ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಸನ್ನಿಧಾನದಲ್ಲಿ ಪರಿಮಳ ಪ್ರಶಸ್ತಿ ಕಾರ್ಯಕ್ರಮದ ವೇದಿಕೆಯಲ್ಲಿ ಸಾಲಿಗ್ರಾಮದ ಲಕ್ಷ್ಮೀಕೃಷ್ಣಮೂರ್ತಿ ಮರಕಾಲ ಇವರ ಪುತ್ರಿ ಬಹುಮುಖ ಪ್ರತಿಭೆ ಸುಶ್ಮಿತಾ ಇವರ ಭರತನಾಟ್ಯ ಹಾಗೂ ಕರಾವಳಿಯ ಗಂಡುಕಲೆ ಯಕ್ಷಗಾನ ನೃತ್ಯ ಕಾರ್ಯಕ್ರಮ ನೆರವೇರಿತು.
ಈ ಸಂದರ್ಭದಲ್ಲಿಮಂತ್ರಾಲಯ ಶ್ರೀ ಮತ್ಸುಬುಧೇಂದ್ರತೀರ್ಥ ಶ್ರೀಪಾದಂಗಳವರಿಗೆ ಸುಶ್ಮಿತಾ ಸಾಲಿಗ್ರಾಮ ತನ್ನ ಕೈಚಳಕದಿಂದ ಶ್ರೀ ರಾಘುವೇಂದ್ರಸ್ವಾಮಿಯವರ ಹಾಗೂ ಶ್ರೀ ಸುಭುದೇಂದ್ರಸ್ವಾಮಿಗಳ ನೂಲಿನ ಕಲಾ ಕಸೂತಿಯ ಚಿತ್ರವನ್ನು ರಚಿಸಿ ಸಮರ್ಪಿಸಿದರು.
ವೇದಿಕೆಯಲ್ಲಿ ತನ್ನ ಎಲ್ಲಾ ಕಲಾಪ್ರತಿಭೆಗಳನ್ನು ಪ್ರದರ್ಶಿಸಿ ಗುರುಗಳ ಮೆಚ್ಚುಗೆ ಪಾತ್ರರಾದ ಸುಶ್ಮಿತಾವರಿಗೆ ಮಂತ್ರಾಕ್ಷತೆಯ ಆಶೀವದಿಸಿ ಶ್ಲಾಘಿಸಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ವಿಧಾನಪರಿಷತ್ ಸಭಾಧ್ಯಕ್ಷ ಬಸವರಾಜ ಹೊರಟ್ಟಿ, ವಿಧಾನಸಭಾ ಸದಸ್ಯ ಬಸವನಗೌಡ ಪಾಟೀಲ್ ಯತ್ನಳ್ , ಹರೀಶ ಪ್ರಾಂಜ, ಡಾ ಶಾಲಿನಿ ರಜನೀಶ್, ಡಾ.ಸಿ.ಎನ್ ಅಶ್ವತನಾರಾಯಣ ಅನೇಕ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

