Site icon Kundapra.com ಕುಂದಾಪ್ರ ಡಾಟ್ ಕಾಂ

ಸಮಾಜಕ್ಕೆ ಸತೀಶ್ ಪೂಜಾರಿ ಕೊಡುಗೆ ಅನನ್ಯ: ನಾಡೋಜ ಡಾ. ಜಿ. ಶಂಕರ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ:
ಕಲಾವಿದನಾಗಿ, ವೈದ್ಯರಾಗಿ ಈ ಸಮಾಜಕ್ಕೆ ಡಾ. ಸತೀಶ್ ಪೂಜಾರಿ ಸೇವೆ ಅನನ್ಯ ಎಂದು ನಾಡೋಜ ಡಾ. ಜಿ. ಶಂಕರ್ ಹೇಳಿದರು.

ಅವರು ಭಾನುವಾರದಂದು ಸರಕಾರಿ ಸಂಯುಕ್ತ ಪ್ರೌಢಶಾಲೆ ಮಣೂರು ಪಡುಕರೆಯಲ್ಲಿ ದಿ. ಡಾ. ಸತೀಶ್ ಪೂಜಾರಿ ಅವರ ಸ್ಮರಣಾರ್ಥ ಮನಸ್ಮಿತ ಫೌಂಡೇಶನ್, ಕೋಟ, ಗೀತಾನಂದ ಫೌಂಡೇಶನ್ ಮಣೂರು ಪಡುಕರೆ ಆಶ್ರಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಕಾರ್ಯಕ್ರಮ, ಕರೋಕೆ ಗಾಯನ ಸ್ಪರ್ಧೆ ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾಜದ ಬಗ್ಗೆ ಅವರಿಗಿದ್ದ ತುಡಿತ ಅಗಾಧ ಅಂತಹ  ವ್ಯಕ್ತಿ ಕಳೆದುಕೊಂಡಿದ್ದು ನಮ್ಮ ದೌರ್ಭಾಗ್ಯ ಅವರ ಹೆಸರಿನಲ್ಲಿ ಕಿವಿ ತಪಾಸಣಾ ಕಾರ್ಯಕ್ರಮ ದೊಡ್ಡ ಮಟ್ಟದಲ್ಲಿ ಆಯೋಜಿಸಿ ನಾವು ನಿಮ್ಮ ಜತೆ ಕೈಜೋಡಿಸಲಿದ್ದೇವೆ ಎಂದರು.

ಕೋಟದ ಪಡುಕರೆ ಗೀತಾನಂದ ಟ್ರಸ್ಟ್ ನ  ಪ್ರವರ್ತಕ ಆನಂದ ಸಿ. ಕುಂದರ್ ಅಧ್ಯಕ್ಷತೆ ವಹಿಸಿದ್ದರು. ದಿ| ಡಾ| ಸತೀಶ್ ಪೂಜಾರಿ ಅವರ ಸಂಸ್ಮರಣೆಯನ್ನು ಬ್ರಹ್ಮಾವರ ಲೆಕ್ಕ ಪರಿಶೋಧಕ ಪದ್ಮನಾಭ ಕಾಂಚನ್ ಗೈದರು.

ಮುಖ್ಯ ಅಭ್ಯಾಗತರಾಗಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಬ್ಲಡ್ ಸೆಂಟರ್ ಕುಂದಾಪುರ ಅಧ್ಯಕ್ಷ ಎಸ್ ಜಯಕರ್ ಶೆಟ್ಟಿ, ಮನಸ್ಮಿತ ಫೌಂಡೇಶನ್ ನಿರ್ದೇಶಕರಾದ ಸವಿತಾ ಪ್ರಕಾಶ್ ತೋಳಾರ್, ನೇಹಾ ಸತೀಶ್ ಪೂಜಾರಿ ಉಪಸ್ಥಿತರಿದ್ದರು.

ಕರೋಕೆ ಸ್ಪರ್ಧೆಯಲ್ಲಿ ರಾಜ್ಯದ ವಿವಿದೆಡೆಗಳಿಂದ ಭಾಗವಹಿಸಿದ್ದು  ಬಹುಮಾನವನ್ನು ಎಚ್.ಜಿ ಮೋಹನ್ ಸಾಗರ, ದ್ವಿತೀಯ ಚಂದನ ಸಿ ಎನ್ ಭದ್ರಾವತಿ,ತೃತೀಯ ಸುಕೇಶ್ ಎಣ್ಣೆಹೊಳೆ ಕಾರ್ಕಳ ಇವರುಗಳಿಗೆ ನಗದು ಸಹಿತ ಫಲಕವನ್ನು ನೀಡಲಾಯಿತು.

ಕಾರ್ಯಕ್ರಮ ಸಂಯೋಜಕರಾದ  ಶ್ರೀಮಾತಾ ಆಸ್ಪತ್ರೆಯ ನಿರ್ದೇಶಕ ಡಾ| ಪ್ರಕಾಶ್ ತೋಳಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಆರ್ ಜೆ ಪ್ರಸನ್ನ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಲಯನ್ಸ್ ಕ್ಲಬ್ ಬ್ರಹ್ಮಾವರ, ಕೋಟದ ಪಂಚವರ್ಣ ಸಂಘಟನೆ, ಜೈಹಿಂದ್ ಕ್ರಿಕೆಟಸ್೯ ಪಡುಕರೆ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಬ್ರಹ್ಮಾವರ, ಟ್ರಾವೆಲಿಂಕ್ಸ್ ಫ್ರೆಂಡ್ಸ್ ಕೋಟ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪಡುಕರೆ, ನನ್ನ ಹಾಡು ನನ್ನದು ಕುಂದಾಪುರ, ವಿ.9ಫ್ರೆಂಡ್ಸ್ ಬ್ರಹ್ಮಾವರ, ವಾಹಿನಿ ಯುವಕ ಮಂಡಲ ಪಡುಕರೆ ಸಹಕಾರ ನೀಡಿದರು.

Exit mobile version