ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ನಾಗೂರು ರೈಲ್ವೆ ಬ್ರಿಡ್ಜ್ ಕ್ರಾಸ್ ಮಾಡುತ್ತಿದ್ದ ವ್ಯಕ್ತಿ ರೈಲು ಬಡಿದು ಮೃತಪಟ್ಟಿದ್ದಾರೆ. ಹೇರೂರು ನಿವಾಸಿ ದಿವಾಕರ ಆಚಾರ್ಯ (56) ಮೃತಪಟ್ಟವರು.
ಮರದ ಕೆಲಸ ಮಾಡಿಕೊಂಡಿದ್ದ ಅವರು ಭಾನುವಾರ ಸಂಜೆ ರೈಲ್ವೆ ಮೇಲ್ ಸೇತುವೆ ಕ್ರಾಸ್ ಮಾಡುತ್ತಿರುವ ವೇಳೆ ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ಹೋಗುತ್ತಿರುವ ರೈಲು ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

