ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಶ್ರೀ ಜಟ್ಟಿಗೆಶ್ವರ ಭಕ್ತ ವೃಂದ ಕುಂಜಿಗುಡಿ ಸಾಲಿಗ್ರಾಮ ಇದರ ನೇತೃತ್ವದಲ್ಲಿ 30ನೇ ವರ್ಷದ ಯಕ್ಷಗಾನ ಬಯಲಾಟವಾಗಿ ಅಮೃತೇಶ್ವರಿ ಮೇಳದ ವೇದಿಕೆಯಲ್ಲಿ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕೋಟ ಸುರೇಶ್ ಬಂಗೇರ ಅವರನ್ನು ಸನ್ಮಾನಿಸಲಾಯಿತು.
ಇದೇ ವೇಳೆ ಸಾರ್ವಜನಿಕ ಅನ್ನ ಸಂತರ್ಪಣೆ ಸೇವಕರ್ತರಾದ ಮಂಜುನಾಥ ಹೊಳ್ಳ ದಂಪತಿಗಳಿಗೆ ಮತ್ತು ಗೆಳೆಯರ ಬಳಗದ ತಾರಾನಾಥ ಹೊಳ್ಳರಿಗೆ ವಿಶೇಷ ಗೌರವಾರ್ಪಣೆ ಸಲ್ಲಿಸಲಾಯಿತು. ಯಕ್ಷಗಾನಕ್ಕೆ ವಾರ್ಷಿಕ ನಿತ್ಯನಿಧಿ ಠೇವಣಿದಾರರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಆರೋಗ್ಯ ಸೇವೆ, ಸಮಾಜ ಸೇವೆ, ವಿದ್ಯಾ ಸೇವೆ, ಧಾರ್ಮಿಕ ಸೇವೆಗೆ ಸಹಾಯ ನಿಧಿ ವಿತರಿಸಲಾಯಿತು.

ವೇದಿಕೆಯಲ್ಲಿ ಅತಿಥಿಗಳಾಗಿ ಉದ್ಯಮಿ ಕೃಷ್ಣಯ್ಯ ಪೂಜಾರಿ ಗದ್ದೆಮನೆ, ಶ್ರೀ ಜಟ್ಟಿಗೆಶ್ವರ ಭಕ್ತ ವೃಂದ ಅಧ್ಯಕ್ಷ ಗಣೇಶ್ ನಾಯರಿ, ಜಟ್ಟಿಗೆಶ್ವರ ಸಮಿತಿಯ ಕುಂಜುಗುಡಿ ಮಂಜುನಾಥ ನಾಯರಿ, ಅಮೃತೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರಾದ ಗಣೇಶ್ ನೆಲ್ಲಿಬೆಟ್ಟು, ಶಿವಪೂಜಾರಿ ಉಪಸ್ಥಿತರಿದ್ದರು. ಸಮಿತಿಯ ಕೆ. ಮಂಜುನಾಥ ನಾಯರಿ ಕಾರ್ಯಕ್ರಮ ನಿರೂಪಿಸಿ, ಸನ್ಮಾನ ಪತ್ರ ವಾಚಿಸಿ ಧನ್ಯವಾದ ಸಲ್ಲಿಸಿದರು.