Kundapra.com ಕುಂದಾಪ್ರ ಡಾಟ್ ಕಾಂ

ಖೇಲೋ ಇಂಡಿಯಾ ಗೇಮ್ಸ್‌ನಲ್ಲಿ ಆಳ್ವಾಸ್ ಪುರುಷರ ತಂಡ ಮೂರನೇ ಬಾರಿ ಸಮಗ್ರ ಚಾಂಪಿಯನ್ಸ್‌

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಮೂಡುಬಿದಿರೆ:
 ರಾಜಸ್ಥಾನದಲ್ಲಿ ನವೆಂಬರ್ 24 ರಿಂದ ಡಿಸೆಂಬರ್ 05 ರವರೆಗೆ ನಡೆದ ಖೇಲೋ ಇಂಡಿಯಾ ಅಂತರ್ ವಿಶ್ವ ವಿದ್ಯಾಲಯ  ಗೇಮ್ಸ್ನಲ್ಲಿ ಮಂಗಳೂರು ವಿವಿಯನ್ನು ಪ್ರತಿನಿಸಿದ ಆಳ್ವಾಸ್ ಕಾಲೇಜಿನ ಪುರುಷರ ತಂಡ ಮೂರನೇ ಬಾರಿಗೆ ಸಮಗ್ರ ಚಾಂಪಿಯನ್ಸ್ ಪಟ್ಟ ಅಲಂಕರಿಸಿತು. ಈ ರಾಷ್ಟ್ರೀಯ ಮಟ್ಟದ ಕ್ರೀಡಾ ಕೂಟದ ಪುರುಷರ ವಿಭಾಗದಲ್ಲಿ ಆಳ್ವಾಸ್ ವಿದ್ಯಾರ್ಥಿಗಳು ಮೂರು ಚಿನ್ನ, ಒಂದು ಕಂಚಿನ ಪದಕ ಪಡೆದು ಈ ಸಾಧನೆ ಮೆರೆದರು.

ಆಳ್ವಾಸ್‌ನ ನಾಗೇಂದ್ರ ಡಿಸ್ಕಸ್ ಥ್ರೋನಲ್ಲಿ ಚಿನ್ನ, ಅಮನ್ ಪೋಲ್ ವಾಲ್ಟ್ನಲ್ಲಿ ಚಿನ್ನ,, ಚಮನ್ ದೇಕಾಥಲೋನ್‌ನಲ್ಲಿ ಚಿನ್ನ, ಟ್ರಿಪ್ಪ್ಲೆ ಜಂಪ್‌ನಲ್ಲಿ ಪ್ರದೀಪ್ ಕುಮಾರ್ ಕಂಚಿನ ಪದಕ ಪಡೆಯುದರೊಂದಿಗೆ ಸಮಗ್ರ ಚಾಂಪಿಯನ್‌ಶಿಪ್ ಪಟ್ಟ ಅಲಂಕರಿಸಿತು. ಇದೇ ಪಂದ್ಯಾಟದ ಮಹಿಳಾ ವಿಭಾಗದಲ್ಲಿ ಒಂದು ಚಿನ್ನ,  ಎರಡು ಬೆಳ್ಳಿಯ ಪದಕದೊಂದಿಗೆ ಆಳ್ವಾಸ್ ನಾಲ್ಕನೇ ಸ್ಥಾನ ಪಡೆಯಿತು.

ಪುರುಷರ ಹಾಗೂ ಮಹಿಳೆಯರ ಎರಡು ವಿಭಾಗದಲ್ಲಿ ಒಟ್ಟು 4 ಚಿನ್ನ, 2 ಬೆಳ್ಳಿ ಹಾಗೂ 1 ಕಂಚಿನ ಪದಕದೊಂದಿಗೆ ಮಂಗಳೂರು ವಿವಿ 7 ಪದಕ ಪಡೆಯಿತು.

ಮಂಗಳೂರು ವಿವಿಯ ತಂಡದಲ್ಲಿ ಒಟ್ಟು 43 ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಅವರಲ್ಲಿ 39 ವಿದ್ಯಾರ್ಥಿಗಳು ಆಳ್ವಾಸ್‌ನ ಕ್ರೀಡಾ ಪಟುಗಳಾಗಿದ್ದಾರೆ. ಜೊತೆಯಲ್ಲಿ ಮಂಗಳೂರು ವಿವಿಯು ಪಡೆದ 7 ಪದಕಗಳಲ್ಲಿ, ಒಂದು ಬೆಳ್ಳಿಯ ಪದಕ ಹೊರತು ಪಡಿಸಿ, 6 ಪದಕಗಳು ಆಳ್ವಾಸ್ ವಿದ್ಯಾರ್ಥಿಗಳ ಕೊಡುಗೆಯಾಗಿದೆ. ತೆಂಕನಿಡಿಯೂರು ಪ್ರಥಮ ದರ್ಜೆ ಕಾಲೇಜಿನ ಶ್ರೀ ದೇವಿಕಾ ಬೆಳ್ಳಿಯ ಪದಕ ಪಡೆದಿದ್ದರು.

ವಿಜೇತ ತಂಡವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಮ್. ಮೋಹನ ಆಳ್ವ ಅಭಿನಂದಿಸಿದ್ದಾರೆ.

Exit mobile version