Kundapra.com ಕುಂದಾಪ್ರ ಡಾಟ್ ಕಾಂ

ಸಾಸ್ತಾನ: ಸಮಾಜಸೇವಕ ನಿರ್ಮಾಣಗೊಳಿಸಿದ ಬಸ್‌ ತಂಗುದಾಣ ಕಿಡಿಗೇಡಿಗಳಿಂದ ಹಾನಿ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ಇಲ್ಲಿನ ಸಾಸ್ತಾನ ರಾಷ್ಟ್ರೀಯ ಚರ್ಚ ಸಮೀಪ ಸುಮಾರು ಐದು ವರ್ಷಗಳ ಹಿಂದೆ ತನ್ನ ತಾತ ಪಾಂಡೇಶ್ವರ ಹೆಬ್ಬಾಗಲು ಮನೆ ನರಸಿಂಹ ತುಂಗ ಸ್ಮರಣಾರ್ಥ ಅವರ ಮೊಮ್ಮಗ ಸಮಾಜಸೇವಕ ಚಂದ್ರಶೇಖರ ಮಯ್ಯ ಎರಡು ಲೋಕಲ್ ಬಸ್ ನಿಲ್ದಾಣ ನಿರ್ಮಿಸಿದ್ದು ಸಾರ್ವಜನಿಕರಿಗೆ ಬಾರಿ ಅನುಕೂಲ ವಾತಾವರಣ ಸೃಷ್ಠಿಸಿದೆ. ಆದರೆ ಆ ತಂಗುದಾಣ ಒಂದು ಭಾಗದ ವಿವಿಧ ಬಿಡಿ ಭಾಗಗಳು ಹಾಗೂ ಶಿಲಾ ಕಂಬಗಳನ್ನು ಕಿಡಿಗೇಡಿಗಳಿಂದ ಮಂಗಳವಾರ ತಡರಾತ್ರಿ ಹಾನಿಗೊಳಿಸಿದ ಘಟನೆ ನಡೆದಿದೆ.

ಈ ಬಗ್ಗೆ ಸಾರ್ವಜನಿಕ ಆಕ್ರೋಶ ಹೊರಹಾಕಿದ್ದು ತಂಗುದಾಣ ಹಾನಿಗೊಳಿಸಿದವರನ್ನು ಶೀಘ್ರ ಬಂಧಿಸುವಂತೆ ಆಗ್ರಹಿಸಿದ್ದಾರೆ. ಅಲ್ಲದೆ ಇದೇ ತಂಗುದಾಣದಲ್ಲಿ ಮನುಕುಲಕ್ಕಲ್ಲದೆ ಪ್ರಾಣಿ ಪಕ್ಷಿಗಳಿವೆ ನೀರು ಆಹಾರ ಒದಗಿಸುವ ತಾಣವಾಗಿ ಮಯ್ಯರು ಸೇವೆ ಮಾಡುತ್ತಿರುವುದು ವಿಶೇಷವಾಗಿದ್ದು ಇಂತಹ ಸಮಾಜಘಾತುಕ ಶಕ್ತಿಗಳು ಹಾನಿಗೊಳಿಸುವುದು ಬೇಸರದ ಸಂಗತಿ ಎಂದು ಮಯ್ಯರು ಮಾಧ್ಯಮಕ್ಕೆ ತಿಳಿಸಿದ್ದು ಕೋಟ ಠಾಣೆಯಲ್ಲಿ ದೂರು ದಾಖಲಿಸುವ ಬಗ್ಗೆ ಉಲ್ಲೇಖಿಸಿದ್ದಾರೆ.

Exit mobile version