Kundapra.com ಕುಂದಾಪ್ರ ಡಾಟ್ ಕಾಂ

ಕಾರ್ಕಡದಲ್ಲಿ ಸ್ವಉದ್ಯೋಗ ಪ್ರೇರಣ ಶಿಬಿರ ಕಾರ್ಯಕ್ರಮ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಬ್ರಹ್ಮಾವರ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ ಪಾಂಡೇಶ್ವರ ವಲಯದ ಪಡುಬೈಲು ಕಾರ್ಕಡ ಕಾರ್ಯಕ್ಷೇತ್ರದ ಶ್ರೀ ಗುರು ನರಸಿಂಹ ಜ್ಞಾನ ವಿಕಾಸ ಕೇಂದ್ರದಲ್ಲಿ ಸ್ವಉದ್ಯೋಗ ಪ್ರೇರಣ ಶಿಬಿರ ಕಾರ್ಯಕ್ರಮವನ್ನು ಇತ್ತೀಚಿಗೆ ಹಮ್ಮಿಕೊಂಡಿತು.

ಕಾರ್ಯಕ್ರಮವನ್ನು ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಾರ್ಕಡ ಇಲ್ಲಿಯ ನಿವೃತ್ತ ಮುಖ್ಯ ಶಿಕ್ಷಕ ಪ್ರಭಾಕರ್ ಕಾಮತ್ ಉದ್ಘಾಟಿಸಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ಶುಭ ಹಾರೈಸಿದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಬ್ರಹ್ಮಾವರ ರುಡಸೆಟ್ ಸಂಸ್ಥೆಯ ಉಪನ್ಯಾಸಕಿ ಚೈತ್ರ ಸಂಸ್ಥೆಯಲ್ಲಿ ಯಾವ ಯಾವ ತರಬೇತಿಗಳಿವೆ ಹಾಗೂ ತರಬೇತಿಗಳು ಎಷ್ಟು ದಿನ ನಡೆಯುತ್ತವೆ, ಇದರ ಪ್ರಯೋಜನ, ಸ್ವ ಉದ್ಯೋಗ ಆಸಕ್ತರಿಗೆ ಸಾಲ ಸೌಲಭ್ಯಗಳ ,ತರಬೇತಿಗೆ ಬರುವಾಗ ಏನು ದಾಖಲತೆಗಳನ್ನು ತರಬೇಕು ಎನುವ ಕುರಿತುಮಾಹಿತಿ ತಿಳಿಸಿದರು.

ಸಾಲಿಗ್ರಾಮ ಪಟ್ಟಣ ಪಂಚಾಯತ್ ಉಪಾಧ್ಯಕ್ಷರಾದ ಗಿರಿಜಾ ಶೇಖರ್ ಪೂಜಾರಿ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಸದಸ್ಯರಾದ ಸಂಜೀವ ದೇವಾಡಿಗ, ಪಾಂಡೇಶ್ವರ ವಲಯದ ಅಧ್ಯಕ್ಷೆ ರಾಧಾ ಪೂಜಾರಿ, ಬ್ರಹ್ಮಾವರ ತಾಲೂಕಿನ ಜ್ಞಾನವಿಕಾಸ ಸಮನ್ವಯ ಅಧಿಕಾರಿಯಾದ ಪುಷ್ಪಲತಾ, ವಲಯದ ಮೇಲ್ವಿಚಾರಕರಾದ ಜಯಲಕ್ಷ್ಮಿ, ಸ್ಥಳೀಯ ಸೇವ ಪ್ರತಿನಿಧಿ ಶಾರದಾ, ಜಾನವಿಕಾಸದ ಸಂಯೋಜಕರಾದ , ಯಶೋಧ, ಹಾಗೂ ತಂಡದ ಸದಸ್ಯರು ಉಪಸ್ಥಿತರಿದ್ದರು.

Exit mobile version