ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಪಾರಂಪಳ್ಳಿಯ ವಿಷ್ಣುಮೂರ್ತಿ ದೇವಾಲಯದಲ್ಲಿ ಸುಪ್ರಭಾತ ಸೇವೆಯ ಆರಂಭಕ್ಕೆ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಮಚಂದ್ರ ಉಪಾಧ್ಯರು ಬುಧವಾರ ಚಾಲನೆ ನೀಡಿದರು.
ನಿವೃತ್ತ ಶಿಕ್ಷಕ ನರಸಿಂಹ ಐತಾಳರು ದಶಕಗಳ ಹಿಂದೆಯೇ ಕನ್ನಡದಲ್ಲಿ ರಚಿಸಿದ ಹಾಗೂ ಚಂದ್ರಶೇಖರ ಕೆದ್ಲಾಯ ಮತ್ತು ಪಲ್ಲವಿ ತುಂಗ ಧ್ವನಿ ನೀಡಿದ ಸುಪ್ರಭಾತದ ಆರಂಭೋತ್ಸವದಲ್ಲಿ ಅರ್ಚಕರಾದ ಮಿಥುನ ಆಡಿಗರ ನೇತೃತ್ವದಲ್ಲಿ ಪ್ರಾರ್ಥನೆ ಮಾಡಿ ಪೂಜೆ ಸಲ್ಲಿಸಲಾಯಿತು.

ಇದೇ ಸಂದರ್ಭದಲ್ಲಿ ಸುಪ್ರಭಾತ ರಚಿಸಿದ ನರಸಿಂಹ ಐತಾಳರನ್ನು ಹಾಗೂ ಅವರ ಪತ್ನಿ ಶೋಭಾ ಐತಾಳರನ್ನು ಅಭಿನಂದಿಸಲಾಯಿತು.
ಈ ಸಮಾರಂಭದಲ್ಲಿ ಕ.ಸಾ.ಪ. ಉಡುಪಿಯ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಉಪೇಂದ್ರ ಸೋಮಯಾಜಿ, ಕೋಟ ವಿದ್ಯಾಸಂಘದ ಜೊತೆ ಕಾರ್ಯದರ್ಶಿ ಮಂಜುನಾಥ ಉಪಾಧ್ಯ, ಅರುಣ ಮಧ್ಯಸ್ಥ, ಬಾಲಚಂದ್ರ ಹೇರ್ಳೆ, ಸುಧಾಕರ ಮಧ್ಯಸ್ಥ, ಸುಧಾಕರ ನಾವಡ, ರಶ್ಮಿ, ಸತ್ಯನಾರಾಯಣ ಭಟ್, ರಾಘವೇಂದ್ರ ಮಧ್ಯಸ್ಥ, ಶ್ರೀಪತಿ ಹೇರ್ಳೆ,ನಾರಾಯಣ ಪೂಜಾರಿ, ಸದಾನಂದ ಅಡಿಗ ಮೊದಲಾದವರು ಉಪಸ್ಥಿತರಿದ್ದರು.