ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಇಲ್ಲಿನ ಅಭಿವೃದ್ಧಿಯ ಕೊನೆಯ ಹಂತದಲ್ಲಿರುವ ಕೋಟದ ಅಮೃತೇಶ್ವರೀ ದೇಗುಲದ ಸನಿಹದಲ್ಲಿರುವ ವರುಣತೀರ್ಥಕೆರೆಗೆ ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಕಾರ್ಕಳದ ಮೀನುಗಾರಿಗಾ ಉಪನಿರ್ದೇಶಕ ಕಛೇರಿ ನೀಡಿದ ಒಟ್ಟು ನಾಲ್ಕು ಸಾವಿರ ಅಧಿಕ ಮೀನುಗಳನ್ನು ಕೆರೆಗೆ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಕೆರೆಯ ಅಭಿವೃದ್ಧಿ ವೀಕ್ಷಿಸಿದ ಅವರು ಕೆರೆ ಕಾಮಗಾರಿಗೆ ಮೆಚ್ಚುಗೆ ವ್ಯಕ್ತಪಡಿಸಿ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಈ ಕೆರೆ ಪ್ರಮುಖ ಪಾತ್ರ ವಹಿಸಲಿದ್ದು ಇಲ್ಲಿನ ಜನಸಾಮಾನ್ಯರ ಕೃಷಿಕ ಬಹು ವರ್ಷಗಳ ಕನಸು ಸಾಕಾರಗೊಳ್ಳುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕೋಟ ಅಮೃತೇಶ್ವರೀ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ್ ಸಿ. ಕುಂದರ್, ಸದಸ್ಯರಾದ ರತನ್ ಐತಾಳ್, ಚಂದ್ರ ಆಚಾರ್, ಸುಬ್ರಾಯ ಜೋಗಿ, ಕೋಟ ಪಂಚಾಯತ್ ಸದಸ್ಯರಾದ ಚಂದ್ರ ಪೂಜಾರಿ, ಸಂಸದರ ಆಪ್ತ ಸಹಾಯಕ ಹರೀಷ್ ಕುಮಾರ್ ಶೆಟ್ಟಿ ಸ್ಥಳೀಯರು ಉಪಸ್ಥಿತರಿದ್ದರು.

