Kundapra.com ಕುಂದಾಪ್ರ ಡಾಟ್ ಕಾಂ

ಕೋಟ ಅಮೃತೇಶ್ವರಿ ದೇಗುಲದಲ್ಲಿ ನಾಗಮಂಡಲೋತ್ಸವದ ಕಛೇರಿ ಉದ್ಘಾಟನೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ಇದೇ ಬರುವ ಮಾಚ್೯ 1ರಂದು ಕೋಟ ಅಮೃತೇಶ್ವರೀ ದೇಗುಲದ ವತಿಯಿಂದ ನಡೆಯಲಿರುವ ಏಕ: ಪ್ರವಿತ್ರ ನಾಗಮಂಡಲೋತ್ಸವದ ಕಛೇರಿಯನ್ನು ದೇಗುಲದ ಸಭಾಂಗಣದಲ್ಲಿ ಮೂಡುಗಿಳಿಯಾರಿನ ಹೊನ್ನಾರಿ ಬೊಬ್ಬರ್ಯ ದೈವಸ್ಥಾನದ ಪ್ರಧಾನ ಅರ್ಚಕ ಮಹಾಬಲ ಹೇರ್ಳೆ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ದೇಗುಲದ ಅಧ್ಯಕ್ಷ ಆನಂದ್ ಸಿ. ಕುಂದರ್, ದೇಗುಲದ ಟ್ರಸ್ಟಿಗಳಾದ ರತನ್ ಐತಾಳ್, ಶಿವ ಪೂಜಾರಿ, ಸುಧಾ ಎ. ಪೂಜಾರಿ, ಗಣೇಶ್ ನೆಲ್ಲಿಬೆಟ್ಟು, ಸುಭಾಷ್ ಶೆಟ್ಟಿ ಗಿಳಿಯಾರು, ಜ್ಯೋತಿ ಡಿ. ಕಾಂಚನ್, ಸುಬ್ರಾಯ ಜೋಗಿ, ಚಂದ್ರ ಆಚಾರ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

Exit mobile version