Site icon Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ: ಕೋಳಿ ಅಂಕಕ್ಕೆ ಪೊಲೀಸರ ದಾಳಿ – ಐವರು ಬಂಧನ 

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಗಂಗೊಳ್ಳಿ:
ಇಲ್ಲಿನ ಆಲೂರು ಗ್ರಾಮದ ಮಾವಿನಗುಳಿ ಕಡೆಗೆ ಹೋಗುವ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಕೋಳಿಗಳ ಕಾಲಿಗೆ ಕತ್ತಿ ಕಟ್ಟಿ ಮನೋರಂಜನೆ ಹಾಗೂ ಹಣ ಪಣವಾಗಿ ಕಟ್ಟಿ ಜೂಜಾಟ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ಗಂಗೊಳ್ಳಿ ಪೊಲೀಸ್‌ ಠಾಣೆಯ ಉಪನಿರೀಕ್ಷಕರಾದ ಪವನ್‌ ನಾಯಕ್ ದಾಳಿ ನಡೆಸಿ ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಾದ ದಿವಕರ (56), ಗಣೇಶ್‌ (40), ಗಣೇಶ್‌ (29), ಪ್ರಶಾಂತ್‌ (37), ಎಚ್‌. ಬಾಬು (55) ಎಂಬುವರನ್ನು ಬಂಧಿಸಿದ್ದಾರೆ. ಜಯಶೀಲ ಶೆಟ್ಟಿ ಹಾಗೂ ಇತರರು ಸ್ಥಳದಿಂದ ಓಟಿ ಹೋಗಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

ಕೋಳಿ ಜುಗಾರಿ ಆಟಕ್ಕೆ ಬಳಸಿದ ಕೋಳಿ ಹುಂಜ – 7 ,ಕತ್ತಿ – 05 (ಕೋಳಿಬಾಳು) ಹಾಗೂ ಕೋಳಿಯ ಕಾಲಿಗೆ ಕೋಳಿ ಬಾಳನ್ನು ಕಟ್ಟಲು ಉಪಯೋಗಿಸಿದ ಹಗ್ಗ – 5, ಕೋಳಿಗಳ ಮೇಲೆ ಹಣವನ್ನು ಪಣವಾಗಿ ಕಟ್ಟಿದ್ದು ನಗದು ಹಣ 2400/- ರೂಪಾಯಿ ಹಾಗೂ ಮೋಟಾರು ಸೈಕಲ್‌ ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version