Site icon Kundapra.com ಕುಂದಾಪ್ರ ಡಾಟ್ ಕಾಂ

ಸಾಸ್ತಾನ ಟೋಲ್‌ನಲ್ಲಿ ಯೋಧ ಶ್ಯಾಮ್ ರಾಜ್‌ಗೆ ಅಗೌರವ ಪ್ರಕರಣ, ಕೋಟ ಠಾಣೆಯಲ್ಲಿ ಸಭೆ

?????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಕುಂದಾಪ್ರ ಡಾಟ್‌ ಕಾಂ ಸುದ್ದಿ
ಕೋಟ:
ಗಣರಾಜ್ಯೋತ್ಸವ ಮುನ್ನದಿನ ಆಪರೇಶನ್ ಪರಾಕ್ರಮದಲ್ಲಿ ಭಾಗಿಯಾದ ಕಾಸರಗೋಡು ಯೋಧ ಶ್ಯಾಮ್ ರಾಜ್‌ ಅವರಿಗೆ ಸಾಸ್ತಾನ ಟೋಲ್‌ನಲ್ಲಿ ಅಗೌರವಾಗಿ ನಡೆಸಿಕೊಂಡ ಪ್ರಕರಣದ ಕುರಿತಂತೆ ಸೋಮವಾರ ಟೋಲ್ ಬಳಿ ನಿವೃತ್ತ ಯೋಧರ ಸಂಘ ಉಡುಪಿ ಹಾಗೂ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಸಾಸ್ತಾನ ಪ್ರತಿಭಟನೆ ಹಮ್ಮಿಕೊಂಡಿತು.

ಈ ಹಿನ್ನಲ್ಲೆಯಲ್ಲಿ ಕೋಟ ಠಾಣಾಧಿಕಾರಿ ಪ್ರವೀಣ್ ಕುಮಾರ್ ಮಂಗಳವಾರ ಕೋಟ ಠಾಣೆಯಲ್ಲಿ ಕೆ.ಕೆ. ಆರ್ ಕಂಪನಿ ಮ್ಯಾನೇಜರ್ ತಿಮ್ಮಯ್ಯ ಹಾಗೂ ನಿವೃತ್ತ ಯೋಧರ ಸಂಘ, ಹೆದ್ದಾರಿ ಜಾಗೃತಿ ಸಮಿತಿಯ ಪ್ರಮುಖರ ಸಮ್ಮುಖದಲ್ಲಿ ಸಭೆ ಏರ್ಪಡಿಸಿ ಸಮಸ್ಯೆಯ ಕುರಿತಂತೆ ಮಾಹಿತಿ ಕಲೆಹಾಕಿತು.

ಹೆದ್ದಾರಿ ಜಾಗೃತಿ ಸಮಿತಿ ಹಾಗೂ ನಿವೃತ್ತ ಸೈನಿಕರು , ಟೋಲ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಂದಾದ ತಪ್ಪುಗಳು ಮತ್ತು ಮುಂದಿನ ದಿನಗಳಲ್ಲಿ ನಿವೃತ್ತ ಯೋಧರಿಗೆ ವಿನಾಯಿತಿ,ಸ್ಥಳೀಯ ವಾಹನಗಳಿಗೆ ಸಮಸ್ಯೆ ನೀಡದಂತೆ,ಹೆದ್ದಾರಿ ದಾರಿದೀಪ,,ಸರ್ವಿಸ್ ರಸ್ತೆ ಇಲ್ಲದೆ ಅಪಘಾತ ಪ್ರಕರಣ ಕುರಿತಂತೆ ವಿಸ್ತ್ರತ ಚರ್ಚೆ ಏರ್ಪಟ್ಟಿತ್ತು

ಟೋಲ್ ಮ್ಯಾನೇಜರ್ ತಿಮ್ಮಯ್ಯ ಎಕ್ಸ್ ಮಿಲಿಟರಿ:
ಸಾಸ್ತಾನ ಹಾಗೂ ಹೆಜಮಾಡಿ ಟೋಲ್ ಉಸ್ತುವಾರಿ ನೋಡಿಕೊಳ್ಳುತ್ತಿರುವ ತಿಮ್ಮಯ್ಯ ಎಕ್ಸ್ ಮಿಲಿಟರಿ ಎಂಬ ವಿಚಾರದ ಹಿನ್ನಲ್ಲೆಯಲ್ಲಿ ನಿವೃತ್ತ ಯೋಧರು ಅವರೊಂದಿಗೆ ಠಾಣೆಯ ಹೊರಗೆ ಯೋಧರ ಅಗೌರವದ ಕುರಿತು ಚರ್ಚಿಸಿದರು. ಈ ವೇಳೆ ಟೋಲ್ ಸಿಬ್ಬಂದಿ ಯೋಧ ಶ್ಯಾಮರಾಜ್ ಜತೆ ನಡೆದುಕೊಂಡ ರೀತಿಯ ಬಗ್ಗೆ  ಸಮರ್ಥಿಸಿದ್ದು ಈ ವೇಳೆ ನಿವೃತ್ತ ಯೋಧರೊಂದಿಗೆ ಮಾತಿನಚಕಮಕಿ ನಡೆಯಿತು.ಮಧ್ಯಪ್ರೇಶಿಸಿದ ಠಾಣಾಧಿಕಾರಿ ಪ್ರವೀಣ್ ಕುಮಾರ್ ತಿಳಿಗೊಳಿಸಿ ಠಾಣೆಯೊಳಗೆ ಮಾತುಕತೆ ನಡೆಸಲು ಸೂಚಿಸಿದರು.

ಟೋಲ್ ಮ್ಯಾನೇಜ್ ಎಕ್ಸ್ ಮಿಲಿಟರಿ ಅನುಮಾನ ಆಕ್ರೋಶ:
ಸಭೆಯಲ್ಲಿ ಮಾತನಾಡಿದ ನಿವೃತ್ತ ಯೋಧರು ಟೋಲ್ ಮ್ಯಾನೇಜರ್ ತಿಮ್ಮಯ್ಯ ಎಕ್ಸ್ ಮಿಲಿಟರಿ ಹೌದೋ ಅಲ್ಲ ಎಂಬ ಅನುಮಾನ ಕಾಡುತ್ತಿದೆ. ಅವರ ವರ್ತನೆ ಈ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ರಾಷ್ಟ್ರೀಯ ಹೆದ್ದಾರಿಗೆ ಸಂಬಂದಿಸಿದ ಸಂಸ್ಥೆ ಶ್ಯಾಮ್ ರಾಜ್‌ಗೆ ವಿನಾಯಿತಿ ನೀಡಲಾಗಿದೆ ಎಂಬ ಪತ್ರವನ್ನು ಸೆಭೆಯ ಮುಂದಿಡಲಾಯಿತು. ಇಷ್ಟಿದ್ದು ಟೋಲ್ ಸಿಬ್ಬಂದಿಗಳಿಗೆ ಸಮರ್ಪಕ ತರಬೇತಿ ಟೋಲ್ ಉಸ್ತುವಾರಿಗಳು ನೀಡಿದಿದ್ದು, ಈ ಪ್ರಕರಣಕ್ಕೆ ಸಾಕ್ಷಿಯಾಗಿದೆ. ಈ ಕೂಡಲೇ ಕ್ಷೇಮೆ ಕೇಳಬೇಕು ಎಂದು ಆಗ್ರಹಿಸಿ ಪ್ರಕರಣ ದಾಖಲಿಸುವಂತೆ ಠಾಣಾಧಿಕಾರಿಯಲ್ಲಿ ನಿವೃತ್ತ ಯೋಧರು ಮನವಿ ಮಾಡಿದರು.

ಠಾಣೆಗೆ ಡಿವೈಎಸ್ ಪಿ ಧಿಡೀರ್ ಭೇಟಿ:
ಠಾಣೆಯಲ್ಲಿ ಠಾಣಾಧಿಕಾರಿ ಸಮ್ಮುಖದಲ್ಲಿ ಸಭೆ ನಡೆದು ಟೋಲ್ ಮುಖ್ಯಸ್ಥರ ಸೇರಿದಂತೆ ಹಲವರ ಮೇಲೆ ಪ್ರಕರಣ ದಾಖಲಿಸುವಂತೆ ನಿರ್ಧಸಿದ ಕೆಲವೇ ಕ್ಷಣದಲ್ಲಿ ಡಿವೈಎಸ್‌ಪಿ ಪ್ರಭು ಡಿ.ಟಿ ಭೇಟಿ ನೀಡಿ ಪುನಃ ಸಭೆ ನಡೆಸಿ ಟೋಲ್ ಮ್ಯಾನೇಜರ್ ಹಾಗೂ ಅಲ್ಲಿನ ಸಿಬ್ಬಂದಿಗಳನ್ನು ತರಾಟೆ ತೆಗೆದುಕೊಂಡು ಈ ಪ್ರಕರಣ ನಡೆಯದಂತೆ ಜಾಗೃತಿ ವಹಿಸಬೇಕಾಗಿದ್ದ ಟೋಲ್‌ನ ಸಿಬ್ಬಂದಿಗಳಿ ತರಬೇತಿಯ ಬಗ್ಗೆ ಅನುಮಾನು ವ್ಯಕ್ತಪಡಿಸಿ ಇಂತಹ ಪ್ರಕರಣಗಳು ಮತ್ತೆ ಮರುಕಳಿಸದಂತೆ ಜಾಗೃತಿ ವಹಿಸಲು ಟೋಲ್ ನವರಿಗೆ ಸೂಚಿಸಿದರು.ಅಲ್ಲದೆ ಪ್ರಕರಣ ದಾಖಲಿಸುವಂತೆ ನಿರ್ದೇಶನ ನೀಡುವುದಾಗಿ ಪುನರುಚ್ಚರಿಸಿದರು.

ತರಾಟೆ ತೆಗೆದುಕೊಂಡ ಹೆದ್ದಾರಿ ಸಮಿತಿ:
ನಿವೃತ್ತ ಯೋಧರಿಗೆ ಸಾಥ್ ನೀಡಿದ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿಯ ಅಧ್ಯಕ್ಷ ಶ್ಯಾಮ ಸುಂದರ್ ನಾಯರಿ, ಐರೋಡಿ ವಿಠ್ಠಲ್ ಪೂಜಾರಿ, ಪ್ರತಾಪ್ ಶೆಟ್ಟಿ, ನಾಗರಾಜ್ ಗಾಣಿಗ, ದಿನೇಶ್ ಗಾಣಿಗ ಟೋಲ್ ಈ ಹಿಂದೆ ನವಯುಗ ಕಂಪನಿ ಉಸ್ತುವಾರಿಯಲ್ಲಿ ಸಮರ್ಪಕವಾಗಿ ನಡೆಯುತ್ತಿತ್ತು ಆದರೆ ಇಂಗ್ಲೆಂಡ್ ಮೂಲದ ಕೆ.ಕೆ ಆರ್ ಕಂಪನಿ ತನ್ನ ಹಿಡಿತಕ್ಕೆ ಪಡೆದುಕೊಂಡ ನಂತರ ಇಡೀ ಹೆದ್ದಾರಿ ನಿರ್ವಹಣೆಯಲ್ಲಿ ಅವ್ಯವಸ್ಥೆ ತಲುಪಿಸಿದೆ, ಅಲ್ಲದೆ ಅಲ್ಲಿನ ಮ್ಯಾನೇಜರ್ ತಿಮ್ಮಯ್ಯ ರ್ದುನಡೆತೆಯನ್ನು ಸಭೆಯಲ್ಲಿ ಖಂಡಿಸಿದರು. ನಿವೃತ್ತ ಸೈನಿಕರಿಗೆ ನ್ಯಾಯ ಒದಗಿಸಬೇಕು, ಕ್ಷಮೆ ಕೇಳಬೇಕು, ಪ್ರಕರಣ ದಾಖಲಿಸಬೇಕು ಅಲ್ಲದೆ ತಿಮ್ಮಯ್ಯ ಸೇರಿದಂತೆ ಹಲವರಮೇಲೆ ಇಲ್ಲಿಂದ ವಜಾಗೊಳಿಸಬೇಕು  ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ  ಸಾಸ್ತಾನ ಟೋಲ್ ಯೋಜನಾ ಪ್ರಾಧಿಕಾರದ ಅಬ್ದುಲ್ ಜಾವೀದ್, ಜಗನ್ ಮೋಹನ್ ರೆಡ್ಡಿ, ಇಂದಿನ ಟೋಲ್ ಮ್ಯಾನೇಜರ್ ಬಾಬು, ಟೋಲ್ ಮ್ಯಾನೇಜರ್ ತಿಮ್ಮಯ್ಯ ಹಾಗೂ ಸಿಬ್ಬಂದಿಗಳಾದ ಸುರೇಶ್ ಮತ್ತು ಶಿವನಾಗ ಎಂಬ ಆರು ಮಂದಿಯ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ನಿವೃತ್ತ ಯೋಧರ ಸಂಘ ಕೋಟ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿತು.

ಡಿವೈಎಸ್ಪಿ ಪ್ರಭು ಡಿ.ಟಿ ಹೇಳಿಕೆ:
ದೂರು ಸ್ವೀಕರಿಸಿದ ಉಡುಪಿ ಡಿವೈಎಸ್ಪಿ ಪ್ರಭು ಡಿ.ಟಿ. ಅವರು ಪ್ರತಿಕ್ರಿಯಿಸಿ, ದೂರಿನಲ್ಲಿ ಕೆಲವು ಸೆಕ್ಷನ್‌ಗಳು ತಕ್ಷಣವೇ ಪ್ರಕರಣ ದಾಖಲಿಸಲು ಅನ್ವಯವಾಗದ ಕಾರಣ ದೂರು ಸ್ವೀಕರಿಸಲಾಗಿದೆ. ಸಂಬಂಧಪಟ್ಟವರಿಗೆ ನೋಟೀಸ್ ಜಾರಿ ಮಾಡಿ ವಿಚಾರಣೆ ನಡೆಸಿದ ಬಳಿಕ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದೂರುದಾರರಿಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಕೋಟ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಪ್ರವೀಣ್ ಕುಮಾರ್ ಆರ್. ಠಾಣಾ ಎಸ್‌ಐ ಮಾಂತೇಶ್, ಮಾಜಿ ಸೈನಿಕರಾದ ಕೇಶವ ಮಲ್ಪೆ, ಉಪಾಧ್ಯಕ್ಷ ಚಂದ್ರ ಅಮೀನ್,ಅಶೋಕ, ಸುರೇಶ್ ,ಹೆದ್ದಾರಿ ಹೋರಾಟ ಸಮಿತಿಯ ಶ್ಯಾಮ್ ಸುಂದರ್ ನಾಯಿರಿ, ವಿಠಲ್ ಪೂಜಾರಿ, ಪ್ರತಾಪ್ ಶೆಟ್ಟಿ, ದಿನೇಶ್ ಗಾಣಿಗ, ನಾಗರಾಜ್ ಗಾಣಿಗ, ರವೀಂದ್ರ ತಿಂಗಳಾಯ, ರತ್ನಾಕರ ಬಾರಿಕೆರೆ, ಕೋಟ ಕೀರ್ತೀಶ್ ಪೂಜಾರಿ ಮೊದಲದವರು ಇದ್ದರು.

Exit mobile version