ಕುಂದಾಪುರ: ಸ್ವಚ್ಛತೆಯ ಬಗ್ಗೆ ನಾವು ದೊಡ್ಡ ದೊಡ್ಡ ಮಾತನಾಡುತ್ತೇವೆ. ಭಾಷಣಗಳನ್ನು ಬಿಗಿಯುತ್ತೇವೆ. ಸರಕಾರವೂ ಸ್ವಚ್ಛತೆಯ ಅರಿವು ಮೂಡಿಸಲೆಂದೇ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆದರೆ ವಾಸ್ತವವಾಗಿ ಪರಿಸರ ಹಾಗೂ ಸ್ವಚ್ಚತೆಯ ಕಾಳಜಿ ಫೋಟೋಷ್ಟೇ ಸೀಮಿತವಾಗಿದೆ ಎಂಬುದನ್ನು ನಮ್ಮ ಸುತ್ತಮುತ್ತಲಿನ ಹಲವಾರು ನಿದರ್ಶನಗಳು ಸಾಕ್ಷೀಕರಿಸಿವೆ.
ಆದರೆ ಕುಂದಾಪುರದ ನಗರದಲ್ಲೊಬ್ಬಳು ಮಹಿಳೆ ಸ್ವಚ್ಚ ಭಾರತ್‌ಗಾಗಿ ಸ್ವಹಿತಾಸಕ್ತಿಯಿಂದಲೇ ಪಣತೊಟ್ಟಿದ್ದಾಳೆ. ಯಾವ ಪ್ರಚಾರವೂ ಬಯಸದೆ, ತನ್ನಷ್ಟಕ್ಕೆ ತಾನು ಪೊರಕೆ ಹಿಡಿದು ಬೀದಿಗಳನ್ನು ಗುಡಿಸುತ್ತಾಳೆ. ಅಂಗಡಿ ಮುಂಗಟ್ಟುಗಳನ್ನು ಸ್ವಚ್ಚಗೊಳಿಸುತ್ತಾಳೆ ಮರು ಮಾತನಾಡದೇ, ಯಾವುದೇ ಪ್ರತಿಫಲಾಪೇಕ್ಷೆಯೂ ಇಲ್ಲದೇ ಮುಂದಕ್ಕೆ ಸಾಗುತ್ತಾಳೆ.
[quote font_size=”14″ bgcolor=”#ffffff” arrow=”yes” align=”right”]ಆಕೆ ಯಾರೂ, ಏನು ಎಂಬುದು ತಿಳಿದಿಲ್ಲ. ಬೆಳಿಗ್ಗೆ ಬಂದು ಚರ್ಚ್ ರಸ್ತೆಯ ಬೀದಿಗಳನ್ನು ಗುಡಿಸುತ್ತಿದ್ದುದು ಕಂಡುಬಂತು. ಮಾತನಾಡಿಸಲೂ ಪ್ರಯತ್ನಿಸಿದೆ. ಆದರೆ ಅವಳ ಅಸ್ಪಷ್ಟವಾದ ಮಾತು ಅರ್ಥವಾಗಲಿಲ್ಲ. ಹಿಂದಿ ಮಾತನಾಡುವ ಶೈಲಿ ನೋಡಿದರೆ ಉತ್ತರ ಭಾರತದ ಕಡೆಯವಳು ಎಂದೆನ್ನಿಸುತ್ತದೆ. – ಜೋಯ್ ಜೆ. ಕರ್ವೆಲ್ಲೊ[/quote]
ಹೌದು. ಅಂದು ಕುಂದಾಪುದ ಚರ್ಚ್ ರಸ್ತೆಯಲ್ಲಿ ಡಿಢೀರ್ ಪ್ರತ್ಯಕ್ಷಳಾದ ಆ ಮಹಿಳೆ ಅಂಗಡಿ ಮುಂಗಟ್ಟು, ರಸ್ತೆಯ ಬದಿಯ ಕಸವನ್ನೆಲ್ಲಾ ಸರಸರನೆ ಸ್ವಚ್ಚಗೊಳಿಸಲು ಮುಂದಾದಳು. ಅಲ್ಲಿದ್ದವರಿಗೊ ಆಶ್ಚರ್ಯ. ಅವಳು ಯಾರು, ಎಲ್ಲಿಂದ ಬಂದಳು ಎಂಬುದು ತಿಳಿದಿಲ್ಲ. ಮಾತನಾಡಿಸಿದರೂ, ಅರೆಬರೆ ಹಿಂದಿಯಲ್ಲಿ ಮಾತನಾಡುತ್ತಾಳೆ. ಅದೂ ಅಸ್ಪಷ್ಟ. ಮಾನಸಿಕ ಅಸ್ವಸ್ಥಳು ಎಂಬುದು ಮೇಲ್ನೋಟಕ್ಕೆ ತಿಳಿಯುತ್ತಿತ್ತು. ಆದರೆ ಅವಳು ಬಂದ ಮೇಲೆ ಬೀದಿಗಳು ಒಂದಿಷ್ಟು ಸ್ವಚ್ಚವಾದವು. ಅಂಗಡಿ ಮಾಲಿಕರೂ ಅಷ್ಟೇ. ಸುಮ್ಮನೆ ಕೂರಲಿಲ್ಲ್ಲ. ತಮಗಾದಷ್ಟು ಹಣವನ್ನು ಖುಷಿಯಿಂದ ಕೊಟ್ಟರು. ಊಟ, ತಿಂಡಿಯನ್ನು ಕೊಟ್ಟರು. ಅನಿರೀಕ್ಷಿತವಾಗಿ ಬಂದ ಈ ಅಪರಿಚಿತ ಪೌರಕಾರ್ಮಿಕೆಯನ್ನು ಮಸ್ಸಿನಲ್ಲೇ ಶ್ಲಾಘಿಸಿದರು.
ಒಟ್ಟಿನಲ್ಲಿ ಸ್ವಚ್ಚ್ ಭಾರತ್ ಬಗ್ಗೆ ಮಾತನಾಡುತ್ತಾ, ವಾಸ್ತವಾಗಿ ಅದರಿಂದ ದೂರವೇ ಇರುವವರಿಗೆ ಈ ಅನಿರೀಕ್ಷಿತ ಅತಿಥಿಯ ನೈರ್ಮಲ್ಯದ ಕಾಳಜಿ ಮಾತ್ರ ಮಾದರಿಯಾಗುವಂತಿತ್ತು.