾಗಿ ಸಾಸ್ತಾನ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಸುರೇಶ್ ಅಡಿಗ,ಸಿಇಒ ವಿಜಯ ಪೂಜಾರಿ, ಕಟ್ಟಡದ ಮಾಲಿಕರಾದ ಉಮೇಶ್ ಪ್ರಭು, ಪಾಂಡೇಶ್ವರ ಗ್ರಾಮಪಂಚಾಯತ್ ಅಧ್ಯಕ್ಷೆ ಸುಶೀಲ ಪೂಜಾರಿ, ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟದ ಅಧ್ಯಕ್ಷ ಅಂಪಾರು ಜಗನಾಥ್ ಜಗನಾಥ ಶೆಟ್ಟಿ, ಸಿಇಒ ಲೋಹಿತ್ ಜಿ ಸಾಲಿಯಾನ್, ಮಾಜಿ ತಾ.ಪಂ ಅಧ್ಯಕ್ಷೆ ಜ್ಯೋತಿ ಉದಯ್ ಕುಮಾರ್ ಉಡುಪಿ ಜಿಲ್ಲಾ ಸೌಹಾರ್ದ ಅಭಿವೃದ್ಧಿ ಅಧಿಕಾರಿ ಕ.ರಾ.ಸೌ.ಸಂ.ಸ. ನಿ ಬೆಂಗಳೂರು ವಿಜಯ ಬಿ.ಎಸ್, ಕೋಡಿ ಮಾಧವ ಉಪಾಧ್ಯ , ವೇದಮೂರ್ತಿ ಸುಬ್ರಹ್ಮಣ್ಯ ಭಟ್, ಋಷಿಕುಮಾರ್ ಮಯ್ಯ, ವಿಘ್ನೇಶ್ವರ ಚಡಗ, ಶಿವ ಎಸ್ ಕಕೇರ, ಗೋಪಾಲ ಎ ಮೆಂಡನ್, ಡಾ. ಹೇಮಂತ್ ಕುಮಾರ್, ಡಾ. ಕರುಣಾಕರ, ಆನಂದ್ ಆಶಿತಾ ಎಂಟರ್‌ಪ್ರೈಸಸ್, ಶಂಕರ್ ಪಾತ್ರಿಗಳು, ವಿಠ್ಠಲ್ ಪೂಜಾರಿ ಐರೋಡಿ, ಸುರೇಶ್ ಕುಂದರ್, ಅನಿಲ್, ನಂದಿನಿ, ಸರಿತಾ, ಗಿರೀಶ್ ಪೈ ಬಿ., ಪ್ರತಾಪ್ ಶೆಟ್ಟಿ, ಎಮ್.ಸಿ. ಚಂದ್ರಶೇಖರ , ರೊನಾಲ್ಡ್ ಅಂದ್ರಾದೆ, ವೆಂಕಟೇಶ್ ಪೈ.ಜಿಲ್ಲೆಯ ವಿವಿಧ ಸೌಹಾರ್ದ ಸಂಘಗಳ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಉಪಸ್ಥಿತರಿದ್ದರು.