Site icon Kundapra.com ಕುಂದಾಪ್ರ ಡಾಟ್ ಕಾಂ

ಸಾಲಿಗ್ರಾಮ ದೇಗುಲಕ್ಕೆ ಖ್ಯಾತ ಚಲನಚಿತ್ರ ನಟ ಉಪೇಂದ್ರ ದಂಪತಿ ಭೇಟಿ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ: 
ಕನ್ನಡ ಚಿತ್ರರಂಗದ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಪತ್ನಿ ಪ್ರಿಯಾಂಕಾ ಉಪೇಂದ್ರ ತಮ್ಮ ಕುಟುಂಬದವರೊಂದಿಗೆ ಕುಲದೇವರಾದ  ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಳಕ್ಕೆ  ಮಂಗಳವಾರ ಭೇಟಿ ನೀಡಿ ಸೇವೆ ಸಲ್ಲಿಸಿದರು.

ದೇಗುಲದ ವತಿಯಿಂದ ಪ್ರಸಾದ ವಿತರಿಸಿ ಶಾಲು ಹೋದಿಸಿ ಗೌರವಿಸಲಾಯಿತು.

ಆಡಳಿತ ಮಂಡಳಿಯ ಕಾರ್ಯದರ್ಶಿ ಲಕ್ಷ್ಮೀನಾರಾಯಣ ತುಂಗ, ಸದಸ್ಯರಾದ ಶ್ರೀಧರ ರಾವ್ ಕೇರಳ ಹಾಗೂ ದೇಗುಲದ ಮ್ಯಾನೇಜರ್ ಗಣೇಶ್ ಭಟ್ಟ ಮತ್ತಿತರರು ಇದ್ದರು.

Exit mobile version