ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಇಲ್ಲಿನ ಕೋಡಿಕನ್ಯಾಣ ಶ್ರೀ ಶನೀಶ್ವರ ದೇವಸ್ಥಾನದ ವಠಾರದಲ್ಲಿ ಇದೇ ಬರುವ ಡಿ.21ರಂದು ನಡೆಯಲಿರುವ ತಿರುಮಲ ತಿರುಪತಿ ದಾಸ ಸಾಹಿತ್ಯ ಪ್ರಾಜೆಕ್ಟಿನ ನೇತೃತ್ವದಲ್ಲಿ ಶ್ರೀ ದೇವಿ ಭೂದೇವಿ ಸಹಿತ ಶ್ರೀನಿವಾಸ ದೇವರಿಗೆ ಉಂಜಲೋತ್ಸವ ಸಹಿತ ಪುಷ್ಪಯಾಗ ಮಹೋತ್ಸವದ ಪ್ರಚಾರ ಪುಷ್ಭರಥಕ್ಕೆ ಭಜನಾ ಗುರುಗಳಾದ ವೀಣಾ ಪ್ರಸನ್ನ ಶಾನುಭೋಗ್ ಹಾಗೂ ತಿರುಪತಿಗೆ ಪಾದಯಾತ್ರೆಯ ತಂಡದ ಗುರುಗಳಾದ ಲಕ್ಷ್ಮೀ ನಾರಾಯಣರಾವ್ ಚಾಲನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಸಮಿತಿಯ ಪ್ರಮುಖರಾದ ಡಾ. ಕೃಷ್ಣ ಕಾಂಚನ್, ಶಂಕರ ಕುಲಾಲ್ಗೋಪಾಲ ಪೂಜಾರಿ ಮತ್ತು ಶ್ರೀನಿವಾಸ ಭಕ್ತರು ಉಪಸ್ಥಿತರಿದ್ದರು.

