Kundapra.com ಕುಂದಾಪ್ರ ಡಾಟ್ ಕಾಂ

ಪರೀಕ್ಷೆ ಪೂರ್ವ ತಯಾರಿ ವಿದ್ಯಾರ್ಥಿಗಳಲ್ಲಿ ನಿರಂತರ ಶ್ರಮವಿರಲಿ: ಆನಂದ ಸಿ. ಕುಂದರ್

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ವಾರ್ಷಿಕ ಪರೀಕ್ಷೆ ವಿದ್ಯಾರ್ಥಿಗಳ ಭವಿಷ್ಯದ ಅತ್ಯಮೂಲ್ಯ ಭಾಗ. ಕಲಿತಿರುವುದನ್ನು ಮನನ ಮಾಡಿಕೊಳ್ಳುವಲ್ಲಿ ಒಂದಿಷ್ಟು ಸಲಹೆ, ಪರೀಕ್ಷೆ ಬರೆಯುವ ಕ್ರಮ ಫಲಿತಾಂಶ ಹೆಚ್ಚಿಸುವಲ್ಲಿ ಶ್ರಮವಹಿಸಿ ಗುಣಮಟ್ಟದ ಗರಿಷ್ಠ ಮಟ್ಟದ ಫಲಿತಾಂಶ ದಾಖಲಿಸಿದರೆ ಗೀತಾನಂದ ಪೌಂಡೇಶನ್‌ನಿಂದ ವಿದ್ಯಾರ್ಥಿ ವೇತನ ಹಾಗೂ ಸಂಮಾನ ಮಾಡಲಾಗುವುದು ಎಂದು ಗೀತಾನಂದ ಟ್ರಸ್ಟ್ ಪ್ರವರ್ತಕ ಆನಂದ ಸಿ. ಕುಂದರ್ ನುಡಿದರು.

ಅವರು ಇತ್ತೀಚಿಗೆ ಗೀತಾನಂದ ಫೌಂಡೇಶನ್ ಮಣೂರು ಪಡುಕರೆ, ಮೊಗವೀರ ಯುವ ಸಂಘಟನೆ ಕೋಟ, ಮನಸ್ಮಿತಾ ಫೌಂಡೇಶನ್ ಕೋಟ ಆಶ್ರಯದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಮಣೂರು ಪಡುಕರೆ ಇಲ್ಲಿನ ಹತ್ತನೆ ತರಗತಿ ವಿದ್ಯಾರ್ಥಿಗಳಿಗೆ 3 ದಿನದ ಪ್ರೇರಣಾ ಶಿಬಿರವನ್ನು ಉದ್ಘಾಟಿಸಿ ಮಾತಾನಾಡಿದರು.

ಸಮಾರಂಭದಲ್ಲಿ ಉಪಸ್ಥಿತರಿರುವ ಡೆನ್ನಿಸ್ ಚಾಂಜಿ ಕೆ. ಪ್ರಾಂಶುಪಾಲರು ಮಣೂರು ಪಡುಕರೆ ಅವರ ವಿದ್ಯಾರ್ಥಿಗಳಿಗೆ ಶುಭಾಷಯ ಸಲ್ಲಿಸುವರೊಂದಿಗೆ ಪದವಿ ಪೂರ್ವ ಶಿಕ್ಷಣ ಕಡಿಮೆ ಶುಲ್ಕದಲ್ಲಿ ಕಲಿಯಲು ತಮ್ಮ ಸಂಸ್ಥೆಯಲ್ಲಿ ಅನುಕೂಲ ಇದೆ ಎಂದರು.

ಕಾರ್ಯಕ್ರಮದ ಆಯೋಜನೆಯಲ್ಲಿ ಸಹಕರಿಸಿದ ಮೊಗವೀರ ಯುವ ಸಂಘಟನೆ ಕೋಟ ಅಧ್ಯಕ್ಷ ರಂಜಿತ್ ಕುಮಾರ್, ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ವಾಹಿನಿ ಯುವಕ ಮಂಡಲದ ರಮೇಶ್ ಕುಂದರ್ ಉದಯ ಗಾಂವಕಾರ, ಮಂಜುನಾಥ ಹೊಳ್ಳ ಉಪಸ್ಥಿತರಿದ್ದರು.

ಶಿಕ್ಷಕ ರಾಮ್‌ದಾಸ್ ನಾಯಕ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಗೀತಾನಂದ ಪೌಂಢೇಶನ್‌ದ ರವಿಕಿರಣ ವಂದಿಸಿದರು. ವಿದ್ಯಾರ್ಥಿಗಳಾದ ಮೈತ್ರಿ ಮತ್ತು ಪೂರ್ವಿ ಅನಿಸಿಕೆ ಹೇಳಿದರು. ಶಿಕ್ಷಕ ಹೆರಿಯ ಮಾಸ್ಟರ್ ನಿರೂಸಿದರು .

ತದನಂತರ ವಿಜ್ಞಾನ ವಿಷಯದ ಸಂಪನ್ಮೂಲ ವ್ಯಕ್ತಿಗಳಾದ ಉದಯ ಗಾಂವಕಾರ ವಿದ್ಯಾರ್ಥಿಗಳಿಗೆ ತರಬೇತಿ ಅಧಿವೇಶ ನಡೆಸಿಕೊಟ್ಟರು. ಬೆಳಗಿನ ಅವಧಿಯಲ್ಲಿ ಗಣಿತ ವಿಷಯ ಸುಲಭ ಕಲಿಕೆ ಹೇಗೆ ಎಂಬುದನ್ನು ಸಂಪನ್ಮೂಲ ವ್ಯಕ್ತಿಗಳಾದ ಗಣೇಶ್ ಶೆಟ್ಟಿಗಾರ್ ನಿರ್ವಹಿಸಿದರು. ಶಿಕ್ಷಕರು, ವಿದ್ಯಾರ್ಥಿಗಳು ಶಿಬಿರದ ಪ್ರಯೋಜನ ಪಡೆದುಕೊಂಡರು.

Exit mobile version