ಕುಂದಾಪ್ರ ಡಾಟ್ ಕಾಂ ಸುದ್ದಿ.
ಶಂಕರನಾರಯಣ: ಸಿದ್ದಾಪುರ ಗ್ರಾಮದಲ್ಲಿ ಹಣವನ್ನು ಪಣವಾಗಿರಿಸಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಟ ಅಡುತ್ತಿದ್ದ ಜನರನ್ನು ಶಂಕರನಾರಾಯಣ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಶಂಭುಲಿಂಗಯ್ಯ ಎಮ್.ಇ ಅವರು ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಬಂಧಿಸಿದ್ದಾರೆ.
ಸಿದ್ದಾಪುರದ ಮಂಜುನಾಥ ಕಾಂಪ್ಲೆಕ್ಸ್ ಕಟ್ಟಡದ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಟ ಅಡುತ್ತಿದ್ದ ಬಗ್ಗೆ ಮಾಹಿತಿ ಮೇರೆಗೆ ಶಂಕರನಾರಾಯಣ ಪೊಲೀಸರು ಆರೋಪಿಗಳಾದ ಸುಬ್ರಹ್ಮಣ್, ಅಶ್ರಫ್, ಸುನೀಲ್, ಧೀರಜ್, ಶಂಕರ, ಸುಧೀರ್ ಕುಮಾರ, ಮಧುಕರ, ಮನೋಹರ, ಗಣೇಶ ಹಾಗೂ ರಾಮ ಎಂಬುವರನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ ಅಂದರ್ – ಬಾಹರ್ ಜುಗಾರಿ ಆಟಕ್ಕೆ ಬಳಸಿದ ನಗದು ಹಣ 8,810/-ರೂಪಾಯಿ, 10 ಮೊಬೈಲ್ ಪೋನ್ ಗಳು, ಇಸ್ಪೀಟ್ ಜೂಜಾಟ ಆಡಲು ಬಂದಿದ್ದ ಬೈಕ್‌ಗಳು, ಇಸ್ಪೀಟ್ ಎಲೆಗಳು, ಪ್ಲಾಸ್ಟೀಕ್ ಕುರ್ಚಿಗಳು, ಒಂದು ಪ್ಲಾಸ್ಟೀಕ್ ಟೇಬಲ್, ಕಪ್ಪು ಮತ್ತು ಕೇಸರಿ ಬಣ್ಣ ಮಿಶ್ರಿತ ಬಟ್ಟೆ ಹಾಗೂ ಒಂದು ಮೇಣದ ಬತ್ತಿಯನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










