ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ರಾಣಿ ಅಬ್ಬಕ್ಕನ ವಿರೋಜಿತವಾದ ಬದುಕು ಇಂದಿನ ಯುವಕ, ಯುವತಿಯರಿಗೆ ಪ್ರೇರಣೆಯಾಗಬಲ್ಲುದು ಎಂದು ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರ ಇಲ್ಲಿನ ಸಂದರ್ಶಕ ಪ್ರಾಧ್ಯಾಪಕ, ಸಂಶೋಧಕ ಜಯರಾಮ ಶೆಟ್ಟಿಗಾರ್ ಅಭಿಪ್ರಾಯ ಪಟ್ಟರು.
ಅವರು ಇತ್ತೀಚಿಗೆ ಲಕ್ಷ್ಮೀ ಸೋಮ ಬಂಗೇರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಇತಿಹಾಸ ವಿಭಾಗ ಹಾಗೂ ಕರ್ನಾಟಕ ರಾಜ್ಯ ಮಹಾ ವಿದ್ಯಾಲಯ, ಶಿಕ್ಷಕ ಸಂಘ ಮಂಗಳೂರು,ವಿಭಾಗಗಳ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡ ಅಬ್ಬಕ್ಕ @500 ಪ್ರೇರಣದಾಯಿ ಉಪನ್ಯಾಸದ ಸಂಪನ್ಮೂಲ ವ್ಯಕ್ಕಿಯಾಗಿ ಮಾತನಾಡಿದರು.
ಈ ನೆಲದ ಸ್ವಾತಂತ್ರ್ಯಾಕ್ಕಾಗಿ, ಸ್ವಾಭಿಮಾನಕ್ಕಾಗಿ ಪೋರ್ಚುಗೀಸರ ವಿರುದ್ದ ಕೆಚ್ಚೆದೆಯಿಂದ ಹೋರಾಡಿದ ರಾಣಿ ಅಬ್ಬಕ್ಕನ ಕುಶಾಗ್ರಮತಿ ವ್ಯಕ್ತಿತ್ವ ರೋಮಾಂಚನಕಾರಿಯಾದದ್ದು. ಅವಳ ಸಾಹಸ ಗಾಥೆಯನ್ನು ಮನನ ಮಾಡುವುದರಿಂದ ನಮ್ಮ ಅಂತರಂಗದಲ್ಲಿಯೂ ಈ ನಾಡು, ನುಡಿ, ನೆಲದ ಕುರಿತಾದ ಅಭಿಮಾನ ಯಾವತ್ತೂ ಜಾಗ್ರತಾವಸ್ಥೆಯಲ್ಲಿಇರುವಂತತಾಗುತ್ತದೆ. ಇಂತಹ ಸಾಹಸಗಾಥೆಯನ್ನು ಮೆರೆದ ಮಹಾನ್ ವ್ಯಕ್ತಿತ್ವ ಉಳ್ಳವರನ್ನು ಆಗಾಗ ಸ್ಮರಿಸುವುದು ಇಂದಿನ ತುರ್ತು ಎಂದರು.
ಗೀತಾನಂದ ಪೌಂಢೇಶನ್ ಮಣೂರು ಪ್ರವರ್ತಕ ಆನಂದ ಸಿ. ಕುಂದರ್ ಕಾರ್ಯಕ್ರಮವನ್ನು ಉದ್ಘಾಟಿಸಿ, ರಾಣಿ ಅಬ್ಬಕ್ಕನನ್ನು ಸ್ಮರಿಸುವ ಈ ಮೂಲಕ ಇತಿಹಾಸವನ್ನು ಮನನ ಮಾಡುವುದು ಇಂದಿನ ಯುವ ಪೀಳಿಗೆಗೆ ಪ್ರೇರಣಾಧಾಯಕವಾದುದು ಎಂಬ ಆಶಯ ವ್ಯಕ್ತ ಪಡಿಸಿದರು.
ಕರ್ನಾಟಕ ರಾಜ್ಯ ಮಹಾ ವಿದ್ಯಾಲಯ ಶಿಕ್ಷಕ ಸಂಘ ಉಡುಪಿ ವಿಭಾಗ ಅಧ್ಯಕ್ಷ ಡಾ. ಸುರೇಂದ್ರ ಶೆಟ್ಟಿಗಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾಲೇಜಿನ ಪ್ರಾಂಶುಪಾಲ ಡಾ. ರಾಜೇಂದ್ರ ಎಸ್. ನಾಯಕ ಉಪಸ್ಥಿತರಿದ್ದರು. ಸೌಪರ್ಣಿ ಮತ್ತು ತಂಡ ತೃತೀಯ ಬಿ.ಕಾಂ ಪ್ರಾರ್ಥಿಸಿದರು, ಇತಿಹಾಸ ವಿಭಾಗದ ಉಪನ್ಯಾಸಕ ಶಾಂತೇಶ ತಳವಾರ ಸ್ವಾಗತಿಸಿದರು. ಇಂಗ್ಷೀಷ ಉಪನ್ಯಾಸಕಿ ಸುಷ್ಮಾ ವಂದಿಸಿದರು. ಕಾಲೇಜಿನ ಇತಿಹಾಸ ವಿಭಾಗದ ವತಿಯಿಂದ ಕಾರ್ಯಕ್ರಮವನ್ನು ಸಂಘಟಿಸಲಾಗಿಯಿತು.

