Kundapra.com ಕುಂದಾಪ್ರ ಡಾಟ್ ಕಾಂ

ಫೆ.1 ಮತ್ತು 2: ಕೋಟ ಮಹತೋಭಾರ ಶ್ರೀ ಹಿರೇಮಹಾಲಿಂಗೇಶ್ವರ ಜಾತ್ರೆ, ಆಮಂತ್ರಣ ಪತ್ರಿಕೆ ಬಿಡುಗಡೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ಇಲ್ಲಿನ ಪುರಾಣ ಪ್ರಸಿದ್ಧ ಕ್ಷೇತ್ರ ಕೋಟ ಮಹತೋಭಾರ ಶ್ರೀ ಹಿರೇಮಹಾಲಿಂಗೇಶ್ವರ ದೇವಸ್ಥಾನ ವಾರ್ಷಿಕ ಜಾತ್ರಾ ಸಡಗರ ಇದೇ ಬರುವ ಫೆ.1 ಮತ್ತು 2 ರಂದು ಜರಗಲಿದ್ದು ಇದರ ದೇಗುಲದ ಆಮಂತ್ರಣ ಪತ್ರಿಕೆ ಬಿಡುಗಡೆ ಸೋಮವಾರ ಶ್ರೀ ದೇಗುಲದಲ್ಲಿ ಜರಗಿತು.

ಕೂಟಮಹಾಜಗತ್ತಿನ ಇತಿಹಾಸ ಹೊಂದಿದ ಈ ದೇಗುಲ ಶ್ರೀ ಮನ್ಮಹಾರಥೋತ್ಸವದ ಕುರಿತು ದೇಗುಲದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ಅನಂತಪದ್ಮನಾಭ ಐತಾಳ್ ಮಾಹಿತಿ ನೀಡಿ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ದೇಗುಲದ ಸಮಿತಿದ ಸದಸ್ಯರಾದ ಜಿ. ಶ್ರೀನಿವಾಸ ಅಡಿಗ, ಜಿ. ಸದಾಶಿವ ಅಡಿಗ, ಜಿ. ರಾಜೇಂದ್ರ ಅಡಿಗ, ಎಂ. ಭಾಸ್ಕರ ಶೆಟ್ಟಿ, ಉಮೇಶ್ ಪೂಜಾರಿ, ದಿನೇಶ್ ದೇವಾಡಿಗ, ಐಶ್ವರ್ಯ, ಶ್ರೀಲಕ್ಷ್ಮೀ ಪ್ರಭು, ದೇಗುಲದ ಅರ್ಚಕರಾದ ಗಣೇಶ್ ಭಟ್, ಉದ್ಯಮಿ ಸುರೇಶ್ ಕಾಂಚನ್ ಇದ್ದರು.

Exit mobile version