Site icon Kundapra.com ಕುಂದಾಪ್ರ ಡಾಟ್ ಕಾಂ

ಪಾಂಡೇಶ್ವರ ಸ್ನೇಹ ಸಂಜೀವಿನಿ ಒಕ್ಕೂಟಕ್ಕೆ ಆಯ್ಕೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ
: ಪಾಂಡೇಶ್ವರ ಗ್ರಾಮಪಂಚಾಯತ್‌ನ ಸ್ನೇಹ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳ ಬದಲಾವಣೆ ಇತ್ತೀಚಿಗೆ ನಡೆಯಿತು.

ನೂತನ ಅಧ್ಯಕ್ಷರಾಗಿ ಸುಜಾತಾ ವೆಂಕಟೇಶ್ ಪೂಜಾರಿ, ಕಾರ್ಯದರ್ಶಿಯಾಗಿ ಅಮಿಷ, ಕೋಶಾಧಿಕಾರಿ ಮಮತಾ, ಉಪಾಧ್ಯಕ್ಷರಾಗಿ ಲವೀನಾ, ಜೊತೆ ಕಾರ್ಯದರ್ಶಿಯಾಗಿ ರತ್ನ ಅವರು ಆಯ್ಕೆಯಾದರು.

ಆಯ್ಕೆ ಪ್ರಕ್ರಿಯೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಂದನಾ, ಒಕ್ಕೂಟದ ಅಧ್ಯಕ್ಷರು, ಕಾರ್ಯದರ್ಶಿ ಎಂಬಿಕೆ, ಎಲ್‌ಸಿಆರ್‌ಪಿ  ವಿವಿಧ ಘಟಕಗಳ ಸಖಿ, ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿ ಸಭೆಯಲ್ಲಿ ಉಪಸ್ಥಿತರಿದ್ದರು. ಎಂಬಿಕೆ ಉಷಾ ಗಣೇಶ್ ಪೂಜಾರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ಎಲ್‌ಸಿಆರ್‌ಪಿ ಸುಜಾತಾ ವಂದಿಸಿದರು.

Exit mobile version