ಸತತ ಮೂರನೇ ವರ್ಷ ಆಳ್ವಾಸ್ ಸಮಗ್ರ ಚಾಂಪಿಯನ್ಸ್

Click Here

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಮೂಡುಬಿದಿರೆ:
ಕರ್ನಾಟಕ ರಾಜ್ಯ ವೇಟ್‌ಲಿಫ್ಟಿಂಗ್ ಸಂಸ್ಥೆ ರಿ. ಹಾಗೂ ಮೈಸೂರು ಜಿಲ್ಲಾ ವೇಟ್‌ಲಿಫ್ಟಿಂಗ್ ಸಂಸ್ಥೆ ರಿ. ಇವರ ಜಂಟಿ ಆಶ್ರಯದಲ್ಲಿ ಮೈಸೂರಿನ ಮಹಾಜನ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಜರುಗಿದ ರಾಜ್ಯ ಮಟ್ಟದ ಪುರುಷರ ಮತ್ತು ಮಹಿಳೆಯರ- ಯೂತ್, ಜೂನಿಯರ್, ಸೀನಿಯರ್ ಸೇರಿದಂತೆ ಇರುವ ಒಟ್ಟು ಆರು ವಿಭಾಗಳಲ್ಲೂ ಆಳ್ವಾಸ್ ಕಾಲೇಜಿನ ಪುರುಷರ ಹಾಗೂ ಮಹಿಳೆಯರ ತಂಡ ಸಮಗ್ರ ತಂಡ ಪ್ರಶಸ್ತಿಯನ್ನು ಪಡೆದುಕೊಂಡರು.

Call us

Click Here

ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ಪುರುಷರ ವಿಭಾಗದಲ್ಲಿ ಒಟ್ಟು 9 ಚಿನ್ನ, 10 ಬೆಳ್ಳಿ, 6 ಕಂಚಿನೊAದಿಗೆ 25 ಪದಕ ಪಡೆದರೆ, ಮಹಿಳೆಯರ ವಿಭಾಗದಲ್ಲಿ 9 ಚಿನ್ನ 14 ಬೆಳ್ಳಿ ಹಾಗೂ 5 ಕಂಚು ಸೇರಿದಂತೆ ಒಟ್ಟು 28 ಪದಕ ಪಡೆದು, ಎರಡು ವಿಭಾಗದಲ್ಲಿ ಭರ್ಜರಿ 53 ಪದಕ ಪಡೆದು ಪಾರಮ್ಯ ಮೆರೆದರು.

ಪುರುಷರ ಯೂತ್ ವಿಭಾಗದಲ್ಲಿ ಆಳ್ವಾಸ್ ಕಾಲೇಜು -2 ಚಿನ್ನ, 1 ಬೆಳ್ಳಿ, 3 ಕಂಚು, ಜೂನಿಯರ್ ವಿಭಾಗದಲ್ಲಿ- 3 ಚಿನ್ನ, 4 ಬೆಳ್ಳಿ, 2 ಕಂಚು, ಸೀನಿಯರ್ ವಿಭಾಗದಲ್ಲಿ -4 ಚಿನ್ನ, 5 ಬೆಳ್ಳಿ, 1 ಕಂಚಿನ ಪದಕಕ್ಕೆ ಪಾತ್ರವಾಯಿತು.

ಮಹಿಳೆಯರ ಯೂತ್ ವಿಭಾಗದಲ್ಲಿ- 2 ಚಿನ್ನ, 5 ಬೆಳ್ಳಿ, 2 ಕಂಚು, ಜೂನಿಯರ್ ವಿಭಾಗದಲ್ಲಿ –3 ಚಿನ್ನ, 4 ಬೆಳ್ಳಿ, 2 ಕಂಚು, ಸೀನಿಯರ್ ವಿಭಾಗದಲ್ಲಿ- 4 ಚಿನ್ನ, 5 ಬೆಳ್ಳಿ, 1 ಕಂಚಿನ ಪದಕದೊಂದಿಗೆ ಎಲ್ಲಾ ಆರು ವಿಭಾಗದಲ್ಲೂ ತಂಡ ಪ್ರಶಸ್ತಿಯನ್ನು ಪಡೆದು ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಮಹಿಳಾ ಯೂತ್ ವಿಭಾಗದಲ್ಲಿ ಆಳ್ವಾಸ್ ಕಾಲೇಜು ಒಟ್ಟು 247 ಅಂಕ ಪಡೆದರೆ, ಜೂನಿಯರ್ ವಿಭಾಗದಲ್ಲಿ -246 ಅಂಕ ಸೀನಿಯರ್ ವಿಭಾಗದಲ್ಲಿ 232 ಅಂಕ ಪಡೆಯಿತು. ಪುರುಷರ ಯೂತ್ ವಿಭಾಗದಲ್ಲಿ- 149 ಅಂಕ, ಜೂನಿಯರ್ ವಿಭಾಗದಲ್ಲಿ-174 ಅಂಕ, ಸೀನಿಯರ್ ವಿಭಾಗದಲ್ಲಿ -260 ಅಂಕ ಪಡೆಯಿತು. ಪುರುಷರ ಹಾಗೂ ಮಹಿಳೆಯರ ಆರು ವಿಭಾಗಗಳಲ್ಲಿ ಕ್ರಮವಾಗಿ 583 ಹಾಗೂ 725 ಅಂಕಗಳೊAದಿಗೆ ಒಟ್ಟು 1308 ಅಂಕ ಹಾಗೂ 53 ಪದಕಗಳನ್ನು ಪಡೆದು ಕರ್ನಾಟಕ ರಾಜ್ಯ ವೇಟ್‌ಲಿಫ್ಟಿಂಗ್ ಚಾಂಪಿಯನ್ಷಿಪ್ ಪಟ್ಟವನ್ನು ನೂತನ ದಾಖಲೆಯೊಂದಿಗೆ ಆಳ್ವಾಸ್ ಸತತ ಮೂರನೇ ವರ್ಷ ತನ್ನದಾಗಿಸಿಕೊಂಡಿತು.

Click here

Click here

Click here

Click Here

Call us

Call us

ಸ್ಪರ್ಧೆಯಲ್ಲಿ ಭಾಗವಹಿಸಿದ 58 ವಿದ್ಯಾರ್ಥಿಗಳು ಆಳ್ವಾಸ್‌ನ ಕ್ರೀಡಾ ದತ್ತು ಯೋಜನೆಯಲ್ಲಿ ಉಚಿತ ವಸತಿ ಹಾಗೂ ತರಬೇತಿಯನ್ನು ಪಡೆಯುತ್ತಿದ್ದಾರೆ. ಪ್ರಶಸ್ತಿ ಪಡೆದ ವಿದ್ಯಾರ್ಥಿಗಳ ತಂಡವನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ ಎಂ ಮೋಹನ್ ಅಳ್ವ ಅಭಿನಂದಿಸಿದ್ದಾರೆ.

Leave a Reply