Site icon Kundapra.com ಕುಂದಾಪ್ರ ಡಾಟ್ ಕಾಂ

ಪಟ್ಟಣಪಂಚಾಯತ್ ಸುವರ್ಣ ಮಹೋತ್ಸವ ಅರ್ಥಪೂರ್ಣ: ರಾಧಕೃಷ್ಣ ಮಯ್ಯ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ಸಾಲಿಗ್ರಾಮ ಪಟ್ಟಣಪಂಚಾಯತ್ ಸುವರ್ಣ ಮಹೋತ್ಸವ ಸಂಭ್ರಮವನ್ನು ಅರ್ಥಪೂರ್ಣಗೊಳಿಸಿದೆ ಎಂದು ಪಟ್ಟಣಪಂಚಾಯತ್ ಹಿರಿಯ ನಾಗರಿಕರಾದ ರಾಧಕೃಷ್ಣ ಮಯ್ಯ ಹೇಳಿದರು.

ಅವರು ಸಾಲಿಗ್ರಾಮದ ತೋಡ್ಕಟ್ಟು ಹೊಸಬದುಕು ಆಶ್ರಮದಲ್ಲಿ ಪಟ್ಟಣಪಂಚಾಯತ್ ಸುವರ್ಣ ಮಹೋತ್ಸವ ಅಂಗವಾಗಿ ಹಮ್ಮಿಕೊಂಡ ಊಟೋಪಚಾರ ವಿತರಣೆ ಹಾಗೂ ವಿವಿಧ ಪರಿಕರ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾಲಿಗ್ರಾಮ ಪಟ್ಟಣಪಂಚಾಯತ್ ಕಾರ್ಯಕ್ರಮ ಆಯೋಜಿಸಿ ಹೊಸ ದಿಕ್ಕಿಗೆ ಮುನ್ನುಡಿ ಬರೆದಿದೆ ಅಲ್ಲದೆ ಆಶ್ರಮಕ್ಕೆ ನೆರವು ನೀಡುವ ಯೋಚನೆ ಯೋಜನೆ ಶ್ಲಾಘನೀಯ ಕಾರ್ಯ ಎಂದರು.

ಇದೇ ವೇಳೆ ಸಾಲಿಗ್ರಾಮ ಪಟ್ಟಣಪಂಚಾಯತ್ ಅಧ್ಯಕ್ಷೆ ಸುಕನ್ಯಾ ಶೆಟ್ಟಿ ಅವರು ಆಶ್ರಮದ ಮುಖ್ಯಸ್ಥ ಹ.ರಾ ವಿನಯಚಂದ್ರ ಸಾಸ್ತಾನ ಅವರಿಗೆ ಪರಿಕರವನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸಾಲಿಗ್ರಾಮ ಪಟ್ಟಣಪಂಚಾಯತ್ ಉಪಾಧ್ಯಕ್ಷೆ ಗಿರಿಜಾ  ಪೂಜಾರಿ, ಸದಸ್ಯರಾದ ರವೀಂದ್ರ ಕಾಮತ್, ಸಂಜೀವ ದೇವಾಡಿಗ, ಸ್ಥಾಯೀ ಸಮಿತಿಯ ಅನುಸೂಯ ಹೇರ್ಳೆ, ಮಾಜಿ ಸದಸ್ಯ ಕರುಣಾಕರ ಪೂಜಾರಿ, ಗ್ರಾಮದ ಪ್ರಮುಖರಾದ ಜಯೇಂದ್ರ ಪೂಜಾರಿ, ಸಂಜೀವ ಮರಕಾಲ ಉಪಸ್ಥಿತರಿದ್ದರು.

ಪಟ್ಟಣಪಂಚಾಯತ್ ಮಾಜಿ ಅಧ್ಯಕ್ಷ ಪ್ರಸ್ತುತ ಸದಸ್ಯ ರಾಜು ಪೂಜಾರಿ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿ, ನಿರೂಪಿಸಿದರು. ಆಶ್ರಮದ ನಿರ್ದೇಶಕಿ ರಾಜಶ್ರೀ ವಿ. ವಂದಿಸಿದರು.

Exit mobile version