Site icon Kundapra.com ಕುಂದಾಪ್ರ ಡಾಟ್ ಕಾಂ

ಬಡಾಕೆರೆ: ತೋಟಕ್ಕೆ ನೀರು ಬಿಡಲು ಹೋದ ವ್ಯಕ್ತಿ ಶವವಾಗಿ ಪತ್ತೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ತೋಟಕ್ಕೆ ನೀರು ಬಿಡಲು ಹೋದ ವ್ಯಕ್ತಿ ಶವವಾಗಿ ಪತ್ತೆಯಾದ ಘಟನೆ ಬಡಾಕೆರೆಯಲ್ಲಿ ಇತ್ತೀಚಿಗೆ ಸಂಭವಿಸಿದೆ. ಬಡಾಕೆರೆ ಗ್ರಾಮದ ನಿವಾಸಿ ಜಯಶೀಲ ಶೆಟ್ಟಿ (69) ಅವರು ಮೃತಪಟ್ಟವರು.

ಕೃಷಿರಾಗಿದ್ದ ಅವರು ಸೋಮವಾರ ಬೆಳಿಗ್ಗೆ ಮನೆಯಿಂದ ತೋಟಕ್ಕೆ ಬಿಡಲೆಂದು ಹೋಗಿದ್ದರು. ಮಧ್ಯಾಹ್ನವಾದರೂ ಮನೆಗೆ ಬಾರದೆ ಇದ್ದಾಗ ಮನೆಯವರು ಹುಡುಕುತ್ತಾ ತೋಟದ ಕಡೆಗೆ ಹೋಗುವಾಗ ಗುಲಾಬಿ ಶೆಡ್ತಿ ಅವರ ತೆಂಗಿನ ತೋಟದಲ್ಲಿರುವ ಕಾಯಿ ಹಾಕುವ ಉಗ್ರಾಣದ ಒಳಗೆ ಗೊಬ್ಬರದ ಚೀಲದ ಬಳಿ ಮಲಗಿದ ಸ್ಥಿತಿಯಲ್ಲಿ ಮೃತಪಟ್ಟಿದ್ದಾರೆ.

ಅವರಿಗೆ ಕೆಲವು ವರ್ಷಗಳಿಂದ ರಕ್ತದೊತ್ತಡ ಮತ್ತು ಮಧುಮೇಹ ಕಾಯಿಲೆ ಇರುವುದಾಗಿ ತಿಳಿದು ಬಂದಿದೆ.ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Exit mobile version