ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಜೈಹಿಂದ್ ಕ್ರಿಕೆಟರ್ಸ್ ಮಣೂರು ಪಡುಕರೆ ಇವರ ಆಶ್ರಯದಲ್ಲಿ ಜೈಹಿಂದ್ ಪ್ರೀಮಿಯರ್ ಲಿಗ್ ಕ್ರಿಕೆಟ್ ಪಂದ್ಯಾಕೂಟ ಭಾನುವಾರ ಮಣೂರು ಪಡುಕರೆ ಪದವಿ ಕಾಲೇಜಿನ ಮೈದಾನದಲ್ಲಿ ಜರಗಿತು.
ಕಾರ್ಯಕ್ರಮವನ್ನು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ. ಕುಂದರ್ ಅವರು ಕ್ರಿಕೆಟ್ ಪಂದ್ಯಾಕೂಟವನ್ನು ಉದ್ಘಾಟಿಸಿ ಮಾತನಾಡಿ, ಜೈಹಿಂದ್ ಕ್ರಿಕೆಟರ್ಸ್ ಕ್ರೀಡೆಯ ಜತೆ ಸಾಮಾಜಿಕ ಕಾರ್ಯವನ್ನು ವಸ್ತುನಿಷ್ಠೆಯಾಗಿ ಸೇವೆ ಸಲ್ಲಿಸುತ್ತಿದೆ ಇದು ಶ್ಲಾಘನೀಯ ಕಾರ್ಯ, ಅಶಕ್ತರಿಗೆ ನೆರವು,ಅನಾರೋಗ್ಯ ಪೀಡಿತರಿಗೆ ಶೈಕ್ಷಣಿಕಸೇವೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಇಂಥಹ ಕ್ರೀಡಾ ಚಟುವಟಿಕೆಯ ಸಂಘಟನೆಗಳು ಗ್ರಾಮದಲ್ಲಿ ಪಸರಿಸಲಿ ಎಂದು ಹಾರೈಸಿದರು.

ಸಭೆಯ ಅಧ್ಯಕ್ಷತೆಯನ್ನು ಕೋಟ ಪಂಚಾಯತ್ ಸದಸ್ಯರಾದ ಜಯರಾಮ ಶೆಟ್ಟಿ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಮನೋವೈದ್ಯರಾದ ಡಾ. ಪ್ರಕಾಶ್ ತೋಳಾರ್, ಉದ್ಯಮಿ ಬೀಜುನಾಯರ್, ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಶೆಣೈ, ಮಣೂರು ಮಹಾಲಿಂಗೇಶ್ವರ ದೇಗುಲದ ಅಧ್ಯಕ್ಷ ಸತೀಶ್ ಎಚ್. ಕುಂದರ್, ಮಾಜಿ ತಾ.ಪಂ ಅಧ್ಯಕ್ಷೆ ಜ್ಯೋತಿ ಉದಯ್ ಕುಮಾರ್, ಸಾಮಾಜಿಕ ಕಾರ್ಯಕರ್ತ ದಿನೇಶ್ ಗಾಣಿಗ, ಜೈಹಿಂದ್ ಕ್ರಿಕೆಟಸ್೯ ಪ್ರಶಾಂತ್ ಪಡುಕರೆ ಉಪಸ್ಥಿತರಿದ್ದರು.
ಕೀರ್ತೀಶ್ ಪೂಜಾರಿ ಕಾರ್ಯಕ್ರಮದಲ್ಲಿ ಸ್ವಾಗತಿಸಿ ನಿರೂಪಿಸಿ, ವಂದಿಸಿದರು.