Site icon Kundapra.com ಕುಂದಾಪ್ರ ಡಾಟ್ ಕಾಂ

ಡಾ. ಶಿವರಾಮ ಕಾರಂತ ಶಿಕ್ಷಕ ಪುರಸ್ಕಾರಕ್ಕೆ ಆಯ್ಕೆಯಾದ ಶಿಕ್ಷಕರ ಪಟ್ಟಿ ಬಿಡುಗಡೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ಕಾರಂತ ಪ್ರತಿಷ್ಠಾನ ಕೋಟ, ಗ್ರಾಮ ಪಂಚಾಯತ್ ಕೋಟತಟ್ಟು, ಹಾಜಿ ಅಬ್ದುಲ್ಲ ಸಾಹೇಬ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಉಡುಪಿ, ಕೋಟ ರೋಟರಿ ಕ್ಲಬ್, ಉಸಿರು ಕೋಟ ಸಾರಥ್ಯದಲ್ಲಿ ಕೊಡಮಾಡುವ ಡಾ. ಶಿವರಾಮ ಕಾರಂತ ಶಿಕ್ಷಕ ಪುರಸ್ಕಾರಕ್ಕೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ಆಯ್ಕೆಯಾಗಿದ್ದಾರೆ.

ಪ್ರಾಥಮಿಕ ವಿಭಾಗ:
ಸಾರಿಕಾ ಶ್ರೀಧರ ಎಸ್. ಐತಾಳ (ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿದ್ದಾಪುರ), ರಾಜೀವ ಶೆಟ್ಟಿ ಎಂ. ( ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೆಟ್ಟಿನಹೊಳೆ ಬೈಂದೂರು), ರೇಖಾ ಪ್ರಭಾಕರ್ (ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೂಲಿಗ್ಗೇರಿ), ಸಾರಿಕಾ (ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ ಬೈಂದೂರು), ಮಂಜುಳಾ ಜಯಕರ (ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೇರೂರು), ಶೈಲಾ ಜಾಯ್ಸ್ ಲೂಯಿಸ್ (ಎಸ್‌ಎಂಎಸ್ ಆಂಗ್ಲಮಾಧ್ಯಮ ಶಾಲೆ ಬ್ರಹ್ಮಾವರ), ಶಾರದಾ (ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಗಂಟುಬೀಳು ಬೆಳೆ), ಕೃಷ್ಣ ನಾಯ್ಕ್‌ (ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆರ್ವಾಶೆ ಮೈನ್), ಶಂಕರ ಪೂಜಾರಿ (ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹುಂಚಾರು ಬೆಟ್ಟು ಕುಂದಾಪುರ), ಕಿರಣ್ ರಾಮ್ ಚಿಲ್ಲೂರ ಬಡ್ಡಿ (ಸರಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆ ಅರಳಿಕಟ್ಟೆ), ಉಷಾ ಹೆಬ್ಬಾರ್ (ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಾಸಾಡಿ ಕುಂದಾಪುರ), ಸವಿತಾ ಬಿಲ್ಲವ (ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ದುಡ್ಡಿನ ಗುಳಿ ಬೈಂದೂರು).

ಪ್ರೌಢಶಾಲಾ ವಿಭಾಗ:
ಕೃಷ್ಣನಾಯ್ ಕೆ. (ಸರಕಾರಿ ಪ್ರೌಢಶಾಲೆ ನಾಲ್ಕೂರು), ಅರ್ಪಣ ಬಾಯಿ ಕೆ. (ಸರಕಾರಿ ಪ್ರೌಢಶಾಲೆ ಬೀಜಾಡಿ), ವಿಶ್ವೇಶ್ ಜಿ. ಎಲ್ (ಡ್ಯೂಯಲ್ ಸ್ಟಾರ್ ಆಂಗ್ಲಮಾಧ್ಯಮ ಶಾಲೆ ಅಮಾಸೆಬೈಲು ), ಸತೀಶ್ ಜಿ. (ಸರಕಾರಿ ಪ್ರೌಢಶಾಲೆ ನುತ್ತೂರು) ರಾಮದಾಸ್ ಬಿ. ನಾಯಕ್ ( ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಮಣೂರು ಪಡುಕೆರೆ) ನಾರಾಯಣ ಪೂಜಾರಿ ಎನ್. (ಸರಕಾರಿ ಪದವಿ ಪೂರ್ವ ಕಾಲೇಜು ಶಿರ್ಲಾಲು ಪ್ರೌಢಶಾಲಾ ವಿಭಾಗ) ಶಕುಂತಳ ಪರ್ಕಳ (ಮಾಧವ ಕೃಪ ಶಾಲೆ ಪರ್ಕಳ ಮಣಿಪಾಲ)ಸುರೇಂದ್ರ ಶೆಟ್ಟಿ (ಬ್ರಾಹ್ಮಿ ದುರ್ಗಾಪರಮೇಶ್ವರಿ ಪ್ರೌಢಶಾಲೆ ಕಮಲಶಿಲೆ).

ಸೆ.28ರ ಭಾನುವಾರ ಅಪರಾಹ್ನ 3.30ಕ್ಕೆ ಕೋಟದ ಕಾರಂತ ಥೀಮ್ ಪಾರ್ಕ್‌ನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಆನಂದ ಸಿ. ಕುಂದ‌ರ್, ಅಧ್ಯಕ್ಷರಾದ ಸತೀಶ್ ಕುಂದರ್ ಬಾರಿಕೆರೆ, ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ಪಿಡಿಓ ರವೀಂದ್ರ ರಾವ್, ಕಾರ್ಯದರ್ಶಿ ಸುಮತಿ ಅಂಚನ್ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version