Kundapra.com ಕುಂದಾಪ್ರ ಡಾಟ್ ಕಾಂ

ಬಿಪಿಎಲ್ ಪಡಿತರ ಚೀಟಿಗೆ ಕತ್ತರಿ, ಭಾರತೀಯ ಜನತಾ ಪಾರ್ಟಿ ಹಿಂದುಳಿದ ವರ್ಗಗಳ ಮೋರ್ಚಾ ಆಕ್ರೋಶ, ಮನವಿ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ಜಿಲ್ಲೆಯಾದ್ಯಂತ ಬಡವರ ಬಿಪಿಎಲ್ ಪಡಿತರ ಚೀಟಿಯನ್ನು ಎಪಿಎಲ್ ಪಡಿತರ ಚೀಟಿಯಾಗಿ ಪರಿವರ್ತನೆ ಮಾಡುತ್ತಿದ್ದು ಇದರಿಂದ ಹಿಂದುಳಿದ ವರ್ಗಗಳ ಬಡವರಿಗೆ ಮತ್ತು ಶ್ರಮಿಕ ವರ್ಗದ ಜನರಿಗೆ ಅನ್ಯಾಯವಾಗುತ್ತಿದ್ದು ಇದರ ಜೊತೆಗೆ ಪರಿವರ್ತನೆಗೊಂಡ ಎಪಿಎಲ್ ಪಡಿತರ ಚೀಟಿಯನ್ನು ಪುನಃ ಸಮರ್ಪಕ ದಾಖಲೆ ನೀಡಿ ಬಿಪಿಎಲ್ ಪಡಿತರ ಚೀಟಿಯನ್ನಾಗಿ ಮಾಡಲು ತಾಲುಕು ಮಟ್ಟದ ಅಧಿಕಾರಿಗಳ ಬಳಿ ತೆರಳಿದರೆ ಕೊಂಚವೂ ನಾಚಿಕೆ ಇಲ್ಲದೆ ಬಡವ ಶ್ರಮಿಕ ದುಡಿಯುವ ಹಿಂದುಳಿದ ವರ್ಗಗಳ ಜನರ ಬಳಿ ಲಂಚ ಬೇಡಿಕೆಯ ಹಿನ್ನಲ್ಲೆ ಹಾಗೂ ಉಡುಪಿ ಜಿಲ್ಲೆಯ ಎಲ್ಲಾ ತಾಲುಕು ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡವ ಆಡುತ್ತಿದೆ, ಹಾಗಾಗಿ ಇದು ನಿಲ್ಲದೆ ಹೋದಲ್ಲಿ ಬಡವರಿಗೆ ಅನ್ಯಾಯವಾಗಲು ಜವಾಬ್ದಾರಿಯುತ ಪ್ರತಿಪಕ್ಷವಾಗಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಸುಮ್ಮನಿರದೆ ನೊಂದವರ ಜೊತೆಯಾಗಿ ಜಿಲ್ಲೆಯ ತಾಲೂಕು ಕಚೇರಿ ಹಾಗೂ ಜಿಲ್ಲಾಧಿಕಾರಿ ಕಚೇರಿಯ ಎದುರು ಬ್ರಹತ್ ಪ್ರತಿಭಟನೆ ಮಾಡಲಾಗುವುದು ಎಂದು ಆಗ್ರಹಿಸಿ ಭಾರತೀಯ ಜನತಾ ಪಾರ್ಟಿ ಹಿಂದುಳಿದ ವರ್ಗಗಳ ಮೋರ್ಚಾ ಇವರ ವತಿಯಿಂದ ಅಪರ ಜಿಲ್ಲಾಧಿಕಾರಿಗೆ ಸೋಮವಾರ ಮನವಿ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ವಿಜಯ್ ಕೊಡವೂರು, ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಉಪಾಧ್ಯಕ್ಷ ಐರೋಡಿ ವಿಠ್ಠಲ ಪೂಜಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರವೀಂದ್ರ ತಿಂಗಳಾಯ ಕೋಟ,ಸುರೇಂದ್ರ ಕುಲಾಲ್ ವರಂಗ, ಖಜಾಂಚಿ ರಾಜೇಂದ್ರ ಪಂದುಬೆಟ್ಟು, ಮಾದ್ಯಮ ಪ್ರಮುಖ್ ಸುಶಾಂತ್, ಹಿಂದುಳಿದ ವರ್ಗಗಳ ಮೋರ್ಚಾ ಕಾರ್ಕಳ ಮಂಡಲ ಅಧ್ಯಕ್ಷ ಪ್ರಸಾದ್ ಐಸಿರ, ಕಾಪು ಮಂಡಲ ಅಧ್ಯಕ್ಷ ಸಂತೋಷ್ ಕುಮಾರ್, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಆಶೋಕ್ ಸುವರ್ಣ, ನಾಗರಾಜ್ ಆಚಾರ್, ಆಶೋಕ್ ಸಾಲಿಗ್ರಾಮ ಹಾಗು ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

Exit mobile version