Kundapra.com ಕುಂದಾಪ್ರ ಡಾಟ್ ಕಾಂ

ನಾಗಮಂಡಲದ ಯಶಸ್ಸು ಭಗವಂತನ ಇಚ್ಛೆಯಂತೆ ನೆರವೇರಿದೆ: ಆನಂದ್ ಸಿ. ಕುಂದರ್

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ನಾಗಮಂಗಲೋತ್ಸವದ ಯಶಸ್ಸು ಶ್ರೀ ದೇವರ ಇಚ್ಛೆಯಂತೆ ನೆರವೇರಿದೆ ಎಂದು ಕೋಟದ ಅಮೃತೇಶ್ವರೀ ದೇಗುಲದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಆನಂದ್ ಸಿ. ಕುಂದರ್ ಹೇಳಿದರು.

ಅವರು ಕೋಟ ಅಮೃತೇಶ್ವರೀ ಸಭಾಂಗಣದಲ್ಲಿ ಹಮ್ಮಿಕೊಂಡ ಕೃತಜ್ಞತಾ ಸಭೆಯಲ್ಲಿ ಮಾತನಾಡಿದರು. ನಾಗಮಂಡಲದಲ್ಲಿ ಸ್ವಯಂಸೇವಕರ ಹಾಗೂ ಹದಿನಾಲ್ಕು ಗ್ರಾಮದ ಗ್ರಾಮಸ್ಥರ ಪಾತ್ರದ ಕುರಿತು ಸಭೆಯಲ್ಲಿ ಪ್ರಸ್ತಾಪಿಸಿದ ಅವರು ದೇಗುಲದ ಆಡಳಿತ ಮಂಡಳಿ ಅವಿರತವಾಗಿ ಶ್ರಮಿಸಿದನ್ನು ಸ್ಮರಿಸಿದರು. ಈ ಹಿನ್ನಲ್ಲೆಯಲ್ಲಿ ಮಿತ್ರ ಭೋಜನಕೂಟವನ್ನು ಹಮ್ಮಿಕೊಂಡಿದ್ದು ಯಶಸ್ಸಿಗೆ ಶ್ರಮಿಸಿದ ಸಂಘಸಂಸ್ಥೆ, ಗಣ್ಯರಿಗೆ ಕೃತಜ್ಞತೆ ಸಲ್ಲಿಸಿದರಲ್ಲದೆ ಈ ಹಿನ್ನಲ್ಲೆಯಲ್ಲಿ ಆಗಮಿಸಿದ ಪ್ರತಿಯೊರ್ವರಿಗೂ ತಮ್ಮ ಗೀತಾನಂದ ಫೌಂಡೇಶನ್ ವತಿಯಿಂದ ಹಸಿರು ಗಿಡಗಳಾದ ಮಾವು, ಹಲಸು, ಹೂವಿನ 3000 ಅಧಿಕ ಗಿಡಗಳನ್ನು ನೀಡಿದರು.

ಸಭೆಯಲ್ಲಿ ದೇಗುಲದ ಟ್ರಸ್ಟಿಗಳಾದ ರತನ್ ಐತಾಳ್, ಶಿವ ಪೂಜಾರಿ, ಗಣೇಶ್ ನೆಲ್ಲಿಬೆಟ್ಟು, ಸುಧಾ ಎ. ಪೂಜಾರಿ, ಸುಭಾಷ್ ಶೆಟ್ಟಿ ಗಿಳಿಯಾರು, ಸುಬ್ರಾಯ ಜೋಗಿ, ಜ್ಯೋತಿ ಡಿ. ಕಾಂಚನ್ ಉಪಸ್ಥಿತರಿದ್ದರು.

ಟ್ರಸ್ಟಿ ಚಂದ್ರ ಆಚಾರ್ ಸ್ವಾಗತಿಸಿ, ಪ್ರಾಸ್ತಾವನೆ ಸಲ್ಲಿಸಿ ನಿರೂಪಿಸಿದರೆ, ನಿವೃತ್ತ ಶಿಕ್ಷಕ ಗಣೇಶ್ ಜಿ. ವಂದಿಸಿದರು. ಸ್ವಯಂಸೇವಕರಾಗಿ ಭಾಗವಹಿಸದ ಸಾವಿರಾರು ಮಂದಿ ಮಿತ್ರಕೂಟದಲ್ಲಿ ಭಾಗಿಯಾದರು.

Exit mobile version