ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ವೈದ್ಯಕೀಯ ಕ್ಷೇತ್ರದಲ್ಲಿ ಕೆ.ಪಿ ಶೆಟ್ಟಿ ಅವರ ಜೀವತ ಅವಧಿಯ ಸೇವೆ ಮಾಮವೀಯ ಮೌಲ್ಯಗಳಿಂದ ಕೂಡಿದೆ ಎಂದು ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟರು.
ಅವರು ಸಾಸ್ತಾನದ ಶಿವಕೃಪಾ ಕಲ್ಯಾಣ ಮಂದಿರದಲ್ಲಿ ಇತ್ತೀಚಿಗೆ ಅಗಲಿದ ಸಾಸ್ತಾನ ಭಾಗದ ಪ್ರಸಿದ್ಧ ವೈದ್ಯರಾದ ಡಾ. ಕೆ.ಪಿ ಶೆಟ್ಟಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು. ಸಮಾಜದ ಜನರ ಬಗ್ಗೆ ಹಾಗೂ ಸಮಾಜಸೇವೆಯೇ ವೈದ್ಯಕೀಯ ಕ್ಷೇತ್ರದ ಮೂಲಕ ಜನರ ನಾಡಿಮಿಡಿತದಲ್ಲಿ ಕೆ.ಪಿ ಶೆಟ್ಟಿ ಅವರ ಅಚ್ಚಳಿಯದೆ ಉಳಿದು ಬಿಟ್ಟಿದ್ದಾರೆ. ಅವರ ವ್ಯಕ್ತಿತ್ವ ಬದುಕಿನ ಜೀವನದ ತಳಹದಿ ಎಲ್ಲರಿಗೂ ಮಾದರಿಯಾಗಿದೆ ಎಂದರು.

ಸಭೆಯಲ್ಲಿ ಡಾ. ಕೆ.ಪಿ ಶೆಟ್ಟಿ ಅವರ ಭಾವಚಿತ್ರಕ್ಕೆ ಪುಷ್ಭ ನಮನ ಸಲ್ಲಿಸಿದ ಗಣ್ಯರು ಮೌನ ಪ್ರಾರ್ಥನೆ ಸಲ್ಲಿಸಿದರು. ಯೋಗ ಗುರುಕುಲ ಇದರ ಮುಖ್ಯಸ್ಥ ಯೋಗಗುರು ಡಾ. ವಿದ್ವಾನ್ ವಿಜಯ ಮಂಜರ್ ನುಡಿನಮನ ಸಲ್ಲಿಸಿದರು.
ಸಭೆಯಲ್ಲಿ ಊರಿನಹಿರಿಯ ಗಣ್ಯರಾದ ಹಂಗಾರಕಟ್ಟೆ ಇಬ್ರಾಹಿಂ ಸಾಹೇಬ್, ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಎ. ಕುಂದರ್, ಕೆ.ಪಿ ಶೆಟ್ಟಿ ಅವರ ಪುತ್ರ ದೇವಿ ಕಿರಣ್ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪ್ರಶಾಂತ್ ಶೆಟ್ಟಿ ನಿರೂಪಿಸಿದರು. ವಿಠ್ಠಲ್ ಪೂಜಾರಿ, ಸುರೇಶ್ ಕುಂದರ್, ಪ್ರತಾಪ್ ಶೆಟ್ಟಿ, ಸುರೇಶ್ ಅಡಿಗ, ಗೋವಿಂದ ಪೂಜಾರಿ, ರಮೇಶ್ ಕಾರಂತ್ ಸಹಕರಿಸಿದರು.