Site icon Kundapra.com ಕುಂದಾಪ್ರ ಡಾಟ್ ಕಾಂ

ಮನೋರಂಜಿಸಿದ ಸಾಂಪ್ರದಾಯಿಕ ಮಣೂರು ಕಂಬಳ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ಇಲ್ಲಿನ ಕೋಟದ ಪ್ರಸಿದ್ಧ ಸಾಂಪ್ರದಾಯಿಕ ಮಣೂರು ಕಂಬಳ ಮಹೋತ್ಸವ ಕಂಬಳದ ಅಭಿಮಾನಿಗಳನ್ನು ರಂಜಿಸುವುದರ ಮೂಲಕ ಸಂಪನ್ನಗೊಂಡಿತು.

ಮಣೂರು ಕಂಬಳಗದ್ದೆ ಬೆಟ್ಟುವಿನ ಕಂಬಳಗದ್ದೆಯಲ್ಲಿ ಸಾವಿರಾರು ಕಂಬಳ ಅಭಿಮಾನಿಗಳು ಕೋಣಗಳ ಸರತಿ ಓಟಗಳನ್ನು ಕಣ್ತುಂಬಿಕೊಂಡರು.

ಪ್ರಸಿದ್ಧ ಮನೆತನವಾದ ಗಿಳಿಯಾರು ಹಂಡಿಕೆರೆ ಮನೆ, ಮಣೂರು ಶೀನ ಪೂಜಾರಿ, ಭೋಜ ಪೂಜಾರಿ ಹೀಗೆ ಅನೇಕ ಕಂಬಳ ಮನೆತನದ ಮನೆಗಳ ಕೋಣಗಳು ಕಂಬಳ ಗದ್ದೆಯಲ್ಲಿ ಮೇಳೈಸಿತು. ಡೋಲು ಸದ್ದು, ಶೃಂಗರಿಸಿದ ಕೋಣಗಳು ವಿಶೇಷವಾಗಿ ಗಮನ ಸೆಳೆದವು.

Exit mobile version