ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಇಲ್ಲಿನ ಹಿಂದೂ ಸಂಗಮ ಆಯೋಜನಾ ಸಮಿತಿ ಸಾಲಿಗ್ರಾಮ ತಾಲೂಕು ಕೋಟ ಮಂಡಲ ಇದರ ಆಶ್ರಯದಲ್ಲಿ ಇದೇ ಜ.25ರಂದು ಕೋಟದ ಮಾಂಗಲ್ಯ ಮಂದಿರ ಮುಂಭಾಗ ಅಪರಾಹ್ನ 3.00ಗ ಬೃಹತ್ ಹಿಂದೂ ಸಂಗಮ ಹಾಗೂ ಶೋಭಾಯಾತ್ರೆ ಸಮಾವೇಶ ಆಯೋಜಿಸಿದ್ದು ಈ ಹಿನ್ನಲ್ಲೆಯಲ್ಲಿ ಬುಧವಾರ ಇದರ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಕೋಟ ಅಮೃತೇಶ್ವರೀ ದೇಗುಲದ ಸಭಾಂಗಣದಲ್ಲಿ ಜರಗಿತು.
ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸಮಿತಿಯ ಗೌರವಾಧ್ಯಕ್ಷ ಆನಂದ್ ಸಿ. ಕುಂದರ್ ಪೋಸ್ಟರ್ ಅನ್ನು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಹಿಂದೂ ಸಂಗಮ ಕೋಟ ಮಂಡಲ ಸಮಿತಿ ಅಧ್ಯಕ್ಷ ಸತೀಶ್ ಹೆಚ್. ಕುಂದರ್, ಕೋಟ ಗ್ರಾಮಪಂಚಾಯತ್ ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ್ ಶೆಟ್ಟಿ, ಕೋಟ ನಾರಾಯಣ ಗುರು ಸೇವಾ ಸಮಿತಿಯ ಅಧ್ಯಕ್ಷ ಸದಾನಂದ ಗಿಳಿಯಾರು, ಕದ್ರಿ ಮಂಜನಾಥೇಶ್ವರ ದೇಗುಲದ ಮಾಜಿ ಟ್ರಸ್ಟಿ ಕುಸುಮಾ ದೇವಾಡಿಗ, ಹಿಂದೂ ಸಂಗಮ ಆಯೋಜನಾ ಸಮಿತಿಯ ಸಾಲಿಗ್ರಾಮ ತಾಲೂಕು ಸಂಯೋಜಕ ಸುರೇಂದ್ರ ಪೂಜಾರಿ ಕೋಡಿ ಕನ್ಯಾಣ, ಸಂದೀಪ್ ಶಿರಿಯಾರ, ದೇವದತ್ತ ಭಟ್, ಪಂಜು ಪೂಜಾರಿ ಯಡಬೆಟ್ಟು, ರಮೇಶ್ ಪ್ರಭು ಕೋಟ, ರಾಮ ಬಂಗೇರ, ಅಜಿತ್ ದೇವಾಡಿಗ, ಪ್ರಮೋದ್ ಹಂದೆ, ರವೀಂದ್ರ ತಿಂಗಳಾಯ, ಸಮತಾ ಸುರೇಶ್, ರಂಜಿತ್ ಕುಮಾರ್,ಪ್ರ ಸಾದ್ ಬಿಲ್ಲವ, ಪ್ರಶಾಂತ್ ಪಡುಕರೆ, ಲಲಿತಾ ಪೂಜಾರಿ, ಸೋಮ ಮರಕಾಲ, ಜೀವನ್ ಪೂಜಾರಿ, ಅವಿನಾಶ್ ಮರಕಾಲ, ಗಿರೀಶ್ ಆಚಾರ್, ಶ್ರೀಕಾಂತ್ ಆಚಾರ್, ಸಂದೀಪ್ ತೋಳಾರ್ ಮತ್ತಿತರರು ಇದ್ದರು.
ಕೋಟದಲ್ಲಿ ಆಯೋಜಿಲಾಗುತ್ತಿರುವ ಬೃಹತ್ ಹಿಂದೂ ಸಂಗಮ ಸಮಾವೇಶ ಮಣೂರು ಮಹಾಲಿಂಗೇಶ್ವರ ದೇಗುಲದಿಂದ ಕೋಟದ ಮಹತೋಭಾರ ಹಿರೇಮಹಾಲಿಂಗೇಶ್ಚರ ದೇಗುಲದ ವರೆಗೆ ಶೋಭಾಯಾತ್ರೆ ನಡೆಯಲಿದೆ ನಂತರ ಬೃಹತ್ ಹಿಂದೂ ಸಮಾವೇಶ ಮಾಂಗಲ್ಯ ಮಂದಿರದ ಮೈದಾನದಲ್ಲಿ ಜರಗಿಲಿದೆ ಎಂದು ಕೋಟ ಮಂಡಲ ಸಂಯೋಜಕ ರತ್ನಾಕರ ಪೂಜಾರಿ ಬಾರಿಕೆರೆ ತಿಳಿಸಿದರು.