Kundapra.com ಕುಂದಾಪ್ರ ಡಾಟ್ ಕಾಂ

ಕೋಟ ಅಮೃತೇಶ್ವರಿ ದೇಗುಲದ ನಾಗಮಂಡಲದ ಉಗ್ರಾಣ, ಪಾಕ ಮುಹೂರ್ತ

???????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ಇದೇ ಬರುವ ಮಾಚ್೯ 1ರಂದು ಕೋಟದ ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇಗುಲದ ವತಿಯಿಂದ ನಡೆಯಲಿರುವ ಏಕ ಪವಿತ್ರ ನಾಗಮಂಡಲೋತ್ಸವ ಇದರ ಉಗ್ರಾಣ ಮುಹೂರ್ತ ಬುಧವಾರ ಜರಗಿತು.

ವೇ.ಮೂ.ಮಧುಸೂದನ್ ಬಾಯರಿ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ದೇಗುಲದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಆನಂದ್ ಸಿ. ಕುಂದರ್ ಸಮ್ಮುಖದಲ್ಲಿ ಜರಗಿತು.

ಪೂರ್ವಾಹ್ನ ದೇಗುಲದ ದೇವಿ ಅಮೃತೇಶ್ವರೀ ಹಲವು ಮಕ್ಕಳ ತಾಯಿಗೆ  ಪೂಜೆ ಸಲ್ಲಿಸಿ ಸ್ಥಳ ಸಾನಿಧ್ಯದ ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಕೋಟದ ಗಾಂಧಿ ಮೈದಾನದಲ್ಲಿರುವ ಉಗ್ರಾಣ ಚಪ್ಪರದಲ್ಲಿ ಧಾರ್ಮಿಕ ಕಾರ್ಯಗಳನ್ನು ನೆರವೆರಿಸಲಾಯಿತು.

ಡಾ.ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಮುಖ್ಯಸ್ಥ ನಾಡೋಜ ಡಾ.ಜಿ ಶಂಕರ್ ದೇಗುಲದ ನಾಗಮಂಡಲೋತ್ಸವ ವಿಶೇಷ ಹೊರೆಕಾಣಿಕೆಯನ್ನು ಸಹೋದರ ಶಿವ ಎಸ್. ಕರ್ಕೇರ ಮೂಲಕ ದೇಗುಲದ ಅಧ್ಯಕ್ಷರಿಗೆ ಸಮರ್ಪಿಸಿದರು.

ಅನ್ನದಾಸೋಹಕ್ಕೆ ಚಪ್ಪರದಲ್ಲಿ ಅಗ್ನಿಸ್ಪರ್ಶ:
ಕೋಟದ ಗಾಂಧಿ ಮೈದಾನದಲ್ಲಿರುವ ನಾಗಮಂಡಲದ ಅನ್ನದಾಸೋಹದ ಚಪ್ಪರದಲ್ಲಿ ಒಲೆ ಮುಹೂರ್ತ ಕೈಗೊಳ್ಳಲಾಯಿತು. ನಾಗಮಂಡಲದ ಅಡುಗೆಯ ಪಾಕತಜ್ಞ ಸುಂದರ್ ಭಟ್ ಮೂಲಕ ಅಗ್ನಿ ಸ್ಪರ್ಶಿಸಿ ದೇಗುಲದ ಟ್ರಸ್ಟಿಗಳಾದ ಸುಧಾ ಎ. ಪೂಜಾರಿ, ಜ್ಯೋತಿ ಡಿ. ಕಾಂಚನ್, ಮಾಜಿ ಟ್ರಸ್ಟಿ ಸುಶೀಲ ಸೋಮಶೇಖರ್ ದೇಗುಲದ ಅಧ್ಯಕ್ಷ ಆನಂದ್ ಸಿ. ಕುಂದರ್ ಸಮ್ಮುಖದಲ್ಲಿ ದಾಸೋಹದ ಒಲೆಗೆ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ದೇಗುಲದ ಟ್ರಸ್ಟಿಗಳಾದ ಸುಭಾಷ್ ಶೆಟ್ಟಿ, ಗಣೇಶ್ ನೆಲ್ಲಿಬೆಟ್ಟು, ಶಿವ ಪೂಜಾರಿ, ಸುಧಾ ಎ.ಪೂಜಾರಿ, ಜ್ಯೋತಿ ಕಾಂಚನ್, ಸುಬ್ರಾಯ ಜೋಗಿ, ರತನ್ ಐತಾಳ್, ಚಂದ್ರ ಆಚಾರ್, ಮಾಜಿ ಟ್ರಸ್ಟಿಗಳಾದ ಚಂದ್ರ ಪೂಜಾರಿ, ಸುಶೀಲಸೋಮಶೇಖರ್, ಕೋಟ ಪಂಚಾಯತ್ ಸದಸ್ಯ ಭುಜಂಗ ಗುರಿಕಾರ, ಗ್ರಾಮಸ್ಥರು ಉಪಸ್ಥಿತರಿದ್ದರು.

Exit mobile version