Site icon Kundapra.com ಕುಂದಾಪ್ರ ಡಾಟ್ ಕಾಂ

ಸಾಸ್ತಾನ: ಶ್ರೀ ಬ್ರಹ್ಮಬೈದರ್ಕಳ ಶ್ರೀ ಕ್ಷೇತ್ರ ಗೋಳಿ ಗರಡಿ ಯಕ್ಷಗಾನ ಮೇಳ ತಿರುಗಾಟ ಪ್ರಾರಂಭೋತ್ಸವ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ಇಲ್ಲಿನ ಸಾಸ್ತಾದ ಶ್ರೀ ಬ್ರಹ್ಮಬೈದರ್ಕಳ ಶ್ರೀ ಕ್ಷೇತ್ರ ಗೋಳಿ ಗರಡಿಯಲ್ಲಿ ಶ್ರೀ ಕ್ಷೇತ್ರದ ವತಿಯಿಂದ 2025-26ನೇ ಸಾಲಿನ ಯಕ್ಷಗಾನಮೇಳ ತಿರುಗಾಟದ ಉದ್ಘಾಟನಾ ಕಾರ್ಯಕ್ರಮವು ಇತ್ತೀಚಿಗೆ ಶ್ರೀ ಕ್ಷೇತ್ರದಲ್ಲಿ ಜರಗಿತು.

ಕ್ಷೇತ್ರದ ವತಿಯಿಂದ ಯಕ್ಷ ಕಲಾವಿದ ನಾಯ್ಕನಕಟ್ಟೆ ಭಾಸ್ಕರ್ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಯಾಗಿ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಅಧ್ಯಕ್ಷ ಡಾ. ಕೆ.ಎಸ್. ಕಾರಂತ, ಸಿಎ ದೇವಾನಂದ್, ಪ್ರೊಫೆಸರ್ ಉದಯಕುಮಾರ್ ಶೆಟ್ಟಿ, ಕ್ಷೇತ್ರದ ಪಾತ್ರಿ ಶಂಕರ್ ಪೂಜಾರಿ, ಮೇಳದ ಯಜಮಾನ ಜಿ.ವಿಠ್ಠಲ ಪೂಜಾರಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಗಣೇಶ್ ಪಾಂಡೇಶ್ವರ ನಿರೂಪಿಸಿದರು.

Exit mobile version