Site icon Kundapra.com ಕುಂದಾಪ್ರ ಡಾಟ್ ಕಾಂ

ಇಂಡಿಕಾ ಪುರಸ್ಕಾರಕ್ಕೆ ಯಕ್ಷತೀರ್ಥ ತೀರ್ಥಹಳ್ಳಿ ಗೋಪಾಲ ಆಚಾರ್ ಆಯ್ಕೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ಇಲ್ಲಿನ ಕೋಟ ಮಣೂರು ಪಡುಕರೆಯ ಇಂಡಿಕಾ ಕಲಾ ಬಳಗ ಪ್ರತಿ ವರ್ಷ ನೀಡುವ ಮೊಳಹಳ್ಳಿ ಹೆರಿಯ ನಾಯ್ಕ  ಇಂಡಿಕಾ ಪುರಸ್ಕಾರಕ್ಕೆ, ಹಿರಿಯ ಯಕ್ಷಗಾನ ಕಲಾವಿದ ಯಕ್ಷತೀರ್ಥ ತೀರ್ಥಹಳ್ಳಿ ಗೋಪಾಲ ಆಚಾರ್ ಆಯ್ಕೆಯಾಗಿದ್ದಾರೆ.

ಫೆ.8ರಂದು ಮಣೂರು ಪಡುಕರೆ ಸರ್ಕಾರಿ ಸಂಯುಕ್ತ ಪ್ರೌಢಶಾಲಾ ವಠಾರದ ಗೀತಾನಂದ ರಂಗಮಂಟಪದಲ್ಲಿ ಇಂಡಿಕಾ 16ನೇ ವರ್ಷದ ಸಂಭ್ರಮ ಕಾರ್ಯಕ್ರಮ ಜರುಗಲಿದೆ.

ಪ್ರತಿಭಾ ಪುರಸ್ಕಾರ, ವಿಶೇಷ ಅಭಿನಂದನೆ, ಅಶಕ್ತರಿಗೆ ನೆರವು ಈ ವೇದಿಕೆಯಲ್ಲಿ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಸ್ಥಳೀಯ ಅಂಗನವಾಡಿ ಹಾಗೂ ಶಾಲಾ ಮಕ್ಕಳ ನೃತ್ಯ ವೈವಿಧ್ಯ, ಪಿಂಗಾರ ಕಲಾವಿದರು ಬೆದ್ರ ಮಂಗಳೂರು ಅವರಿಂದ ಓಂಕಾರ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಇಂಡಿಕಾ ಕಲಾಬಳಗದ ಸಂಚಾಲಕ ಪ್ರಭಾಕರ್ ಪಡುಕರೆ, ಅಧ್ಯಕ್ಷ ಎಂ. ಜಯರಾಮ ಶೆಟ್ಟಿ, ಸಮಿತಿಯ ಪ್ರಮುಖರಾದ ನಾಗರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version