Site icon Kundapra.com ಕುಂದಾಪ್ರ ಡಾಟ್ ಕಾಂ

ಸುನಿಲ್ ಪೂಜಾರಿ ಪಾಂಡೇಶ್ವರಗೆ ಡೈರೆಕ್ಟರ್ ಜನರಲ್ ಎನ್.ಸಿ.ಸಿ ಬ್ಯಾಟನ್ ಗೌರವ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ ಕಾಂಪ್ಟಿ ಮಹಾರಾಷ್ಟ್ರ ಇಲ್ಲಿ ಎರಡು ತಿಂಗಳುಗಳ ಕಾಲ ನಡೆದ ಅಸೋಸಿಯೇಟ್ ಎನ್‌ಸಿಸಿ ಆಫೀಸರ್ ಫ್ರೀ ಕಮಿಷನ್ ತರಬೇತಿಯಲ್ಲಿ ದೇಶದ 28 ರಾಜ್ಯಗಳ 19 ಡೈರೆಕ್ಟರ್‌ಗಳ ಸುಮಾರು 500ಕ್ಕೂ ಅಧಿಕ ಆಫೀಸರ್ ಟ್ರೈನಿಗಳು ಭಾಗವಹಿಸಿದ ತರಬೇತಿಯಲ್ಲಿ ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್‌ನ 6 ಕರ್ನಾಟಕ ನೇವಲ್ ಯೂನಿಟ್ ಎನ್‌ಸಿಸಿಯನ್ನು ಪ್ರತಿನಿಧಿಸಿದ ಸುನಿಲ್ ಪೂಜಾರಿ ಪಾಂಡೇಶ್ವರ ಒಟ್ಟು ತರಬೇತಿ ಅವಧಿಯಲ್ಲಿ ದೈಹಿಕ ಸಾಮರ್ಥ್ಯ, ಶೈಕ್ಷಣಿಕ ಅಂಕ, ಸಾಮಾನ್ಯ ಜ್ಞಾನ ವಿಷಯಜ್ಞಾನ, ಡ್ರಿಲ್, ನಾಯಕತ್ವ ಗುಣ ಮತ್ತು ಸಮಗ್ರ ವರ್ತನೆ ಈ ಎಲ್ಲಾ ವಿಭಾಗಗಳಲ್ಲಿ ತೋರಿದ ಅತ್ಯುತ್ತಮ ಕಾರ್ಯಕ್ಷಮತೆಗಾಗಿ ಚಿನ್ನದ ಪದಕದೊಂದಿಗೆ ಡೈರೆಕ್ಟರ್ ಜನರಲ್ ಎನ್.ಸಿ.ಸಿ ಬ್ಯಾಟನ್ ಗೌರವವಕ್ಕೆ ಪಾತ್ರರಾಗಿದ್ದಾರೆ.

ಅವರು ಪ್ರಸ್ತುತ ವಿದ್ಯೋದಯ ಪಬ್ಲಿಕ್ ಸ್ಕೂಲ್ ಉಡುಪಿಯಲ್ಲಿ ದೈಹಿಕ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Exit mobile version