Kundapra.com ಕುಂದಾಪ್ರ ಡಾಟ್ ಕಾಂ

ಸುಂದರ ಸಂಜೆಗೆ ಸಾಂಸ್ಕೃತಿಕ ರಂಗು ತುಂಬಿದ ಕುಸುಮಾಂಜಲಿ 2015

ಮಕ್ಕಳ ಮೇಲೆ ಹೇರಿಕೆ ಬೇಡ. ಕಲೆಯ ಆಸ್ವಾದನೆಯ ಮೂಲಕ ಮಾನವರಾಗೋಣ: ಜಯಂತ ಕಾಯ್ಕಿಣಿ
ಮರಗಳು ನನ್ನ ಮಕ್ಕಳು, ದೇಶದ ಜನರೇ ನನ್ನ ಬಂಧುಗಳು: ಸಾಲು ಮರದ ತಿಮ್ಮಕ್ಕ

ಕುಂದಾಪ್ರ ಡಾಟ್ ಕಾಂ ವರದಿ.

ಸುಂದರ ಸಂಜೆಯನ್ನು ಮತ್ತಷ್ಟು ರಂಗಾಗಿಸುವ ಸಮಾರಂಭ ನಾಗೂರಿನ ಕುಸುಮಾ ಗ್ರೂಪ್ ಆವರಣದಲ್ಲಿ ಅದ್ದೂರಿಯಾಗಿ ನಡೆಯಿತು. ಕಲೆ, ಸಾಹಿತ್ಯ, ಸಂಗೀತ ಪ್ರೀಯರಿಗಾಗಿ ಒಂದಿಷ್ಟು ಹೊತ್ತು ಬೇರೆಯದೇ ಲೋಕಕ್ಕೆ ಕೊಂಡೊಯ್ಯುವ, ಸಂಗೀತ್ಯಾಸಕ್ತ ಮಕ್ಕಳಿಗೊಂದು ವೇದಿಕೆ ಒದಗಿಸುವ, ಸಮಾಜಕ್ಕಾಗಿ ಬದುಕಿದ ಹಿರಿಯ ಜೀವವನ್ನು ಗುರುತಿಸಿ ಗೌರವಿಸುವ ಒಂದು ವಿನೂತನ ಪ್ರಯತ್ನಕ್ಕೆ ’ಕುಸುಮಾಂಜಲಿ 2015’ ಸಾಕ್ಷಿಯಾಯಿತು.

ನಾಗೂರಿನ ಕುಸುಮ ಫೌಂಡೇಶನ್ ಆಶ್ರಯದಲ್ಲಿ ಆಯೋಜಿಸಲಾಗಿದ್ದ ’ಕುಸುಮಾಂಜಲಿ 2015’ರಲ್ಲಿ ಸಾವಿರ ಸಂಖೆಯಲ್ಲಿ ನೆರೆದಿದ್ದ ಜನಸಮೂಹ ಕಾರ್ಯಕ್ರಮದೊಂದಿಗೆ ಇಲಿನ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಮನತುಂಬಿ ಶ್ಲಾಘಿಸಿದರು. ಹೋಮ್ ಎಕ್ಸ್‌ಪೋದಲ್ಲಿ ಮೂರು ಕಂಪೆನಿಗಳ ಉತ್ಪನ್ನಗಳ ಪ್ರದರ್ಶನ, ಪುಡ್‌ಕೋಟ್ ನಲ್ಲಿನ ವಿವಿಧ ಬಗೆಯ ಖಾದ್ಯಗಳು, ಲಕ್ಕಿ ಕೂಪನ್ ವ್ಯವಸ್ಥೆ, ಸ್ವಚ್ಚತೆ ಸುರಕ್ಷತೆಗೆಗಾಗಿ ಕೈಗೊಂಡ ಕ್ರಮಗಳು ಎಲ್ಲವೂ ಇಲ್ಲಿ ಅಚ್ಚುಕಟ್ಟು.

ಕಾರ್ಯಕ್ರಮದಲ್ಲಿ ಕುಸುಮಾಶ್ರೀ ಹಾಗೂ ಗಾನಕುಸುಮ ಪ್ರಶಸ್ತಿ ಪ್ರದಾನಿಸಿದ ಸಾಹಿತಿ ಜಯಂತಿ ಕಾಯ್ಕಿಣಿ ಮಾತನಾಡಿ, ಇಂದು ಎಲ್ಲವನ್ನೂ ಉಪಭೋಗದ ವಸ್ತುವನ್ನಾಗಿ ನೋಡುವ ಕಾಲಘಟ್ಟದಲ್ಲಿ ನಾವಿದ್ದೇವೆ. ಮಕ್ಕಳ ಮೇಲೆ ಅನಗತ್ಯ ಹೊರೆ ಹೊರಿಸಿ ಅವರಲ್ಲಿನ ಲವಲವಿಕೆ, ಭಾವನಾತ್ಮಕೆಯನ್ನೇ ಕಿತ್ತುಕೊಳ್ಳುತ್ತಿದ್ದೇವೆ. ಎಲ್ಲದರಲ್ಲಿಯೂ ಸ್ಕೋಪ್ ಹುಡುಕಲು ಹೊರಟಿರುವುದು ಹೊಸ ತಲೆಮಾರಿನ ಮಕ್ಕಳು ಹಾಗೂ ಪೋಷಕರನ್ನು ಕಂಗೆಡಿಸಿಬಿಟ್ಟಿದೆ ಎಂದು ವಿಷಾದಿಸಿದರು.(ಕುಂದಾಪ್ರ ಡಾಟ್ ಕಾಂ)

[quote font_size=”15″ bgcolor=”#ffffff” bcolor=”#81d742″ arrow=”yes” align=”right”]* ಪತಿ ದೇವರು ಮಕ್ಕಳಿಲ್ಲ ಎಂಬ ಕೊರಗಿಗೆ ಮರ ಬೆಳೆಸುವ ಕಾರ್ಯಕ್ಕೆ ಮುಂದಾದರು. ಒಂದು ಹೊತ್ತು ಕೂಲಿ ಮಾಡಿ ಒಂದು ಹೊತ್ತು ಮರ ನೆಡುವ ಕಾಯಕ ಆರಂಭಿಸಿದೆವು. ಹಾದಿಯುದ್ದಕ್ಕೂ ಮರಗಳನ್ನು ನೆಡುತ್ತಾ ನೀರು ಸಿಕ್ಕಲ್ಲಿ ಮರಗಳಿಗೆ ಹಾಕುತ್ತಾ, ಮರಗಳಲ್ಲಿ ಮಕ್ಕಳನ್ನು ಕಾಣುತ್ತಾ ಬಂದೆವು. ಇಂದು ಎಪ್ಪತ್ತು ವರ್ಷಗಳಷ್ಟು ಹಿಂದಿನ ಮರಗಳಿವೆ. ಮರಗಳನ್ನು ಮಕ್ಕಳಾಗಿ, ದೇಶದ ಜನರನ್ನೇ ನನ್ನ ಬಂಧುಗಳ ಹಾಗೆ ಕಾಣುತ್ತಿದ್ದೇನೆ. ಎಲ್ಲರಿಗೂ ದೇವರು ಒಳ್ಳೆಯದು ಮಾಡಲಿ – ಸಾಲು ಮರದ ತಿಮ್ಮಕ್ಕ[/quote]

ಎಲ್ಲವೂ ನಗರ ಕೇಂದ್ರಿತ ಚಟುವಟಿಕೆಗಳಾಗುತ್ತಿರುವ ದಿನಗಳಲ್ಲಿ ಸ್ಥಳಿಯ ಪ್ರತಿಭೆಗಳನ್ನು ಗುರುತಿಸಿ ಅವಕಾಶ ಕೊಡುವುದು ದೊಡ್ಡ ಕೆಲಸ. ಮಕ್ಕಳಿಗೆ ಬೇಕಿರುವುದು ಅವಕಾಶವೇ ಹೊರತು ಬಹುಮಾನವಲ್ಲ. ಕಲೆ, ಸಾಹಿತ್ಯವಿರುವುದು ಸ್ವರ್ಧೆಗಷ್ಟೇ ಅಲ್ಲ. ಅದರ ಮೂಲಕ ನಾವು ಇನ್ನಷ್ಟು ಮಾನವೀಯರಾಗುವುದು ಹೇಗೆ, ಸಮಾಜಶೀಲತೆಯೆಡೆಗೆ ಹೊರಳುವುದು ಹೇಗೆ ಎಂಬುದನ್ನು ಅರಿಯಬೇಕಿದೆ. ಅದು ಒಂದು ಮೌಲ್ಯವಾಗಿ ಬದುಕಿನುದ್ದಕ್ಕೂ ನಮ್ಮನ್ನು ಪೊರೆಯುತ್ತದೆ ಎಂದರು..

ಆಧುನಿಕ ಜಗತ್ತಿಗೆ ತೆರೆದುಕೊಂಡ ಮೇಲೆ ಮೊಬೈಲ್, ಫೇಸ್ಬುಕ್, ವಾಟ್ಸಪ್ ಎಲ್ಲವೂ ಬೇಕು ಆದರೆ ಅದಕ್ಕೊಂದು ಮಿತಿ ಇರಬೇಕು. ಭ್ರಮಾಲೋಕದ ಸಾಮಾಜಿಕ ತಾಣಗಳು ನಿಜ ಜೀವನದ ಸುಖ-ದುಃಖಗಳಿಂದ ನಮ್ಮನ್ನು ವಿಮಖರನ್ನಾಗಿಸುತ್ತಿದೆ. ಇದರ ಬಗ್ಗೆ ಜಾಗೃತರಾಗುತ್ತಾ ನಿಜ ಜೀವನದಿಂದ ಸ್ಫೂರ್ತಿ ಪಡೆಯೋಣ ಎಂದ ಅವರು ಸುದೃಡ ದೇಹ ಹೊಂದಿದರಷ್ಟೇ ಸಾಲದು, ಸುದೃಡ ಮನಸ್ಸನ್ನು ಹೊಂದುವುದು ಅಗತ್ಯ. ಸುದೃಡ ಮನಸ್ಸಿಗಾಗಿ ಕಲೆ, ಸಾಹಿತ್ಯ, ಸಂಗೀತ, ಸಿನೆಮಾ, ಜನರೊಂದಿಗಿನ ಪ್ರೀತಿ ಎಲ್ಲವೂ ಬೇಕು. ದುಡ್ಡಿನ ಹಂಗಿಲ್ಲದ ಸ್ವರ್ಗ ಕಲೆಯಲ್ಲಿದೆ. ಇಂತಹ ಕಲೆಗಳ ಮೂಲಕ ಚಿಂತನೆಗೆ ಗ್ರಾಸ ಒದಗಿಸುವಂತಹ ಕುಸುಮಾಂಜಲಿಯಂತಹ ಕಾರ್ಯಕ್ರಮಗಳು ಇನ್ನಷ್ಟು ನಡೆಯಬೇಕಿದೆ ಎಂದರು. (ಕುಂದಾಪ್ರ ಡಾಟ್ ಕಾಂ)

ಸಾಲು ಮರದ ತಿಮ್ಮಕ್ಕ ಅವರಿಗೆ ಕುಸುಮಾಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಕುಸುಮಾ ಗೂಪ್ ಪ್ರವರ್ತಕ ನಳಿನ್‌ಕುಮಾರ್ ಶೆಟ್ಟಿ ಅವರ ತಂದೆ ತಾಯಿ ಕುಸುಮಾವತಿ ಶೆಟ್ಟಿ ಹಾಗೂ ಸುಧಾಕರ ಶೆಟ್ಟಿ, ಮಡದಿ ಪ್ರೀತಿ ನಳಿನ್‌ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ಗಾನಕುಸುಮ ಸ್ವರ್ಧೆ ವಿದ್ಯಾರ್ಥಿಗಳಿಗೆ ಗಾನಕುಸುಮ ಪ್ರಶಸ್ತಿಯುನ್ನು ಪ್ರದಾನ ಮಾಡಲಾಯಿತು. ಕುಸುಮಾಂಜಲಿಯ ಚಾನೆಲ್ ಪಾರ್ಟ್‌ನರ್ ಕೇಮ್ ಸಂಸ್ಥೆಯ ರಿತೇಶ್ ಕಲ್ಯಾಣಪುರ, ಪ್ಲೆಸೆಂಟ್ ಕುಂದಾಪುರದ ಅಬ್ದುಲ್ ಬಶೀರ್, ಬಂಟ್ ಸೋಲಾರ್ ಬೈಂದೂರು ಮ್ಯಾನೆಜರ್ ಪ್ರತಾಪ್ ಶೆಟ್ಟಿ ಉಪಸ್ಥಿತರಿದ್ದರು. ಕುಸುಮಾ ಗೂಪ್ ಪ್ರವರ್ತಕ ನಳಿನ್‌ಕುಮಾರ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. (ಕುಂದಾಪ್ರ ಡಾಟ್ ಕಾಂ)

ಗಾನ ಕುಸುಮ ವಿಜೇತ ಹಾಗೂ ವೃತ್ತಿಪರ ಕಲಾವಿದರಿಂದ ಸುಮಧುರ ಗೀತೆಗಳ ‘ಸಂಗೀತ ಸಂಧ್ಯಾ’ ಸಂಗೀತ ಕಾರ್ಯಕ್ರಮ, ನೃತ್ಯನಿಕೇತನ ಕೊಡವೂರು ತಂಡದಿಂದ ನೃತ್ಯ ವೈಭವ, ಕುಸುಮಾಂಜಲಿ ಸ್ವಾಗತ ನೃತ್ಯ, ಹಿನ್ನೆಲೆ ಗಾಯಕಿ ಸಂಗೀತಾ ಬಾಲಚಂದ್ರ ಮತ್ತು ತಂಡದಿಂದ ವೈವಿಧ್ಯಮಯ ಸಂಗೀತ ಕಾರ್ಯಕ್ರಮ, ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಮತ್ತು ತಂಡದಿಂದ ಯಕ್ಷರೂಪಕ ಜರುಗಿತು.

 

Exit mobile version