Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ಪೊಲೀಸರ ವಸತಿ ಸಮುಚ್ಛಯ ವಾಸಕ್ಕೆ ಸಿದ್ಧ. ಎಸ್ಪಿ ಅಣ್ಣಾಮಲೈ ಭೇಟಿ

36 ಕ್ವಾರ್ಟಸ್ ವಾಸಕ್ಕೆ ಸಿದ್ಧ: ಮಾರ್ಚ್‌ನಲ್ಲಿ ದ್ವಿತೀಯ ಹಂತ ಪೂರ್ಣ: ಎಸ್ಪಿ ಅಣ್ಣಾಮಲೈ

ಕುಂದಾಪುರ: ಪೊಲೀಸರ ಬಹುಕಾಲದ ಬೇಡಿಕೆಯಾದ ಸುಸಜ್ಜಿತ ವಸತಿಗೃಹ ಅಂತು ಅಂತಿಮ ಹಂತ ತಲುಪಿದೆ. ಸುಮಾರು 2.96ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ವಸತಿ ಸಮುಚ್ಚಯದಲ್ಲಿ 76 ಪೇದೆ ಹಾಗೂ 6 ಉನ್ನತ ಮಟ್ಟದ ಅಧಿಕಾರಿಗಳ ವಾಸಕ್ಕೆ ಅನುಕೂಲವಾಗುವಂತೆ ಸುಸಜ್ಜಿತವಾಗಿ ಕಟ್ಟಡ ನಿರ್ಮಾಣಗೊಂಡಿದ್ದು ಮೊದಲ ಹಂತ 36ರ ವಸತಿಗೃಹವನ್ನು ವಾಸಕ್ಕೆ ಸಿದ್ಧಗೊಂಡಿದ್ದು ಕಾಮಗಾರಿಗೆ ಸಮುಚ್ಚಯಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಭೇಟಿ ನೀಡಿ ಕಾಮಗಾರಿ ಪ್ರಗತಿಯ ಬಗ್ಗೆ ಹರ್ಷ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮದಿಂದ ಪೊಲೀಸ್ ಗೃಹ 2020ಯೋಜನೆಯ ಅನ್ವಯ ಕುಂದಾಪುರದ ಫೆರಿ ರಸ್ತೆಯಲ್ಲಿ ನಿರ್ಮಾಣಗೊಂಡ ಪೊಲೀಸ್ ವಸತಿ ಸಮುಚ್ಛಯ ಸಾಂಕೇತಿಕವಾಗಿ ಉದ್ಘಾಟಿಸಿದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಸುದ್ಧಿಗಾರರ ಜೊತೆ ಮಾತನಾಡಿ, ಕುಂದಾಪುರದ ಪೊಲೀಸ್ ಸಿಬ್ಬಂದಿಗಳ ವಸತಿ ಸಮಸ್ಯೆ ಹಲವು ದಿನಗಳಿಂದ ಇದ್ದು ಪೊಲೀಸ್ ಸಿಬ್ಬಂದಿಗಳು ಕ್ವಾರ್ಟಸ್ ಇಲ್ಲದೇ ಬೇರೆ ಬೇರೆ ಕಡೆ ವಸತಿ ಕಂಡುಕೊಂಡು ಕಷ್ಟ ಪಡುತ್ತಿದ್ದರು. ಸದ್ಯದಲ್ಲೇ ಆ ಸಮಸ್ಯೆ ಪರಿಹಾರಗೊಳ್ಳಲಿದೆ. ಮೊದಲ ಹಂತದಲ್ಲಿ ಒಂದು ಸಂಕೀರ್ಣ ಆಫೀಸರ್ ಬ್ಲಾಕ್, ಉಳಿದ ಸಂಕೀರ್ಣಗಳಲ್ಲಿ 36 ಸಿಬ್ಬಂದಿಗಳ ಕ್ವಾರ್ಟಸ್ ನಿರ್ಮಾಣ ಮಾಡಲಾಗಿದೆ. ಸೇವೆ ಹಿರಿತನದ ಆಧಾರದಲ್ಲಿ ಸಿಬ್ಬಂದಿಗಳಿಗೆ ಕ್ವಾರ್ಟಸ್ ಒದಗಿಸಲು ಡಿಎಸ್‌ಪಿ ಪಟ್ಟಿ ಸಿದ್ಧಪಡಿಸಿದ್ದಾರೆ. ಅತ್ಯಂತ ಸುವ್ಯವಸ್ಥಿತವಾಗಿ ಕಟ್ಟಡ ನಿರ್ಮಾಣ ಮಾಡಲಾಗಿದ್ದು, ಆಕರ್ಷಕ ವಿನ್ಯಾಸ, ಸೋಲಾರ್ ವಾಟರ್ ಹೀಟರ್, ಅತ್ಯಾಧುನಿಕ ಅಡುಗೆ ಮನೆ, ವಾಹನ ಪಾರ್ಕಿಂಗ್ ವ್ಯವಸ್ಥೆಯನ್ನು ಸಂಕೀರ್ಣ ಹೊಂದಿದೆ. ಶೀಘ್ರವೇ ಸುತ್ತ ಅವರಣಗೋಡೆ, ಇಂಟರ್ ಲಾಕ್ ಅಳವಡಿಕೆ ಆಗಲಿದೆ. ಎರಡನೇ ಹಂತದ ಕಾಮಗಾರಿ ಪ್ರಗತಿಯಲ್ಲಿದ್ದು ಮಾರ್ಚ್‌ನಲ್ಲಿ ಪೂರ್ಣಗೊಳ್ಳಲಿದೆ. (ಕುಂದಾಪ್ರ ಡಾಟ್ ಕಾಂ ಸುದ್ದಿ)

ಈ ಸಂದರ್ಭದಲ್ಲಿ ಡಿವೈಎಸ್‌ಪಿ ಮಂಜುನಾಥ್ ಶೆಟ್ಟಿ, ಠಾಣಾಧಿಕಾರಿ ನಾಸೀರ್ ಹುಸೇನ್, ಸಂಚಾರಿ ಠಾಣೆಯ ಎಸೈ ದೇವೇಂದ್ರ, ಹೌಸಿಂಗ್ ಬೋರ್ಡ್ ಸಹಾಯಕ ಇಂಜಿನಿಯರ್ ಸಂತೋಷ್ ಕುಮಾರ್, ಮಂಜುಶ್ರೀ ಕಂಸ್ಟ್ರಕ್ಷನ್ ನಿರ್ದೇಶಕರಾದ ಸುಧೀರ್ ಕುಮಾರ್ ಶೆಟ್ಟಿ, ದಯಾನಂದ ಶೆಟ್ಟಿ ಹಾಗೂ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

Exit mobile version