Site icon Kundapra.com ಕುಂದಾಪ್ರ ಡಾಟ್ ಕಾಂ

ಕೋಟ: ಕಾರಂತ ಬಾಲ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಕೈಂಡ್ ಹಾರ್ಟ್ಸ್ ಬಾಳ್ಕುದ್ರು, ಶ್ರೀ ವೇಣುಗೋಪಾಲ ಎಜ್ಯುಕೇಶನಲ್ ಸೊಸೈಟಿ ಮೂಡುಕೇರಿ ಬಾರ್ಕೂರು, ಉಸಿರು ಕೋಟ ಇವರ ಆಸರೆಯಲ್ಲಿ ಕೊಡಮಾಡುವ 2025ನೇ ಸಾಲಿನ ಕಾರಂತ ಬಾಲ ಪುರಸ್ಕಾರಕ್ಕೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ನಮೂನೆಯನ್ನು ಕೋಟದ ಕಾರಂತ ಥೀಮ್ ಪಾರ್ಕ್‌ನಲ್ಲಿ ಪಡೆಯುವುದು ಅಥವಾ ಗ್ರಂಥಾಲಯ ಮೇಲ್ವಿಚಾರಕಿ ಶೈಲಜ ಕೆ. ಎನ್. (9663750499) ಅವರನ್ನು ಕಛೇರಿ ಸಮಯದಲ್ಲಿ ಸಂಪರ್ಕಿಸಿ ಪಡೆಯುವುದು. ಭರ್ತಿ ಮಾಡಿದ ಅರ್ಜಿಯನ್ನು ನವೆಂಬರ್ 12ರ ಸಂಜೆ 5 ಗಂಟೆ ಒಳಗೆ ಕೋಟದ ಕಾರಂತ ಥೀಮ್ ಪಾರ್ಕ್ ಕಛೇರಿಗೆ ತಲುಪಿಸುವುದು ಅಥವಾ ಕಾರ್ಯದರ್ಶಿ, ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಕೋಟ ಬ್ರಹ್ಮಾವರ ತಾಲೂಕು ಉಡುಪಿ ಜಿಲ್ಲೆ  – 576221 ಅವರಿಗೆ ಅಂಚೆ ಮೂಲಕ ತಲುಪಿಸುವಂತೆ ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ  ಆನಂದ ಸಿ. ಕುಂದರ್, ಅಧ್ಯಕ್ಷರಾದ ಸತೀಶ್ ಬಾರಿಕೆರೆ, ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ಕೈಂಡ್ ಹಾರ್ಟ್ಸ್‌ನ ಸ್ಟೀಫನ್ ಲೂವಿಸ್, ವೇಣುಗೋಪಾಲ ಎಜ್ಯುಕೇಶನಲ್ ಸೊಸೈಟಿಯ ಗಣೇಶ್ ಜಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version