Kundapra.com ಕುಂದಾಪ್ರ ಡಾಟ್ ಕಾಂ

ಸ್ವಚ್ಛ ಹಾಗೂ ಹಸಿರು ಪರಿಸರಕ್ಕಾಗಿ ಎಲ್ಲರೂ ಕೈಜೋಡಿಸಿ: ಕೆ. ರಮೇಶ್ ಪ್ರಭು

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ಸ್ವಚ್ಛ ಹಾಗೂ ಹಸಿರು ಪರಿಸರಕ್ಕಾಗಿ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಮಣೂರು ಚಿತ್ತಾರಿ ನಾಗಬ್ರಹ್ಮ ದೇಗುಲದ ಅಧ್ಯಕ್ಷ ಕೆ. ರಮೇಶ್ ಪ್ರಭು ಹೇಳಿದರು.

ಅವರು ಭಾನುವಾರ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ಮಣೂರು ಫ್ರೆಂಡ್ಸ್ ಮಣೂರು ಸಹಯೋಗದೊಂದಿಗೆ ದೇಗುಲದ ಆಡಳಿತ ಮಂಡಳಿಯ ಸಂಯೋಜನೆಯೊಂದಿಗೆ 280ನೇ ವಾರದ ಪರಿಸರಸ್ನೇಹಿ ಕಾರ್ಯಕ್ರಮದ ಅಂಗವಾಗಿ ಮಣೂರು ಶ್ರೀ ಚಿತ್ತಾರಿ ನಾಗಬ್ರಹ್ಮ ದೇಗುಲದ ವಾರ್ಷಿಕ ದೀಪೋತ್ಸವ ಸಲುವಾಗಿ ಹಮ್ಮಿಕೊಂಡ ಸ್ವಚ್ಛತಾ ಕಾರ್ಯಕ್ರಮದಲ್ಲಿ ಚಾಲನೆ ನೀಡಿ ಮಾತನಾಡಿದರು.

ಕಸ ವಿಲೇವಾರಿಯಲ್ಲಿ ಜನಸಾಮಾನ್ಯರು ಅರಿತು ಎಲ್ಲಂದರಲ್ಲಿ ಎಸೆಯದೆ ಸ್ಥಳೀಯಾಡಳಿತ ಘಟಕಕ್ಕೆ ನೀಡಬೇಕು, ಪ್ಲಾಸ್ಟಿಕ್ ಬಳಕೆ ಕಡಿತಗೊಳಿಸಿ ಪರಿಸರಕ್ಕೆ ಪೂರಕ ವಾತಾವರಣ ಕಲ್ಪಿಸಿ ಎಂದು ಕರೆ ಕೊಟ್ಟರು.

ಈ ಸಂದರ್ಭದಲ್ಲಿ ಚಿತ್ತಾರಿ ದೇಗುಲ ಆಡಳಿತ ಮಂಡಳಿಯ ಗೋಪಾಲ್ ಪೈ, ನಿತ್ಯಾನಂದ ಪೈ, ಪಂಚವರ್ಣ ಪೂರ್ವಾಧ್ಯಕ್ಷ ಗಿರೀಶ್ ಆಚಾರ್, ಉಪಾಧ್ಯಕ್ಷ ದಿನೇಶ್ ಆಚಾರ್, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್, ಮಣೂರು ಫ್ರೆಂಡ್ಸ್ ಅಧ್ಯಕ್ಷ ರಾಘವೇಂದ್ರ ಆಚಾರ್, ಗೌರವಾಧ್ಯಕ್ಷ ಸುರೇಶ್ ಆಚಾರ್ ಮತ್ತಿತರರು ಇದ್ದರು. ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು.

Exit mobile version