Site icon Kundapra.com ಕುಂದಾಪ್ರ ಡಾಟ್ ಕಾಂ

ಅನಾರೋಗ್ಯ ಪೀಡಿತರ ನೆರವಿಗೆ ಧಾವಿಸಿದ ಕೋಟದ ಜೀವನ್‌ ಮಿತ್ರ ಬಳಗ, ಆರ್ಥಿಕ ಸಹಾಯಧನ ಹಸ್ತಾಂತರ

????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ಇಲ್ಲಿನ ಕೋಟದ ಜೀವನ್ ಮಿತ್ರ ಸೇವಾ ಟ್ರಸ್ಟ್ ಅಶಕ್ತರಿಗೆ ಅನಾರೋಗ್ಯ ಪೀಡಿತರಿಗೆ, ಅಪಘಾತಕ್ಕಿಡಾದವರಿಗೆ ಸದಾ ನೆರವು ನೀಡುತ್ತಿರುವ ಸಂಸ್ಥೆ ಈ ಸಂಸ್ಥೆ ಇದೀಗ ತನ್ನೂರಿನ ಅನಾರೋಗ್ಯ ಪೀಡಿತರಾದ ಕೋಟತಟ್ಟು ಪಡುಕರೆಯ ವಿಜಯ ಪೂಜಾರಿಯವರ ನೆರವಿಗಾಗಿ ಕೋಟ, ಸಾಲಿಗ್ರಮ, ಸಾಸ್ತಾನ ಟೋಲ್ ಸೇರಿದಂತೆ ವಿವಿಧ ಭಾಗಗಳಿಗೆ ತೆರಳಿ ನೆರವು ಕ್ರೂಡಿಕರಿಸಿದೆ.

ಇತ್ತೀಚಿಗೆ ಮಣಿಪಾಲದ ಕೆ.ಎಂ.ಸಿಯಲ್ಲಿ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ವಿಜಯ್ ಪೂಜಾರಿ ಅವರ ಚಿಕಿತ್ಸಾ ವೆಚ್ಚಕ್ಕಾಗಿ ಸಂಸ್ಥೆಯ ಕಾರ್ಯಕರ್ತರು ಮತ್ತು ಸ್ನೇಹಿತರು ಸೇರಿಕೊಂಡು ಸುಮಾರು  69,000 ಹಣ ಸಂಗ್ರಹಿಸಿ ಮಾನವೀಯತೆಯ ಮೆರೆದಿದ್ದಾರೆ.

ಇದನ್ನು ಗುರುವಾರ ಕೋಟದ ಅಮೃತೇಶ್ವರಿ ದೇಗುಲದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಕೊಲ್ಲೂರು ಮುಕಾಂಬಿಕೆ ಹಾಗೂ ಕೋಟದ ಅಮೃತೇಶ್ವರಿ ದೇಗುಲದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ ಸಮ್ಮುಖದಲ್ಲಿ ಆ ಕುಟುಂಬದವರಿಗೆ ಹಸ್ತಾಂತರಿಸಿದರು.

ಬುಧವಾರ ಸಾಸ್ತಾನ ಟೋಲ್ ಗೇಟ್ ಬಳಿ ಜೀವನ್ ಮಿತ್ರ ಸೇವಾ ಟ್ರಸ್ಟ್ ಮತ್ತು ವಿಜಯ್ ಪೂಜಾರಿ ಅವರ ಸ್ನೇಹಿತರು ಸೇರಿ ಒಂದು ಸಣ್ಣ ಹಣ ಸಂಗ್ರಹಣಾ ಅಭಿಯಾನವನ್ನು ಹಮ್ಮಿಕೊಂಡಿತು. ಇದು ಕೇವಲ ಹಣ ಸಂಗ್ರಹಕ್ಕಿಂತ ಹೆಚ್ಚಾಗಿ, ಸಂಕಷ್ಟದಲ್ಲಿರುವ ವ್ಯಕ್ತಿಯೊಬ್ಬರಿಗೆ ನೆರವಾಗಬೇಕೆಂಬ ಸಾರ್ವಜನಿಕರ ಆಶಯವನ್ನು ಪ್ರತಿಬಿಂಬಿಸಿತು. ಕ್ಷಣಾರ್ಧದಲ್ಲಿ ಆ ಸ್ಥಳವು ನೂರಾರು ಜನರ ಸೇವಾ ಕೇಂದ್ರವಾಯಿತು. ವಾಹನಗಳಲ್ಲಿ ಪ್ರಯಾಣಿಸುವವರು, ರಸ್ತೆಯ ಪಕ್ಕದಲ್ಲಿ ನಡೆದುಹೋಗುವವರು, ಎಲ್ಲರೂ ತಮ್ಮ ಕೈಲಾದಷ್ಟು ಹಣವನ್ನು ಹುಂಡಿಯಲ್ಲಿ ಹಾಕಿ ಮಾನವೀಯತೆಗೆ ಸ್ಪಂದಿಸಿದರು.ಈ ಕಾರ್ಯಕ್ಕೆ ಸಾರ್ವಜನಿಕರಿಂದ ಶ್ಲಾಘನೆ ಪ್ರಶಂಸೆ ಕೂಡಾ ವ್ಯಕ್ತವಾಯಿತು.

ಕೋಟ ಅಮೃತೇಶ್ವರಿ ದೇಗುಲದ ಟ್ರಸ್ಟಿ ಚಂದ್ರ ಆಚಾರ್ ಮಾತನಾಡಿ, ಕೋಟ ಭಾಗದಲ್ಲಿ ಯಾವುದೇ ತುರ್ತು ಪರಿಸ್ಥಿತಿ ಬಂದಾಗ ತಕ್ಷಣ ನೆರವಿಗೆ ಧಾವಿಸುವ ಒಂದು ಸಂಸ್ಥೆ ಇದೆ ಎಂದಾದರೆ ಅದು ಜೀವನ್ ಮಿತ್ರ. ಇಂತಹ ಸಂಸ್ಥೆಯು ನಮ್ಮೂರಿನ ಭಾಗವಾಗಿರುವುದಕ್ಕೆ ನಾವು ಹೆಮ್ಮೆಪಡುತ್ತೇವೆ” ಎಂದು ಹೇಳಿದರು. ಜೀವನ್ ಮಿತ್ರ ಸೇವಾ ಟ್ರಸ್ಟ್ ಮುಖ್ಯಸ್ಥ ನಾಗರಾಜ್ ಪುತ್ರನ್ ಅವರು ಮಾತನಾಡಿ, ಈ ಅಭಿಯಾನದಲ್ಲಿ ಭಾಗವಹಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕೋಟ ಅಮೃತೇಶ್ವರಿ ದೇಗುಲದ ಮಾಜಿ ಟ್ರಸ್ಟಿ ಚಂದ್ರ ಪೂಜಾರಿ, ಜೀವನ್ ಮಿತ್ರ ಬಳಗದ ನಾಗೇಂದ್ರ ಪುತ್ರನ್ ಕೋಟ, ವಸಂತ ಸುವರ್ಣ ಕೋಟ, ಗ್ರಾಮ ಪಂಚಾಯತ್ ಸದಸ್ಯರಾದ ಪ್ರದೀಪ್ ಪಡುಕೆರೆ, ನಾಗರಾಜ್ ಸಾಹೇಬರಕಟ್ಟೆ, ಪ್ರದೀಪ್ ಮೆಂಡನ್, ರಾಕೇಶ್ ಹಂದಟ್ಟು, ಭರತ್ ಗಾಣಿಗ, ಸುರೇಶ್ ಗಾಣಿಗ, ಧನುಷ್ ವಡ್ಡರ್ಸೆ, ಕಿಶೋರ್ ಶೆಟ್ಟಿ ಚಿತ್ರಪಾಡಿ ಹಾಗೂ ಇತರರು ಉಪಸ್ಥಿತರಿದ್ದರು.

Exit mobile version