ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಇಲ್ಲಿನ ಕೋಡಿ ಕನ್ಯಾಣ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸಂಘದ ವಠಾರದಲ್ಲಿ ಸಂಘದ ಅಧ್ಯಕ್ಷ ಪ್ರಭಾಕರ ಮೆಂಡನ್ ಅಧ್ಯಕ್ಷತೆಯಲ್ಲಿ ಇತ್ತೀಚಿಗೆ ನಡೆಯಿತು.
ಸಭೆಯಲ್ಲಿ ಒಕ್ಕೂಟದ ವಿಸ್ತರಣಾಧಿಕಾರಿಗಳಾದ ಸರಸ್ವತಿ ಮೇಡಮ್ ಒಕ್ಕೂಟದಿಂದ ಹೈನುಗಾರಿಕೆಗೆ ಸಿಗುವ ಸೌಲಭ್ಯಗಳ ಮಾಹಿತಿಯನ್ನು ನೀಡಿದರು.
ಸಂಘದ ಅಧ್ಯಕ್ಷರು ಸಂಘವು ವರದಿ ವರ್ಷದಲ್ಲಿ ಸದಸ್ಯರಿಗೆ 20% ಡಿವಿಡೆಂಟ್ ನೀಡುವುದೆಂದು ಘೋಷಿಸಿದರು ಹಾಗೂ ಹಾಲಿನ ಪ್ರಮಾಣ ಹೆಚ್ಚಿಗೆ ಮಾಡುವ ಬಗ್ಗೆ ಹೈನುಗಾರಿಕೆ ಮಾಡಲು ಪ್ರೋತ್ಸಾಹ ಪೂರಕವಾಗುವ ಎಲ್ಲಾ ಕಾರ್ಯಕ್ರಮ ಕೈಗೊಳ್ಳಲು ಸಂಘದ ಆಡಳಿತ ಮಂಡಳಿ ಸಿದ್ಧವಿದೆ ಎನ್ನುವ ಭರವಸೆಯನ್ನು ನೀಡಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷೆ ಸುಮತಿ ನಿರ್ದೇಶಕರಾದ ಸದಾಶಿವ ಐತಾಳ್, ರಘುರಾಮ್ ಮೆಂಡನ್, ವಿಶ್ವನಾಥ ಪೂಜಾರಿ, ಲಕ್ಷ್ಮೀ ಮರಕಾಲ್ತಿ, ಕಾವೇರಿ ಉಪಸ್ಥಿತರಿದ್ದರು.
ಸಂಘದ ಕಾರ್ಯದರ್ಶಿ ಉಮೇಶ ಐತಾಳ್ ಸ್ವಾಗತಿಸಿ ಹಾಗೂ ವರದಿಯನ್ನು ಮಂಡಿಸಿದರು. ಸಂಘದ ನಿರ್ದೇಶಕರಾದ ನಾಗೇಂದ್ರ ನಾವಡ ವಂದಿಸಿದರು.

