ಕುಂದಾಪ್ರ ಡಾಟ್ ಕಾಂ ಸುದ್ದಿ.
ಬ್ರಹ್ಮಾವರ: ಮನೆಯೊಂದರಲ್ಲಿ ಹಣವನ್ನು ಪಣವನ್ನಾಗಿರಿಸಿ ಅಂದರ್ ಬಾಹರ್ ಇಸ್ವೀಟ್ ಜುಗಾರಿ ಆಟುತ್ತಿದ್ದ ಸ್ಥಳಕ್ಕೆ ಬ್ರಹ್ಮಾವರ ಪೊಲೀಸರು ದಾಳಿ ನಡೆಸಿ ಹನ್ನೊಂದು ಮಂದಿ ಜುಗಾರಿಕೋರರನ್ನು ಬಂಧಿಸಿದ ಘಟನೆ ಇತ್ತಿಚಿಗೆ ನಡೆದಿದೆ.
ನೀಲಾವರ ಗ್ರಾಮದ ಮನೆಯಲ್ಲಿ ಹಣವನ್ನು ಪಣವನ್ನಾಗಿಟ್ಟು ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಟ ಆಡುತ್ತಿರು ಮಾಹಿತಿ ಆಧರಿಸಿ ಬ್ರಹ್ಮಾವರ ಪೊಲೀಸ್ ಉಪನಿರೀಕ್ಷಕ ಅಶೋಕ್ ಮಾಳಾಬಗಿ ಮತ್ತು ಸಿಬ್ಬಂದಿಗಳು ಶುಕ್ರವಾರ ರಾತ್ರಿ7:30ರ ವೇಳೆ ದಾಳಿ ನಡೆಸಿದ್ದಾರೆ. ಈ ವೇಳೆ ಆರೋಪಿಗಳಾದ ನೀಲಾವರದ ಸದಾಶಿವ ದೇವಾಡಿಗ (48), 52 ಹೇರೂರಿನ ಪ್ರಸನ್ನ(43) ರಜಾಕ್(55), ಚೇರ್ಕಾಡಿಯ ಭಾಸ್ಕರ(48), ಕೊಡವೂರಿನ ಅಶೋಕ(47), ಉದ್ದಿನಹಿತ್ಲು ಕೊಡವೂರು ಗ್ರಾಮ, ತೆಂಕನಿಡಿಯೂರಿನ ಹರೀಶ್ ನಾಯ್ಕ(35), ಪುತ್ತೂರು ಗ್ರಾಮದ ಚಂದ್ರಹಾಸ (40), ಬೇಳೂರು ಗ್ರಾಮದ ರವಿಕುಮಾರ(57), ಚೇರ್ಕಾಡಿಯ ಶಶಿಕಾಂತ (36), ಕುಕ್ಕುಂಜೆಯ ಆನಂದ ಕೋಟ್ಯಾನ (63), ಚೇರ್ಕಾಡಿಯ ಸಂಪತ್ (37) ಎಂಬರುಗಳನ್ನು ವಶಕ್ಕೆ ಪಡೆದಿದ್ದಾರೆ,
ಆರೋಪಿಗಳು ಅಂದರ್ ಬಾಹರ್ ಇಸ್ಫಿಟ್ ಜುಗಾರಿ ಆಡುತ್ತಿರುವ ಬಗ್ಗೆ ತಮ್ಮ ತಪ್ಪನ್ನು ಒಪ್ಪಿಕೊಂಡಿರುತ್ತಾರೆ. ನಂತರ ಅವರಿಂದ ಅಂದರ್-ಬಾಹರ್ ಆಟಕ್ಕೆ ಬಳಸಿದ ತಲಾ ಒಟ್ಟು ನಗದು ರೂ. ರೂ. 20,900/-, ಇಸ್ಪೀಟು ಎಲೆಗಳು-52, ಫೈಬರ್ ರೌಂಡ್ ಟೇಬಲ್-1, ಪ್ಲಾಸ್ಟಿಕ್ ಕುರ್ಚಿಗಳು-12, ಮೊಬೈಲ್ ಪೋನ್ ಗಳು -11, ಮೂರು ಕಾರು, ನಾಲ್ಕು ದ್ವಿಚಕ್ರ ವಾಹನಗಳನ್ನು ಸ್ವಾಧೀನಕ್ಕೆ ಪಡೆದು ಕೊಂಡು ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

