Kundapra.com ಕುಂದಾಪ್ರ ಡಾಟ್ ಕಾಂ

ಪಂಚವರ್ಣದ 291ನೇ ವಾರದ ಪರಿಸರ ಸ್ನೇಹಿ ಸ್ವಚ್ಛತೆಯಲ್ಲಿ ಭಾಗಿಯಾಗಿ ಬಹುಮಾನ ಗೆಲ್ಲಿ ಯೋಜನೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ
: ಯುವ ಜನಾಂಗದಲ್ಲಿ ಹೆಚ್ಚು ಹೆಚ್ಚು ಪರಿಸರ ಜಾಗೃತಿ ಪ್ರಜ್ಞೆ ಬೆಳೆಯಬೇಕು, ಪರಿಸರವನ್ನು ಸ್ವಚ್ಛವಾಗಿರಿಸಿಕೊಳ್ಳಲು ಪಣ ತೊಡಬೇಕು ಎಂದು ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಡಾ. ಕೃಷ್ಣ ಕಾಂಚನ್ ಯುವ ಜನಾಂಗಕ್ಕೆ ಕಿವಿಮಾತು ಹೇಳಿದರು.

ಅವರು ಭಾನುವಾರ ಇಲ್ಲಿನ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಪಾರಂಪಳ್ಳಿ ಪಡುಕರೆ ಬೀಚ್‌ನಲ್ಲಿ ಪಂಚವರ್ಣ ಯುವಕ ಮಂಡಲ ಕೋಟ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಹಂದಟ್ಟು ಮಹಿಳಾ ಬಳಗ ಕೋಟ, ಮಣೂರು ಫ್ರೆಂಡ್ಸ್, ಗೀತಾನಂದ ಫೌಂಡೇಶನ್ ಮಣೂರು,ಸಮುದ್ಯತಾ ಗ್ರೂಪ್ಸ್ ಕೋಟ, ಜೆಸಿಐ ಕೋಟ ಸಿನಿಯರ್ ಲಿಜನ್ ಇವರ ಸಹಯೋಗದೊಂದಿಗೆ ವಿನ್ ಲೈಟ್ ಸ್ಪೋರ್ಟ್ಸ್ ಕ್ಲಬ್ ಪಾರಂಪಳ್ಳಿ, ಸಾಲಿಗ್ರಾಮ ಪಟ್ಟಣಪಂಚಾಯತ್ ಇವರ ಸಂಯೋಜನೆಯೊಂದಿಗೆ ಕ್ಯಾಪ್ಸ್ ಫೌಂಡೇಶನ್ ಬೆಂಗಳೂರು ಇವರ ಬಹುಮಾನ ಪ್ರಾಯೋಜಕತ್ವದಲ್ಲಿ 291ನೇ ಭಾನುವಾರದ ಪರಿಸರ ಸ್ನೇಹಿ ಅಭಿಯಾನ ಸ್ವಚ್ಛತೆಯಲ್ಲಿ ಭಾಗಿಯಾಗಿ ಬಹುಮಾನ ಗೆಲ್ಲಿ ಎಂಬ ವಿನೂತನ 2ನೇ ಪ್ರಯೋಗ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಸುತ್ತಮುತ್ತಲಿನ ಪರಿಸರದಲ್ಲಿ ತ್ಯಾಜ್ಯಗಳನ್ನು ಕಾಣುವುದಲ್ಲದೆ ಸಮುದ್ರ ತಟದಲ್ಲಿ ವಿಪರೀತ ಪ್ಲಾಸ್ಟಿಕ್ ತ್ಯಾಜ್ಯ ಪ್ರಕೃತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು ತ್ಯಾಜ್ಯ ಎಸೆಯುವ ಹೀನ ಮನಸ್ಥಿಯ ಬಗ್ಗೆ ಖೇಧ ವ್ಯಕ್ತಪಡಿಸಿ ಪಂಚವರ್ಣ ಸಂಘಟನೆ ನಿರಂತರ ಸಾಮಾಜಿಕ ಹಾಗೂ ಪ್ರಕೃತಿಯ ಮೇಲಿನ ಅವರು ಹಮ್ಮಿಕೊಳ್ಳುವ ಕಾರ್ಯಕ್ರಮ ಅತ್ಯಂತ ಪ್ರಶಂಸನೀಯ ಎಂದರಲ್ಲದೆ ಒಂದಿಷ್ಟು ಆಸಕ್ತ ಯುವ ಸ್ವಚ್ಛಾಗೃಹಿ ಮನಸ್ಸುಗಳು ಈ ಕಾರ್ಯದಲ್ಲಿ ಕೈಜೋಡಿಸಿ ಅಭಿಯಾನವನ್ನು ಯಶಸ್ವಿಗೊಳಿಸಿದ್ದು ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಪಂಚವರ್ಣ ಸಂಘಟನೆ ಗೌರವ ಸಲಹೆಗಾರ ರಘು ಮಧ್ಯಸ್ಥ, ಕೋಡಿ ಪಂಚಾಯತ್ ಸದಸ್ಯ ಕೃಷ್ಣ ಪೂಜಾರಿಪಿ, ವಿನ್ ಲೈಟ್ ಸ್ಪೋರ್ಟ್ಸ್ ಕ್ಲಬ್ ಮಾಜಿ ಅಧ್ಯಕ್ಷ ಗಿರೀಶ್ ಪೂಜಾರಿ, ಕಾರ್ಯದರ್ಶಿ ಸುಧಾಕರ್ ಪೂಜಾರಿ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಮನೋಹರ್ ಪೂಜಾರಿ, ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಹಂದಟ್ಟು ಮಹಿಳಾ ಬಳಗದ ಸ್ಥಾಪಕಾಧ್ಯಕ್ಷೆ ಪುಷ್ಭಾ ಹಂದಟ್ಟು, ಮಣೂರು ಫ್ರೆಂಡ್ಸ್ ಮಾಜಿ ಅಧ್ಯಕ್ಷ ದಿನೇಶ್ ಆಚಾರ್, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸುಮಾರು 24 ಯುವಕರು ಈ ಕಾರ್ಯದಲ್ಲಿ ಭಾಗವಹಿಸಿ ಬಹುಮಾನವನ್ನು ಪಡೆದುಕೊಂಡರು. ರವೀಂದ್ರ ಕೋಟ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ನಿರೂಪಿಸಿ, ಮಹಿಳಾ ಮಂಡಲದ ವಸಂತಿ ಹಂದಟ್ಟು ವಂದಿಸಿದರು.

Exit mobile version