Kundapra.com ಕುಂದಾಪ್ರ ಡಾಟ್ ಕಾಂ

ಕೋಟ ನಾಗಮಂಡಲೋತ್ಸವಕ್ಕೆ ಚಪ್ಪರ ಮುಹೂರ್ತ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ
: ಇದೇ ಬರುವ ಮಾಚ್೯1ರಂದು ಕೋಟದ ಅಮೃತೇಶ್ವರೀ ದೇಗುಲದ ವತಿಯಿಂದ ನಡೆಯಲಿರುವ ಏಕ: ಪವಿತ್ರ ನಾಗಮಂಡಲೋತ್ಸವಕ್ಕೆ ಚಪ್ಪರ ಮುಹೂರ್ತ ಶುಕ್ರವಾರ ಜರಗಿತು.

ಶ್ರೀ ದೇಗುಲದ ನಾಗದೇವರಿಗೆ ಹಾಗೂ ಅಮೃತೇಶ್ವರೀ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ನಾಗಮಂಡಲ ನಡೆಯಲಿರುವ ಕೋಟ ಗಾಂಧಿ ಮೈದಾನದಲ್ಲಿ ಚಪ್ಪರ ಮುಹೂರ್ತ ಕಾರ್ಯಕ್ರಮವನ್ನು ವೇ.ಮೂ ಮಧುಸೂದನ್ ಬಾಯರಿ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ಸಲ್ಲಿಸಿಕೊಂಡು ದೇಗುಲದ ಅಧ್ಯಕ್ಷ ಆನಂದ್ ಸಿ. ಕುಂದರ್ ಅಡಿಕೆ ಮರವನ್ನು ನಿಲ್ಲಿಸುವ ಮೂಲಕ ಚಪ್ಪರ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಚಪ್ಪರ ಮುಹೂರ್ತ ಕಾರ್ಯದಲ್ಲಿ ಶ್ಯಾಮಿಯಾನ ಮಾಲಿಕರಾದ ದೇವದಾಸ್ ಕಾಂಚನ್ ಹಾಗೂ ಮಂಡಲದ ಚಪ್ಪರ ನೇತೃತ್ವ ಪಡೆದ ಭರತ್ ಗಾಣಿಗ, ಮೇಸ್ತ್ರೀ ಅಶೋಕ್ ಪೂಜಾರಿ ಅರ್ಚಕರಲ್ಲಿ ಪ್ರಸಾದ ಸ್ವೀಕರಿಸಿ ಪಾಲ್ಗೊಂಡರು.

ದೇಗುಲದ ಟ್ರಸ್ಟಿಗಳಾದ ರತನ್ ಐತಾಳ್, ಸುಧಾ ಎ. ಪೂಜಾರಿ, ಶಿವ ಪೂಜಾರಿ, ಸುಭಾಷ್ ಶೆಟ್ಟಿ, ಗಣೇಶ್ ನೆಲ್ಲಿಬೆಟ್ಟು, ಜ್ಯೋತಿ ಡಿ. ಕಾಂಚನ್, ಚಂದ್ರ ಆಚಾರ್, ಸುಬ್ರಾಯ ಜೋಗಿ, ಮಾಜಿ ಟ್ರಸ್ಟಿ ಚಂದ್ರ ಪೂಜಾರಿ, ಸುಶೀಲ ಸೋಮಶೇಖರ್, ಹೊನ್ನಾರಿ ಬೊಬ್ಬರ್ಯ ದೇಗುಲದ ಧರ್ಮದರ್ಶಿ ಮಹಾಬಲ ಹೇರ್ಳೆ, ಗಣ್ಯರಾದ ಮಲ್ಯಾಡಿ ಶಿವರಾಮ ಶೆಟ್ಟಿ, ಗಣೇಶ್ ಆಚಾರ್, ದೇಗುಲದ ಅರ್ಚಕ ಅಶ್ವತ್ ಜೋಗಿ, ದೇವೇಂದ್ರ ಗಾಣಿಗ, ರಾಘವೇಂದ್ರ ಪೂಜಾರಿ, ಗಣೇಶ್ ಪೂಜಾರಿ, ಕೋಟ ಸಿಎ ಬ್ಯಾಂಕ್ ಅಧ್ಯಕ್ಷ ಡಾ. ಕೃಷ್ಣ ಕಾಂಚನ್, ರವೀಂದ್ರ ಐತಾಳ್ ಪಾರಂಪಳ್ಳಿ, ಪ್ರತಾಪ್ ಶೆಟ್ಟಿ ಸಾಸ್ತಾನ, ನಾಗರಾಜ್ ಗಾಣಿಗ ಸಾಲಿಗ್ರಾಮ, ಶೇವಧಿ ನಾಗರಾಜ್ ಗಾಣಿಗ, ವೇಣುಗೋಪಾಲ ಶೆಟ್ಟಿ, ಮಹಾಬಲ ಆಚಾರ್, ಭುಜಂಗ ಗುರಿಕಾರ, ಕೃಷ್ಣ ಜೋಗಿ, ಗಣೇಶ್ ಭಂಡಾರಿ, ತಿಮ್ಮ ಕಾಂಚನ್, ಒಳಮಾಡು ಸೋಮ ಮರಕಾಲ, ಸುಧಾಕರ್ ಪೂಜಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Exit mobile version