ಬೈಂದೂರು ನಿಲ್ದಾಣದಲ್ಲಿ ಮುಂಬೈ – ಕೊಚುವಲಿ ಗರೀಬ್ ರಥ ರೈಲು ವಾರದ ನಾಲ್ಕು ದಿನ ನಿಲುಗಡೆಗೆ ಆದೇಶ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಮೂಕಾಂಬಿಕಾ ರೋಡ್ ರೈಲ್ವೇ ನಿಲ್ದಾಣದಲ್ಲಿ ಮುಂಬೈ ಲೋಕಮಾನ್ಯ ತಿಲಕ್ – ಕೊಚುವೆಲಿ – ಮುಂಬೈ ಲೋಕಮಾನ್ಯ ತಿಲಕ್ ಗರೀಬ್ ರಥ ರೈಲು ( ರೈಲು ಸಂಖ್ಯೆ 12201/12202) ವಾರದ ನಾಲ್ಕು ದಿನ ಬೈಂದೂರು ನಿಲ್ದಾಣದಲ್ಲಿ ನಿಲುಗಡೆಗೊಳ್ಳಲಿದೆ. ಈ ಬಗ್ಗೆ ಆದೇಶವಾಗಿರುವುದಾಗಿ ಬೈಂದೂರು ಮೂಕಾಂಬಿಕಾ ರೈಲ್ವೆ ಯಾತ್ರಿ ಸಂಘ ತಿಳಿಸಿದೆ.

Call us

Click Here

ಗರೀಬ್ ರಥ ರೈಲು ಬೈಂದೂರಿನಲ್ಲಿ ನಿಲುಗಡೆಗೆ ಶ್ರಮವಹಿಸಿದ ನಮ್ಮ ಶಿವಮೊಗ್ಗ ಲೋಕಸಭಾ ಸದಸ್ಯರಾದ ಬಿ.ವೈ.ರಾಘವೇಂದ್ರ ಹಾಗೂ ಸಹಕರಿಸಿದ ಕೇಂದ್ರ ರೈಲ್ವೆ ಮಂತ್ರಿಗಳಾದ ಅಶ್ವಿನಿ ವೈಶ್ಯವ್ ಅವರಿಗೆ ಮೂಕಾಂಬಿಕಾ ರೈಲ್ವೆ ಯಾತ್ರಿ ಸಂಘ ಬೈಂದೂರು ವತಿಯಿಂದ ಅಭಿನಂದನೆ ಸಲ್ಲಿಸುತ್ತೇವೆ. ಮುಂಬೈ ಹಾಗೂ ಕೇರಳ ಪ್ರವಾಸ ಮಾಡುವ ಬೈಂದೂರು ತಾಲೂಕಿನ ಪ್ರಯಾಣಿಕರು ಹವಾನಿಯಂತ್ರಿತ ಗರೀಬ್ ರಥ ರೈಲಿನ ಸದುಪಯೋಗ ಪಡೆದುಕೊಳ್ಳಬೇಕಾಗಿ ಮನವಿ ಮಾಡುತ್ತೇವೆ.

ಬೈಂದೂರು ಮೂಕಾಂಬಿಕಾ ರೋಡ್ ನಿಲ್ದಾಣದಲ್ಲಿ ದಾದರ್ ಸೆಂಟ್ರಲ್ – ತಿರುನವಲ್ಲಿ ಎಕ್ಸ್ಪ್ರೆಸ್, ಎರುನಾಕುಲಂ – ಹಜರತ್ ನಿಜಾಮುದ್ದೀನ್ ಎಕ್ಸಪ್ರೆಸ್ ರೈಲು, ಬೆಂಗಳೂರು-ಮೈಸೂರುಮಂಗಳೂರು-ಮುರುಡೇಶ್ವರ ರೈಲು ಹಾಗೂ ಇನ್ನಿತರ ರೈಲು ನಿಲುಗಡೆಗೆ ಮಾನ್ಯ ಸಂಸದರು ಪ್ರಸ್ತಾವನೆ ಸಲ್ಲಿಸಿದ್ದು ಅತೀ ಶೀಘ್ರದಲ್ಲಿ ರೈಲ್ವೆ ಇಲಾಖೆಯಿಂದ ಆದೇಶವಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ: ► ಕುಂದಾಪುರದಲ್ಲಿ ನೇತ್ರಾವತಿ ಎಕ್ಸಪ್ರೆಸ್, ಬಾರ್ಕೂರಿನಲ್ಲಿ ಮತ್ಸ್ಯಗಂಧ ಎಕ್ಸಪ್ರೆಸ್ ರೈಲು ನಿಲುಗಡೆಗೆ ಆದೇಶ – https://kundapraa.com/?p=65279 .

ರೈಲುಗಳ ನಿಲುಗಡೆಗೆ ಮಾತ್ರವಲ್ಲದೆ ಮೂಕಾಂಬಿಕಾ ರೋಡ್ ರೈಲ್ವೆ ನಿಲ್ದಾಣದ ಮೂಲಸೌಕರ್ಯ ಅಭಿವೃದ್ಧಿಗೂ ಸಹ ಮನವಿ ಮಾಡಲಾಗಿದೆ. ಇದರ ಸಂಬಂದ ಸಂಸದರು ಹಾಗೂ ನಿಕಟಪೂರ್ವ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ.ಎಸ್.ಯಡಿಯೂರಪ್ಪ ಅವರು ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ.

Click here

Click here

Click here

Click Here

Call us

Call us

ಮೂಕಾಂಬಿಕಾ ರೋಡ್ ರೈಲ್ವೆ ನಿಲ್ದಾಣದ ಸಂಪರ್ಕ ರಸ್ತೆಗಳನ್ನು ಸಹ ಅಭಿವೃದ್ಧಿಯಾಗುತ್ತಿದೆ. ಯಡ್ತರೆ ಗ್ರಾಮದ ಬಂಕೇಶ್ವರ ರಸ್ತೆಯಿಂದ ರೈಲ್ವೆ ನಿಲ್ದಾಣದ ಸಂಪರ್ಕ ರಸ್ತೆ, ಗಂಗನಾಡು ರಸ್ತೆಯಿಂದ ರೈಲ್ವೆ ನಿಲ್ದಾಣ ರಸ್ತೆ, ಮದ್ದೋಡಿ ರಸ್ತೆಯಿಂದ ಹಳೇ ಸ್ಟೇಷನ್ ರಸ್ತೆ ಹಾಗೂ ವಿದ್ಯಾನಗರದಿಂದ ರೈಲ್ವೆ ನಿಲ್ದಾಣ ರಸ್ತೆಯ ಅಂಡರ್ ಪಾಸ್ ಅಭಿವೃದ್ಧಿಗೆ ಸುಮಾರು ರೂ 1.75 ಕೋಟಿ ವೆಚ್ಚದ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದ್ದಾರೆ.

Leave a Reply