ಕುಂದಾಪ್ರ ಡಾಟ್ ಕಾಂ ಸುದ್ದಿ..
ಕೋಟ: ಗ್ರಾಮಪಂಚಾಯತ್ ಅಭಿವೃದ್ಧಿಯಾಗಬೇಕು ತನ್ಮೂಕ ಜನಸೇವೆ ನಿರಂತರಗೊಳಿಸಿ ಜನಸ್ನೇಹಿ ಆಡಳಿತ ನೀಡುವಂತ್ತಾಗಬೇಕು ಎಂದು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು.
ಅವರು ಶುಕ್ರವಾರ ಪಾಂಡೇಶ್ವರ ಗ್ರಾಮಪಂಚಾಯತ್‌ನ ಮಹಾತ್ಮಾಗಾಂಧಿ ಸಭಾಂಗಣ, ವಿಕಲಚೇತನ ಕೊಠಡಿ ರೆಕಾರ್ಡ್ ರೂಮ್, ಶುದ್ಧ ಕುಡಿಯುವ ನೀರಿನ ಘಟಕ ಇದರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಪಂಚಾಯತ್ ಪ್ರತಿನಿಧಿಗಳ ಆಡಳಿತ ವ್ಯವಸ್ಥೆ ಅಂತ್ಯಗೊಳ್ಳುತ್ತಿದ್ದು ಮುಂದಿನ ಚುನಾವಣಾ ಪ್ರಕ್ರಿಯೆ ಮರಿಚಿಕೆಯಾಗದೆ ಜನರ ಅನುಕೂಲತೆಗೆ ಸಹಕಾರಿಯಾಗಲಿ ಎಂದು ಹಾರೈಸಿದರು.

ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ರೇಕಾಡ್೯ ರೂಮ್ ಅನ್ನು ಉದ್ಘಾಟಿಸಿದರು. ಕೆನರಾ ಬ್ಯಾಂಕ್ ವತಿಯಿಂದ ಕೊಡಮಾಡಿದ ಶುದ್ಧ ಕುಡಿಯುವ ನೀರಿನ ಘಟಕವನ್ನು ಕೆನರಾ ಬ್ಯಾಂಕ್ ಸಾಸ್ತಾನ ಶಾಖಾ ಪ್ರಭಂಧಕ ಪ್ರಜಿನ್ ಉದ್ಘಾಟಿಸಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚಾಯತ್ ಅಧ್ಯಕ್ಷೆ ಸುಶೀಲ ಪೂಜಾರಿ ವಹಿಸಿದ್ದರು. ಈ ಸಂದರ್ಭದಲ್ಲಿ ಪಂಚಾಯತ್ ನಲ್ಲಿ ಈ ಹಿಂದೆ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಇನಾಯಿತ್ ಉಲ್ಲಾ ಬೇಗ್, ಲೋಲಾಕ್ಷಿ, ಸತೀಶ್ ವಡ್ಡರ್ಸೆ ಇವರುಗಳನ್ನು ಸನ್ಮಾನಿಸಲಾಯಿತು.
ಸಭೆಯಲ್ಲಿ ಮಾಜಿ ಜಿಲ್ಲಾ ಪಂಚಾಯತ ಶಂಕರ್ ಎ. ಕುಂದರ್, ಗ್ರಾಮ ಆಡಳಿತಾಧಿಕಾರಿ ಐರಿನ್ ಶಾಂತಿ ಫೆರೆರಾ, ಪಂಚಾಯತ್ ಸದಸ್ಯರಾದ ಪ್ರತಾಪ್ ಶೆಟ್ಟಿ, ಸಂಧ್ಯಾ ರಾವ್, ಸುಜಾತ ವೆಂಕಟೇಶ, ಅನಿಲ್ ಹಾಂಡ, ರವೀಶ್ ಶ್ರೀಯಾನ್, ಕಲ್ಪನಾ ದಿನಕರ್ ಪೂಜಾರಿ, ನಿರ್ಮಲ, ಸ್ವಿಲ್ವಸ್ಟಾರ್ ಡಿಸೋಜ, ಸುಪ್ರಿತಾ, ನಂದಿನಿ, ಮಾಜಿ ಪಂಚಾಯತ್ ಅಧ್ಯಕ್ಷರುಗಳು ಉಪಸ್ಥಿತರಿದ್ದರು.
ವೈ ಬಿ ರಾಘವೇಂದ್ರ ಪ್ರಾಸ್ತಾವನೆ ಸಲ್ಲಿಸಿದರು. ಪಿಡಿಓ ವಂದನಾ ಸ್ವಾಗತಿಸಿದರು. ಕಾರ್ಯಕ್ರಮವನ್ನು ಪಂಚಾಯತ್ ಸದಸ್ಯ ಚಂದ್ರಮೋಹನ್ ನಿರೂಪಿಸಿದರು. ಕಾರ್ಯದರ್ಶಿ ವಿಜಯ ವಂದಿಸಿದರು.