Kundapra.com ಕುಂದಾಪ್ರ ಡಾಟ್ ಕಾಂ

ಕೋಟದ ನಾಗಮಂಡಲೋತ್ಸವ ಪೂರ್ವ ಸಿದ್ಧತಾ ಸಭೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ನಾಗಮಂಡಲೋತ್ಸವ ಇದೇ ಮೊದಲಲ್ಲ ಬದಲಾಗಿ ಕೆಲವರ್ಷಗಳ ಹಿಂದೆ ಅಮೃತೇಶ್ವರೀ ದೇಗುಲ ನಾಗಮಂಡಲೋತ್ಸವ ಯಶಸ್ವಿಯಾಗಿ ಪೂರೈಸಿದೆ ಆದರೆ ಪ್ರಸ್ತುತ ನಾಗಮಂಡಲೋತ್ಸವ ಒಂದು ರೀತಿಯಲ್ಲಿ ಭಕ್ತರ ನಿರ್ವಣೆಯೇ ದೊಡ್ಡ ಸವಾಲಿನ ಕಾರ್ಯ. ಈ ದಿಸೆಯಲ್ಲಿ ಸ್ವಯಂಸೇವಕರ ಪಾತ್ರ ಮಹತ್ವವಾದದ್ದು ಎಂದು ಅಮೃತೇಶ್ವರೀ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ್ ಸಿ. ಕುಂದರ್ ನುಡಿದರು.

ಇದೇ ಬರುವ ಮಾಚ್೯ 1ರಂದು ಕೋಟ ಅಮೃತೇಶ್ವರೀ ದೇಗುಲದ ವತಿಯಿಂದ ನಡೆಯಲಿರುವ ಏಕಃ ಪವಿತ್ರ ನಾಗಮಂಡಲೋತ್ಸವ ಇದರ ಪೂರ್ವ ಸಿದ್ಧತಾ ಸಭೆಯಲ್ಲಿ ಮಾಹಿತಿ ನೀಡಿ ಸುಮಾರು 30ಸಾವಿರಕ್ಕೂ ಅಧಿಕ ಭಕ್ತಾಧಿಗಳು ಸೇರುವ ನಿರೀಕ್ಷೆಯಿದ್ದು ಕೋಟದ ಗಾಂಧಿ ಮೈದಾನದಲ್ಲಿ ಊಟೋಪಚಾರ ಹಾಗೂ ನಾಗಮಂಡಲೋತ್ಸವ ನಡೆಯುವ ಸ್ಥಳವಾಗಿದ್ದು ಕೋಟದ ಶಾಂಭವೀ ಶಾಲಾ ಮೈದಾನ, ಕೋಟ ಪೋಲಿಸ್ ಸ್ಟೇಷನ್ ಮೈದಾನ, ಕೋಟದ ಬ್ರಹ್ಮಶ್ರೀ ನಾರಾಯಣಗುರು ಮಂದಿರ ಸ್ಥಳವನ್ನು ಪಾರ್ಕಿಂಗ್ ಸ್ಥಳವಾಗಿ ಗುರುತಿಸಲಾಗಿದೆ.

ಜನದಟ್ಟಣೆಯನ್ನು ಸಮರ್ಥವಾಗಿ ಭೋಜನಶಾಲೆಗೆ ಕೊಂಡ್ಯೋಯುವ ಮಾರ್ಗೋಪಾಯಗಳ ಬಗ್ಗೆ ಸಭೆಗೆ ತಿಳಿಸಿದರಲ್ಲದೆ ಅಮೃತೇಶ್ವರೀ ದೇಗುಲದ ಸಂಬಂಧಿಸಿದ ಹದಿನಾಲ್ಕು ಗ್ರಾಮಗಳಲ್ಲಿನ ಗ್ರಾಮಸ್ಥರ ಮೂಲಕ ಸ್ವಯಂಸೇವಕರ ತಂಡವನ್ನು ರಚಿಸಲಾಯಿತು. ಐದು ಶ್ರೀ ನಾಗದೇವರಿಗೆ ಸಂಬಂಧಿಸಿದ ಚಪ್ಪರದಲ್ಲಿ ಭೋಜನ ವ್ಯವಸ್ಥೆ ಒಂದು ಬಫೆ ಚಪ್ಪರಗಳಿರುವ ಬಗ್ಗೆ ಮಾಹಿತಿ ನೀಡಿದರು.

ಫೆ.25,26,27ಕ್ಕೆ ಹೊರೆಕಾಣಿ, 28ಕ್ಕೆ ಧಾರ್ಮಿಕ ಕಾಮಾಂಗ. ಮಾರ್ಚ್ 1ರಂದು  ನಾಗಮಂಡಲೋತ್ಸವದ ಪೂರ್ವಸಿದ್ಧತಾ ಧಾರ್ಮಿಕ ಕಾರ್ಯಕ್ರಮಗಳು ಫೆ.25ರಿಂದ27ರ ತನಕ ಹೊರೆಕಾಣಿಕೆಯ ಮೂಲಕ ಪ್ರಾರಂಭಗೊಳ್ಳಲಿದೆ ವಿವಿಧ ಭಾಗಗಳಿಂದ ಹೊರೆಕಾಣಿಕೆಯನ್ನು ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ಉಗ್ರಾಣದಲ್ಲಿ ಇರಿಸುವುದು ಅದನ್ನು ಸ್ವಯಂಸೇವಕರು ಸಮರೋಪಾದಿಯಲ್ಲಿ ನಿರ್ವಹಿಸುವ ಬಗ್ಗೆ ಮಾಹಿತಿ ನೀಡಿದ ಅವರು  27ರಿಂದ 28ರ ತನಕ ದೇಗುಲದಲ್ಲಿ ಕರ್ಮಾಂಗಗಳು ನಡೆಯಲಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಜವಾಬ್ದಾರಿ ಹಂಚಿಕೆ:
ಕೋಟದ ವಿವಿಧ ಭಾಗಗಳನ್ನು ಸೇರಿದಂತೆ ಸಾಲಿಗ್ರಾಮ, ಸಾಸ್ತಾನದ ವಿವಿಧ ಭಾಗಗಳ ಪ್ರಮುಖರಿಗೆ ಮಂಡಲೋತ್ಸವದ ಸ್ವಯಂಸೇವಕರ ನಿರ್ವಹಿಸುವ ಜವಾಬ್ದಾರಿಯನ್ನು ಸಭೆಯಲ್ಲಿ ಚರ್ಚಿಸಿ ಹಂಚಿಕೆ ಮಾಡಲಾಯಿತು.

ಸಭೆಯಲ್ಲಿ ಕೋಟ ಆರಕ್ಷಕ ಠಾಣಾಧಿಕಾರಿ ಪ್ರವೀಣ್ ಕುಮಾರ್, ಅಮೃತೇಶ್ವರೀ ದೇಗುಲದ ಟ್ರಸ್ಟಿಗಳಾದ ರತನ್ ಐತಾಳ್, ಸುಭಾಷ್ ಶೆಟ್ಟಿ, ಗಣೇಶ್ ನೆಲ್ಲಿಬೆಟ್ಟು, ಶಿವ ಪೂಜಾರಿ, ಸುಧಾ ಎ. ಪೂಜಾರಿ, ಸುಬ್ರಾಯ ಜೋಗಿ, ಜ್ಯೋತಿ ಡಿ. ಕಾಂಚನ್, ನಿವೃತ್ತ ಶಿಕ್ಷಕರಾದ ಬಾಲಕೃಷ್ಣ ಶೆಟ್ಟಿ, ಗಣೇಶ್ ಜಿ., ಪ್ರತಾಪ್ ಶೆಟ್ಟಿ ಸಾಸ್ತಾನ, ಭಾಸ್ಕರ್ ಶೆಟ್ಟಿ ಮಣೂರು, ಐರೋಡಿ ರಮೇಶ್ ಕಾರಂತ್, ರವೀಂದ್ರ ಐತಾಳ್ ಪಾರಂಪಳ್ಳಿ, ಶೇವಧಿ ಸುರೇಶ್ ಗಾಣಿಗ, ದೇಗುಲದ ಮಾಜಿ ಟ್ರಸ್ಟಿಗಳು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ದೇಗುಲದ ಟ್ರಸ್ಟಿ ಚಂದ್ರ ಆಚಾರ್ ಕಾರ್ಯಕ್ರಮ ನಿರ್ವಹಿಸಿದರು.

Exit mobile version